ಕರ್ನಾಟಕ

karnataka

ETV Bharat / entertainment

ಅಮಿತಾಭ್​, ಐಶ್ವರ್ಯಾ, ಶಾರುಖ್​​​ ಡ್ಯಾನ್ಸ್ ವಿಡಿಯೋ ವೈರಲ್​​; ಅಭಿಮಾನಿಗಳಿಂದ ಪ್ರೀತಿಯ ಮಳೆ - ಐಶ್ವರ್ಯಾ

ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಕಾರ್ಯಕ್ರಮದಲ್ಲಿ ಬಾಲಿವುಡ್​ ತಾರೆಯರು ಡ್ಯಾನ್ಸ್ ಮಾಡಿದ್ದು, ವಿಡಿಯೋಗಳು ವೈರಲ್​ ಆಗುತ್ತಿವೆ.

Amitabh, Aishwarya, Shah Rukh dance
ಅಮಿತಾಭ್​, ಐಶ್ವರ್ಯಾ, ಶಾರುಖ್​​​ ಡ್ಯಾನ್ಸ್

By ETV Bharat Karnataka Team

Published : Dec 16, 2023, 11:46 AM IST

ಶುಕ್ರವಾರ ರಾತ್ರಿ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಜರುಗಿತು. ಬಾಲಿವುಡ್​ ಖ್ಯಾತನಾಮರ ಮಕ್ಕಳು ಮತ್ತು ಮೊಮ್ಮಕ್ಕಳು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ನಿನ್ನೆಯ ಸಮಾರಂಭಕ್ಕೆ ಸಿನಿ ತಾರೆಯರು ಸಾಕ್ಷಿಯಾಗಿದ್ದರು.

ಅಮಿತಾಭ್​ ಬಚ್ಚನ್ ಅವರ ಮೊಮ್ಮಗಳು, ಅಭಿಷೇಕ್​​ ಬಚ್ಚನ್​ ಮತ್ತು ಐಶ್ವರ್ಯಾ ರೈ ಬಚ್ಚನ್​​​ ಪುತ್ರಿ ಆರಾಧ್ಯ ಬಚ್ಚನ್, ಕಿಂಗ್​ ಖಾನ್​ ಶಾರುಖ್​​ ಕಿರಿ ಪುತ್ರ ಅಬ್ರಾಮ್​​ ಖಾನ್, ಕರಣ್ ಜೋಹರ್ ಅವರ ಇಬ್ಬರು ಮಕ್ಕಳು, ಕರೀನಾ ಕಪೂರ್ ಖಾನ್ ಅವರ ಮಗ ತೈಮೂರ್ ಅಲಿ ಖಾನ್ ಮತ್ತು ಶಾಹಿದ್ ಕಪೂರ್ ಅವರ ಇಬ್ಬರು ಮಕ್ಕಳು ಸೇರಿದಂತೆ ಹಲವರು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ನಿನ್ನೆ ನಡೆದ ವಾರ್ಷಿಕ ಕಾರ್ಯಕ್ರಮಕ್ಕೆ ಈ ಎಲ್ಲಾ ತಾರೆಯರು ಸಾಕ್ಷಿಯಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋಗಳು ವೈರಲ್​ ಆಗುತ್ತಿದೆ.

ನಿನ್ನೆ ರಾತ್ರಿ ನಡೆದ ಈ ಸಮಾರಂಭದಲ್ಲಿ ಬಾಲಿವುಡ್​ನ ಬಹುತೇಕ ತಾರೆಯರು ಒಂದೇ ಸೂರಿನಡಿ ಕಾಣಿಸಿಕೊಂಡರು. ಶಾರುಖ್ ಖಾನ್ ಮುದ್ದಿನ ಮಗ ಅಬ್ರಾಮ್ ಖಾನ್, ಅಭಿಷೇಕ್ ಐಶ್ವರ್ಯಾ ಪುತ್ರಿ ಆರಾಧ್ಯ ಬಚ್ಚನ್ ಮತ್ತು ಕರೀನಾ ಕಪೂರ್ ಖಾನ್ ಪುತ್ರ ತೈಮೂರ್ ಅಲಿ ಖಾನ್ ವೇದಿಕೆಯಲ್ಲಿ ಮಿಂಚು ಹರಿಸಿದ್ದು, ಇವರ ವಿಡಿಯೋಗಳೂ ಕೂಡ ಆನ್​ಲೈನ್​ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಅದ್ಧೂರಿ ಈವೆಂಟ್​ನ ಕೊನೆಯಲ್ಲಿ ಶಾರುಖ್ ಖಾನ್ ಅವರ ಓಂ ಶಾಂತಿ ಓಂ ಚಿತ್ರದ ಸೂಪರ್‌ ಹಿಟ್ 'ದೀವಾನ್​​​​ಗಿ'ಗೆ ಬಾಲಿವುಡ್​​ ತಾರೆಗಳು ನೃತ್ಯ ಮಾಡಿದ್ದು, ಈ ವಿಡಿಯೋ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ಮಕ್ಕಳ ಶಾಲಾ ಸಮಾರಂಭಕ್ಕೆ ಸಾಕ್ಷಿಯಾದ ಬಚ್ಚನ್​, ಖಾನ್​ ಕುಟುಂಬಸ್ಥರು: ವಿಡಿಯೋ ನೋಡಿ

ವೇದಿಕೆಯಲ್ಲಿ ಮಕ್ಕಳಿದ್ದರೆ, ವೀಕ್ಷಕರ ಸ್ಥಾನದಲ್ಲಿದ್ದ ಪೋಷಕರು (ಬಾಲಿವುಡ್​​ ತಾರೆಯರು ಸೇರಿ) ಶಾರುಖ್ ಸಾಂಗ್​ಗೆ ಮೈ ಕುಣಿಸಿ ಎಂಜಾಯ್​ ಮಾಡಿದ್ದಾರೆ. ಒಂದೇ ಫ್ರೇಮ್​ನಲ್ಲಿ ಅಮಿತಾಭ್​ ಬಚ್ಚನ್​, ಶಾರುಖ್​ ಖಾನ್​​, ಐಶ್ವರ್ಯಾ ರೈ ಬಚ್ಚನ್​​, ಅಭಿಷೇಕ್​ ಬಚ್ಚನ್​​ ಕಾಣಿಸಿಕೊಂಡಿದ್ದು, ವಿಡಿಯೋಗಳು ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ:ಹೈದರಾಬಾದ್​ನಲ್ಲಿ 'ಸಲಾರ್​'ನ ಮೊದಲ ಟಿಕೆಟ್ ಖರೀದಿಸಿದ ಬಾಹುಬಲಿ ನಿರ್ದೇಶಕ ರಾಜಮೌಳಿ

ಐಶ್ವರ್ಯಾ ರೈ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಕೆಲ ಸಮಯಗಳಿಂದ ಹರಡುತ್ತಿದೆ. ಆದ್ರೆ ನಟಿ ಆಗಾಗ್ಗೆ ಪ್ರಮುಖ ಈವೆಂಟ್​ಗಳಲ್ಲಿ ಪತಿ ಅಭಿಷೇಕ್ ಮತ್ತು ಮಾವ ಅಮಿತಾಭ್ ಬಚ್ಚನ್ ಅವರೊಂದಿಗಿನ ಕಾಣಿಸಿಕೊಳ್ಳುವ ಮೂಲಕ ಈ ವದಂತಿ ಹಬ್ಬಿಸುವವರ ಬಾಯ್ ಮುಚ್ಚಿಸುತ್ತಿದ್ದಾರೆ. ಪತಿ, ಮಾವನೊಟ್ಟಿಗೆ ಐಶ್ವರ್ಯಾ ರೈ ಬಚ್ಚನ್​ ಕುಣಿದಿದ್ದು, ಎಲ್ಲವೂ ಸರಿ ಇರುವಂತೆ ತೋರುತ್ತಿದೆ.

ABOUT THE AUTHOR

...view details