ಕರ್ನಾಟಕ

karnataka

ETV Bharat / entertainment

ಅಮೀರ್ ಖಾನ್ ತಾಯಿ ಜೀನತ್ ಹುಸೇನ್​​​​ಗೆ ಹೃದಯಾಘಾತ..ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ - ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಜೂನ್‌ನಲ್ಲಿ ಅಮೀರ್ ಖಾನ್​ ತಾಯಿಯ ಹುಟ್ಟುಹಬ್ಬವನ್ನು ಇಡೀ ಕುಟುಂಬದೊಂದಿಗೆ ಆಚರಿಸಿದ್ದರು. ಆಚರಣೆಯ ಹಲವಾರು ಚಿತ್ರ ಮತ್ತು ವಿಡಿಯೊಗಳು ವೈರಲ್ ಆಗಿದ್ದವು. ವಿಡಿಯೋವೊಂದರಲ್ಲಿ ಅಮೀರ್ ಅವರ ತಾಯಿ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸುತ್ತಿರುವ ದೃಶ್ಯವಿದೆ.

Aamir Khan's mother Zeenat Hussein suffers heart attack
ಅಮೀರ್ ಖಾನ್ ತಾಯಿ ಜೀನತ್ ಹುಸೇನ್ ಹೃದಯಾಘಾತ..ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ

By

Published : Oct 31, 2022, 8:58 AM IST

ಮುಂಬೈ (ಮಹಾರಾಷ್ಟ್ರ): ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ತಾಯಿ ಜೀನತ್ ಹುಸೇನ್ ಇತ್ತೀಚೆಗೆ ಹೃದಯಾಘಾತವಾಗಿತ್ತು. ಈ ಸಂಬಂಧ ಅಮೀರ್​ ತಾಯಿ ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಅಮೀರ್ ಅವರ ತಾಯಿ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಅವರ ನಿಕಟ ಮೂಲಗಳು ತಿಳಿಸಿವೆ. ಅಮೀರ್ ತಮ್ಮ ತಾಯಿಯೊಂದಿಗೆ ಪಂಚಗನಿ ನಿವಾಸದಲ್ಲಿ ಇದ್ದಾಗ ಅವರಿಗೆ ಹೃದಯಾಘಾತಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಮೀರ್ ಅವರ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಜೂನ್‌ನಲ್ಲಿ ಅಮೀರ್ ಖಾನ್​ ತಮ್ಮ ತಾಯಿಯ ಹುಟ್ಟುಹಬ್ಬವನ್ನು ಇಡೀ ಕುಟುಂಬದೊಂದಿಗೆ ಆಚರಿಸಿದ್ದರು. ಆಚರಣೆಯ ಹಲವಾರು ಚಿತ್ರ ಮತ್ತು ವಿಡಿಯೊಗಳು ವೈರಲ್ ಆಗಿದ್ದವು. ವಿಡಿಯೋವೊಂದರಲ್ಲಿ ಅಮೀರ್ ಅವರ ತಾಯಿ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸುತ್ತಿರುವ ದೃಶ್ಯವಿದೆ. ಅಮೀರ್ ಅವರ ಮಾಜಿ ಪತ್ನಿ ಕಿರಣ್ ರಾವ್ ಮತ್ತು ಅವರ ಮಗ ಆಜಾದ್ ಕೂಡ ಅಮೀರ್​​ ತಾಯಿಯ ಹುಟ್ಟಿದ ಹಬ್ಬದ ಆಚರಣೆಲ್ಲಿ ಭಾಗಿಯಾಗಿದ್ದರು.

ಅಮೀರ್​ ಖಾನ್​​ ಕರೀನಾ ಕಪೂರ್ ಖಾನ್ ಜೊತೆಗೆ ಲಾಲ್ ಸಿಂಗ್ ಚಡ್ಡಾದಲ್ಲಿ ಅಮೀರ್ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಅಷ್ಟೇನು ಸದ್ದು ಮಾಡುವಲ್ಲಿ ವಿಫಲವಾಗಿದೆ. ಚಿತ್ರ ಬಿಡುಗಡೆಯ ಸಮಯದಲ್ಲಿ ಸಾಕಷ್ಟು ವಿವಾದಗಳಿಗೂ ಈ ಚಿತ್ರ ಸಿಲುಕಿತ್ತು.

ಇದನ್ನು ಓದಿ:ನೇರಳೆ ಬಣ್ಣದ ಸೀರೆಯಲ್ಲಿ ತೇಜಸ್ವಿ ಪ್ರಕಾಶ್​ ಮಿಂಚಿಂಗ್​.. ಕಣ್ಣು ಕುಕ್ಕುವ ಸೌಂದರ್ಯ ಫೋಟೋಗಳಲ್ಲಿ ಅನಾವರಣ

ABOUT THE AUTHOR

...view details