ಬಾಲಿವುಡ್ ಲವ್ ಬರ್ಡ್ಸ್ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ಈ ಹಿಂದೆ ವರದಿಯಾಗಿತ್ತು. ಫರಾ ಖಾನ್ ಜೊತೆಗೆ ಜಲಕ್ ದಿಖ್ಲಾ ಜಾ ಶೋನಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಿರುವ ನಟಿ ಮಲೈಕಾ ಅರೋರಾ, ಇತ್ತೀಚಿನ ಸಂಚಿಕೆಯಲ್ಲಿ ಮರುಮದುವೆ ಬಗ್ಗೆ ಸುಳಿವು ನೀಡಿದ್ದರು. ಮಾಜಿ ಪತಿ ಅರ್ಬಾಜ್ ಖಾನ್ ಕೂಡ ಇತ್ತೀಚೆಗಷ್ಟೇ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರೊಂದಿಗೆ ಮದುವೆ ಆಗಿದ್ದು, ಅದರ ಬೆನ್ನಲ್ಲೇ ಮಲೈಕಾ ಅರೋರಾ ಮಾತನಾಡಿದ್ದರು.
ಆದ್ರೆ ಮಲೈಕಾ-ಅರ್ಜುನ್ ನಡುವೆ ಬಿರುಕು ವದಂತಿ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದು, ಊಹಾಪೋಹಗಳಿಗೆ ಈ ಪ್ರೇಮಪಕ್ಷಿಗಳು ತೆರೆ ಎಳೆದಿದ್ದಾರೆ. ಮಲೈಕಾ ಅವರು ಗೆಳೆಯ ಅರ್ಜುನ್ ಕಪೂರ್ ಜೊತೆಗೆ ತಮ್ಮ ಸ್ನೇಹಿತೆ ಕರಿಷ್ಮಾ ಕರಮಚಂದಾನಿ ಅವರ ಪ್ರಿ ವೆಡ್ಡಿಂಗ್ ಸೆಲೆಬ್ರೇಶನ್ನಲ್ಲಿ ಭಾಗಿಯಾಗಿದ್ದು, ಫೋಟೋ-ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕರಿಷ್ಮಾ ಕರಮಚಂದಾನಿ ಅವರ ಪ್ರಿ ವೆಡ್ಡಿಂಗ್ ಸೆಲೆಬ್ರೇಶನ್ನಲ್ಲಿ ಬಾಲಿವುಡ್ನ ಹಲವರು ಕಾಣಿಸಿಕೊಂಡಿದ್ದಾರೆ. ನಟಿ ಸೋನಂ ಕಪೂರ್, ಅರ್ಜುನ್ ಅವರ ಸಹೋದರಿ ಅಂಶುಲಾ ಕಪೂರ್, ನಿರ್ಮಾಪಕಿ ರಿಯಾ ಕಪೂರ್, ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಆವಂತಿಕಾ ಮಲಿಕ್ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಫೋಟೋದಲ್ಲಿ ಮಲೈಕಾ ಅರೋರಾ, ಅರ್ಜುನ್ ಕಪೂರ್, ವಧು ಮತ್ತು ಹೆಸರಾಂತ ಫ್ಯಾಷನ್ ಡಿಸೈನರ್ ಅರ್ಪಿತಾ ಮೆಹ್ತಾ ಸೇರಿದಂತೆ ಕೆಲವರು ಕಾಣಿಸಿಕೊಂಡಿದ್ದಾರೆ.