ಕರ್ನಾಟಕ

karnataka

ETV Bharat / entertainment

ನೈಜ ಘಟನೆ ಆಧಾರಿತ ಅಂಬುಜಾ ಸಿನಿಮಾದಲ್ಲಿ‌ ನಟಿ ಶುಭಾಪೂಂಜಾ.. ಟೀಸರ್ ರಿಲೀಸ್ - ambuja movie details

ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ನಟಿ ರಜಿನಿ ಹಾಗೂ ನಟಿ ಶುಭಾ ಪೂಂಜಾ ಮುಖ್ಯ ಭೂಮಿಕೆಯಲ್ಲಿರುವ ಅಂಬುಜಾ ಸಿನಿಮಾ ಟೀಸರ್ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.

ambuja movie teaser release
ಅಂಬುಜಾ ಟೀಸರ್ ರಿಲೀಸ್

By

Published : Oct 12, 2022, 1:03 PM IST

Updated : Oct 12, 2022, 5:10 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳು ಮಾತ್ರವಲ್ಲದೇ ಬಿಗ್​​ಬಾಸ್​ ಸ್ಪರ್ಧಿಯಾಗಿ ತನ್ನದೇ ಛಾಪು ಮೂಡಿಸಿರುವ ನಟಿ ಶುಭಾ ಪೂಂಜಾ. ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಹಾಗೂ ಶುಭಾ ಪೂಂಜಾ ಮುಖ್ಯ ಭೂಮಿಕೆಯಲ್ಲಿರುವ ಅಂಬುಜಾ ಸಿನಿಮಾ ಟೀಸರ್ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ನೈಜ ಘಟನೆ ಆಧಾರಿತ ಈ ಚಿತ್ರದ ಟೀಸರ್ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟಿಸಿದೆ.

ಈ ಚಿತ್ರದಲ್ಲಿ ಅಂಬುಜಾ ಪಾತ್ರ ಮಾಡಿರುವ ನಟಿ ಶುಭಾಪೂಂಜಾ ಮಾತನಾಡಿ, ನಿರ್ದೇಶಕ ಶ್ರೀನಿ ಅವರ ಜೊತೆ ಈ ಹಿಂದೆ 'ಕೆಲವು ದಿನಗಳ ನಂತರ ಸಿನಿಮಾ' ಮಾಡಿದ್ದೆ. ಇದೀಗ ಅವರ ನಿರ್ದೇಶನದಲ್ಲಿ ಕ್ರೈಂ ಥ್ರಿಲ್ಲರ್ ಹಾರರ್ ಸಿನಿಮಾ ಅಂಬುಜಾದಲ್ಲಿ ನಟಿಸುತ್ತಿದ್ದೇನೆ. ಚಿತ್ರದಲ್ಲಿ ಕ್ರೈಂ ರಿಪೋರ್ಟರ್ ಪಾತ್ರ ನಿರ್ವಹಿಸಿದ್ದೇನೆ. ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬರಲಿದೆ ಎಂದರು.

ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ

ನಟಿ ರಜಿನಿ ಮಾತನಾಡಿ, ಸಿನಿಮಾ ಹಾಗು ನನ್ನ ಪಾತ್ರ ವಿಶೇಷವಾಗಿದೆ. ಲಂಬಾಣಿ ವೇಷ ಭೂಷಣ ಕಣ್ಣಿಗೆ ಹಬ್ಬ. ಚಿತ್ರೀಕರಣ ಸಮಯದಲ್ಲಿ ಅವರು ನಮ್ಮನ್ನು ಸ್ವೀಕರಿಸಿದ ರೀತಿ ಎಲ್ಲವೂ ತುಂಬಾ ಖುಷಿ ಕೊಟ್ಟಿದೆ. ಲಂಬಾಣಿ ಪಾತ್ರ ಅಂದಾಗ ನನಗೆ ಬಹಳ ಖುಷಿ ಆಯ್ತು. ಮೊದಲ ದಿನ ಲಂಬಾಣಿ ವೇಷ ಹಾಕಿಕೊಂಡಾಗ ತಲೆ ತುಂಬಾ ನೋವಾಗುತ್ತಿತ್ತು. ಆಮೇಲೆ ಹೊಂದಿಕೊಂಡೆ. ಸಿನಿಮಾದ ಹಾಡು ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಂದರು.

ಕಥೆ ಬರೆದಾಗ ಚೆನ್ನಾಗನಿಸಿತು. ಗೊತ್ತಿಲ್ಲದ ವಿಚಾರಗಳನ್ನು ಜನರಿಗೆ ಹೇಳಬೇಕು ಎನಿಸಿತು. ಅದಾದ ಮೇಲೆ ನಿರ್ದೇಶಕ ಶ್ರೀನಿ ಅವರ ಜೊತೆ ಮಾತನಾಡಿದಾಗ ಅವರು ಕೂಡ ಕಥೆ ತುಂಬಾ ಚೆನ್ನಾಗಿದೆ ಎಂದರು. ಸಿನಿಮಾ ಮಾಡೋಣ ಎಂದು ನಿರ್ಧರಿಸಿದೆ. ಸಿನಿಮಾಗೆ ಬೇಕಾದ ಪಾತ್ರಗಳು ಸಿಗುತ್ತಾ ಹೋಯಿತು. ಫೈನಲಿ ಒಂದೊಳ್ಳೆ ಸಿನಿಮಾ ರೆಡಿಯಾಗಿದೆ. ಪ್ರೇಕ್ಷಕರು ನೋಡಿ ಹರಸಬೇಕು. ‘ಅಂಬುಜಾ’ ಪಕ್ಕಾ ಕಮರ್ಶಿಯಲ್ ಸಿನಿಮಾವಾಗಿದ್ರೂ ಕೂಡ ಮನೆಮಂದಿಯೆಲ್ಲ ಕುಳಿತು ನೋಡಬಹುದು ಎಂದು ಚಿತ್ರದ ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಅಂಬುಜಾ ಚಿತ್ರತಂಡ

ಶುಭಾ ಪೂಂಜಾ, ಪದ್ಮಜಾ ರಾವ್, ರಜಿನಿ, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಪ್ರಿಯಾಂಕ ಕಾಮತ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಗದಗ, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಸ್.ಕೆ ಸಿನಿಮಾಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದ್ದು, ವಿಜಯ್ ಎಂ ಕುಮಾರ್ ಸಂಕಲನ, ಮುರಳೀಧರ್ ಎಂ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ:ಚಿತ್ರೀಕರಣ ಮುಗಿಸಿ ಟ್ರೈಲರ್ ಬಿಡುಗಡೆಗೆ ಸಜ್ಜಾದ 'ಗೌಳಿ'

ಈ ಚಿತ್ರವನ್ನು ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣ ಮಾಡಿದ್ದು, ಮೊದಲ ಬಾರಿ ಸಿನಿಮಾ ನಿರ್ಮಾಣ ಸಾಹಸಕ್ಕೆ ಕೈ ಹಾಕಿರುವ ಇವರು ಚಿತ್ರಕ್ಕೆ ಕಥೆ, ಸಾಹಿತ್ಯ ಕೂಡ ಬರೆದಿದ್ದಾರೆ. ಶ್ರೀನಿ ಹನುಮಂತರಾಜು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಟೀಸರ್ ನಿಂದ ಗಮನ ಸೆಳೆಯುತ್ತಿರೋ ಅಂಬುಜಾ ಸಿನಿಮಾವನ್ನು ಶೀಘ್ರದಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.

Last Updated : Oct 12, 2022, 5:10 PM IST

ABOUT THE AUTHOR

...view details