ಕರ್ನಾಟಕ

karnataka

ETV Bharat / entertainment

Pushpa 2: ಅಲ್ಲು ಅರ್ಜುನ್ ದಿನಚರಿ.. ರಾಷ್ಟ್ರಪ್ರಶಸ್ತಿ ವಿಜೇತ ನಟನ ಮನೆ, ಪುಷ್ಪ ಸೆಟ್​​ ಹೇಗಿದೆ ನೋಡಿ.. - Allu Arjun awards

Allu Arjun: ಇನ್​ಸ್ಟಾಗ್ರಾಮ್​ ತಂಡ ನಟ ಅಲ್ಲು ಅರ್ಜುನ್​​ ಅವರ ಐಷಾರಾಮಿ ಮನೆ ಮತ್ತು ಶೂಟಿಂಗ್​​ ಸೆಟ್​ನ ವಿಡಿಯೋವನ್ನು ಹಂಚಿಕೊಂಡಿದೆ.

Allu Arjun
ಅಲ್ಲು ಅರ್ಜುನ್

By ETV Bharat Karnataka Team

Published : Aug 31, 2023, 7:50 PM IST

Updated : Aug 31, 2023, 8:29 PM IST

ದಕ್ಷಿಣ ಚಿತ್ರರಂಗದ ಸ್ಟೈಲಿಶ್ ಐಕಾನ್​​ ಅಲ್ಲು ಅರ್ಜುನ್. ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿರುವ ಅಲ್ಲು ಅತ್ಯುತ್ತಮ ನಟ ವಿಭಾಗದಲ್ಲಿ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ. ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಪುಷ್ಪ' ಶೂಟಿಂಗ್​ ಭರದಿಂದ ಸಾಗುತ್ತಿದೆ.

2 ರಾಷ್ಟ್ರಪ್ರಶಸ್ತಿ:ಸುಕುಮಾರ್ - ಅಲ್ಲು ಅರ್ಜುನ್​ ಕಾಂಬೋ ಮತ್ತೊಮ್ಮೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿರುವ ಈ ಜೋಡಿ ಈಗ ಡಬಲ್ ಸಂಭ್ರಮದಲ್ಲಿ ತೇಲುತ್ತಿದೆ. 2 ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಗಳು ''ಪುಷ್ಪ-ದಿ ರೈಸ್'' ಸಿನಿಮಾಗೆ ಒಲಿದು ಬಂದಿವೆ. ಅಲ್ಲು ಅರ್ಜುನ್​​ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ತಮ್ಮದಾಗಿಸಿಕೊಂಡ್ರೆ, ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಪಾಲಾಗಿದೆ.

ಪುಷ್ಪ-2 ಕೋಟೆಗೆ ಕರೆದೊಯ್ದ ಪುಷ್ಪರಾಜ್​:ಯಶಸ್ಸಿನಲೆಯಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಸರ್​ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಪುಷ್ಪ ಸೀಕ್ವೆಲ್ ಶೂಟಿಂಗ್ ಎಲ್ಲಿಗೆ ಬಂತು? ಅಪ್​ಡೇಟ್ಸ್ ಕೊಡಿ ಎನ್ನುತ್ತಿದ್ದವರಿಗೆ ಬಹುಬೇಡಿಕೆ ನಟ ನೇರವಾಗಿ ಪುಷ್ಪ-2 ಕೋಟೆ ಒಳಗೆ ಕರೆದುಕೊಂಡು ಹೋಗಿದ್ದಾರೆ.

ಪುಷ್ಪ-2 ಶೂಟಿಂಗ್​​ ಸೆಟ್ ವಿಡಿಯೋ: ಬಹುನಿರೀಕ್ಷಿತ ಪುಷ್ಪ-2 ಸಿನಿಮಾದ ಸಣ್ಣ ಟೀಸರ್ ಸಖತ್​ ಕ್ರೇಜ್​​ ಕ್ರಿಯೇಟ್ ಮಾಡಿತ್ತು. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಟ್ಟು ಇನ್ಮುಂದೆ ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದ. ಇದೀಗ ಪುಷ್ಪ-2 ಶೂಟಿಂಗ್​​ ಸೆಟ್ ವಿಡಿಯೋ​ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ.

ಅಲ್ಲು ಅರ್ಜುನ್​ ದಿನಚರಿ: ನಟ ತಮ್ಮ ದಿನ ದಿನಚರಿ ಹೇಗಿರುತ್ತೆ ಅನ್ನೋದನ್ನು 2 ನಿಮಿಷ 20 ಸೆಕೆಂಡ್ ವಿಡಿಯೋ ತುಣುಕಿನಲ್ಲಿ ರಿವೀಲ್ ಮಾಡಿದ್ದಾರೆ. ಸೆಲೆಬ್ರಿಟಿ ಲೈಫ್ ಸ್ಟೈಲ್ ಹೇಗಿರುತ್ತೆ? ಅವ್ರ ಮನೆ, ಕಾರು, ಗಾರ್ಡನ್, ಕ್ಯಾರವಾನ್ ಹೀಗೆ ನಾನಾ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಕ್ಯೂರಿಯಾಸಿಟಿಯಂತೂ ಪ್ರತೀ ಅಭಿಮಾನಿಗಳಲ್ಲೂ ಇರುತ್ತೆ. ಆ ಕುತೂಹಲ ತಣಿಸುವ ಕೆಲಸ ಮಾಡಿದ್ದಾರೆ ಮಿಸ್ಟರ್ ಬನ್ನಿ.

ನಟನ ಮನೆಗೆ ಇನ್​ಸ್ಟಾಗ್ರಾಂ ತಂಡ ಭೇಟಿ: ಈ ಸ್ಪೆಷಲ್ ವಿಡಿಯೋ ಮಾಡಲು ಜನಪ್ರಿಯ ಸಾಮಾಜಿಕ ಜಾಲತಾಣ​ ಇನ್​​​ಸ್ಟಾಗ್ರಾಂ ಸಾಥ್ ಕೊಟ್ಟಿದೆ. ಇನ್​ಸ್ಟಾಗ್ರಾಂ ತಂಡ ಅಲ್ಲು ಅರ್ಜುನ್ ಮನೆಗೆ ಭೇಟಿ ಕೊಟ್ಟು, ಅವರ ದಿನನಿತ್ಯದ ಅಪ್​ಡೇಟ್​ಗಳನ್ನು ಶೂಟ್ ಮಾಡಿ ಅಭಿಮಾನಿಗಳ ಎದುರು ತಂದಿದೆ. ಈ ವಿಶೇಷ ಗೌರವಕ್ಕೆ ಪಾತ್ರವಾಗಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಹೆಗ್ಗಳಿಕೆಗೂ ಅಲ್ಲು ಅರ್ಜುನ್​ ಪಾತ್ರರಾಗಿದ್ದಾರೆ.

ಅಲ್ಲು ಅರ್ಜುನ್​ ಬಂಗ್ಲೆ, ಶೂಟಿಂಗ್​ ಸೆಟ್​: ನಟ ಅಲ್ಲು ಅರ್ಜುನ್​ ಬೆಳಗ್ಗೆ ಎದ್ದ ತಕ್ಷಣ ತಮ್ಮ ಮನೆಯ ಗಾರ್ಡನ್​​ನಲ್ಲಿ ಧ್ಯಾನ ಮಾಡ್ತಾರೆ. ಕಾಫಿ ಕುಡಿತು ಫ್ರೆಶ್​ ಆಗ್ತಾರೆ. ತಮ್ಮ ಕಾಸ್ಟ್ಲಿ ಕಾರ್ ಹತ್ತಿ ಶೂಟಿಂಗ್​ ಸೆಟ್​ಗೆ ತೆರಳುತ್ತಾರೆ. ತಮ್ಮ ಮುದ್ದಿನ ಮಕ್ಕಳಿಗೆ ವಿಡಿಯೋ ಕಾಲ್ ಮಾಡ್ತಾರೆ. ಎಲ್ಲೇ ಇರಲಿ, ಎಷ್ಟೇ ಬ್ಯುಸಿ ಇರಲಿ ಅಲ್ಲು ಮಿಸ್ ಮಾಡದೇ ಮಧ್ಯಾಹ್ನ 1 ಗಂಟೆಗೆ ಮಕ್ಕಳಿಗೆ ವಿಡಿಯೋ ಕಾಲ್ ಮಾಡೋದನ್ನು ಮಾತ್ರ ಮರೆಯೋದಿಲ್ಲ. ವಿಡಿಯೋ ಕಾಲ್ ಮಾಡ್ತಾ ಹೈದರಾಬಾದನ ರಾಮೋಜಿ ಫಿಲ್ಮ್ ಸಿಟಿ ತಲುಪ್ತಾರೆ. ಅಲ್ಲಿ ಫ್ಯಾನ್ಸ್ ಭೇಟಿ ಮಾಡಿ ಶೂಟಿಂಗ್ ಸೆಟ್​ಗೆ ಹಾಜರಾಗ್ತಾರೆ. ಶೂಟಿಂಗ್ ಸೆಟ್​ಗೆ ಎಂಟ್ರಿ ಕೊಡ್ತಿದ್ದಂತೆ ಸಿನಿಮಾಗೆ ಸಂಬಂಧಿಸಿದ ಕಾಸ್ಟ್ಯೂಮ್, ಪ್ರಾಪರ್ಟಿಸ್ ಆಯ್ಕೆ ಮಾಡಿಕೊಂಡ ನಂತರ ತಮ್ಮ ಕ್ಯಾರವಾನ್​ಗೆ ಪ್ರವೇಶಿಸುತ್ತಾರೆ. ನಿರ್ದೇಶಕ ಸುಕುಮಾರ್ ಅಲ್ಲು ಅವರನ್ನು ಮೀಟ್ ಆಗಿ ಹಗ್ ಮಾಡಿ ಆ ದಿನದ ಸೀನ್ಸ್ ಬಗ್ಗೆ ವಿವರಿಸುತ್ತಾರೆ. ನಂತರ ಮೇಕಪ್ ಹಾಕಿ ಕ್ಯಾಮರಾ ಎದುರು ಪ್ರತ್ಯಕ್ಷರಾಗ್ತಾರೆ.

ಅಲ್ಲು-ಸುಕುಮಾರ್ ಬಾಂಡಿಂಗ್​:ಅಲ್ಲು ಅರ್ಜುನ್ ಹಾಗೂ ಸುಕುಮಾರ್ ನಡುವೆ ಉತ್ತಮ ಬಾಂಡಿಂಗ್ ಇದೆ. ಸುಕುಮಾರ್ ಸಿನಿಮಾ ಜರ್ನಿ ಶುರುವಾಗಿದ್ದು ಅಲ್ಲು ಅರ್ಜುನ್​ ಜೊತೆಗೆ. ಆರ್ಯ ಸಿನಿಮಾ ಮೂಲಕ ಹಿಟ್ ಜೋಡಿಯಾದ ಅಲ್ಲು - ಸುಕುಮಾರ್​ ಆರ್ಯ 2 ಸಿನಿಮಾ ಮಾಡಿ ಇದೀಗ ಪುಷ್ಪ-2ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ನನ್ನ ಮೊದಲ ಹೀರೋ ಎಂದಿರುವ ಸುಕುಮಾರ್, ನನ್ನ ಉತ್ತಮ ಗೆಳೆಯ ಅಂತಾನೂ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:'ದಂತಕಥೆ' ಸಿನಿಮಾಗೆ ಕ್ರೇಜಿಸ್ಟಾರ್ ಸಾಥ್; ಫಸ್ಟ್ ಲುಕ್‌ ರಿಲೀಸ್

'ಪುಷ್ಪ: ದಿ ರೂಲ್ಸ್' ಸಿನಿಮಾ ಶೂಟಿಂಗ್ ಹೈದರಾಬಾದ್​ನ ಪ್ರಸಿದ್ಧ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದ ಸಾಗ್ತಿದೆ. ಈ ನಡುವೆ ಸೀಕ್ವೆಲ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿರುವ ವಿಚಾರ ಕೂಡ ಹೊರಬಿದ್ದಿದೆ. ಹಿಂದಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟವಾಗಿದೆಯಂತೆ. ಸುಮಾರು 200 ಕೋಟಿ ರೂ.ಗೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.

ಇದನ್ನೂ ಓದಿ:ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾದಲ್ಲಿ ಚಿನ್ನಾರಿಮುತ್ತ: ಜೋಗ್ 101 ಫಸ್ಟ್ ಲುಕ್ ರಿವೀಲ್​

Last Updated : Aug 31, 2023, 8:29 PM IST

ABOUT THE AUTHOR

...view details