ಕರ್ನಾಟಕ

karnataka

ETV Bharat / entertainment

ದೀಪಾವಳಿಗೆ 'ಪುಷ್ಪ 2' ಅಪ್​ಡೇಟ್ ನೀಡಿದ ಅಲ್ಲು ಅರ್ಜುನ್​; ಫ್ಯಾನ್ಸ್​ ಫುಲ್​ ಖುಷ್​ - ಈಟಿವಿ ಭಾರತ ಕನ್ನಡ

Pushpa 2 update: ಅಲ್ಲು ಅರ್ಜುನ್​ ನಟನೆಯ ಬಹುನಿರೀಕ್ಷಿತ 'ಪುಷ್ಪ 2: ದಿ ರೂಲ್​' ಚಿತ್ರದ ಹೊಸ ಅಪ್​ಡೇಟ್​ ಹೀಗಿದೆ..

Allu Arjun starrer Pushpa 2 movie update
ದೀಪಾವಳಿಗೆ 'ಪುಷ್ಪ 2' ಅಪ್​ಡೇಟ್ ನೀಡಿದ ಅಲ್ಲು ಅರ್ಜುನ್​; ಫ್ಯಾನ್ಸ್​ ಫುಲ್​ ಖುಷ್​

By ETV Bharat Karnataka Team

Published : Nov 12, 2023, 11:04 PM IST

ಭಾರತೀಯ ಚಿತ್ರರಂಗ ಬಹು ಕಾತರದಿಂದ ಕಾಯುತ್ತಿರುವ ಚಿತ್ರ 'ಪುಷ್ಪ 2: ದಿ ರೂಲ್​'. 2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ 'ಪುಷ್ಪ: ದಿ ರೈಸ್​'ನ ಮುಂದುವರೆದ ಭಾಗ ಇದಾಗಿದೆ. ಟಾಲಿವುಡ್​ ಸ್ಟಾರ್​ ನಿರ್ದೇಶಕ ಸುಕುಮಾರನ್​ ಮತ್ತು ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಮತ್ತೊಮ್ಮೆ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡಿಯೋದಕ್ಕೆ ಸಜ್ಜಾಗಿದ್ದಾರೆ. 2024ರ ಆಗಸ್ಟ್​ 15, ಸ್ವಾತಂತ್ರೋತ್ಸವದಂದು ಸಿನಿಮಾ ತೆರೆ ಕಾಣಲಿದೆ. ಇದೀಗ ದೀಪಾವಳಿ ಉಡುಗೊರೆಯಾಗಿ ಅಭಿಮಾನಿಗಳಿಗೆ ಚಿತ್ರತಂಡ ಸಿನಿಮಾದ ಅಪ್​ಡೇಟ್​ ನೀಡಿದೆ.

ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ 'ಮಂಗಳವಾರಂ' ಚಿತ್ರದ ಪ್ರೀ-ರಿಲೀಸ್​ ಸಮಾರಂಭದಲ್ಲಿ ಭಾಗವಹಿಸಿದ್ದ ಅಲ್ಲು ಅರ್ಜುನ್​, ತಮ್ಮ ಅಭಿಮಾನಿಗಳ ಕೋರಿಕೆಯಂತೆ ಮುಂಬರುವ ಯೋಜನೆಗಳ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ಫ್ಯಾನ್ಸ್​ ಫುಲ್​ ಖುಷಿಯಾಗಿದ್ದಾರೆ. ಇಷ್ಟು ದಿನ ಅಭಿಮಾನಿಗಳು 'ಪುಷ್ಪ 2: ದಿ ರೂಲ್​' ಅಪ್​ಡೇಟ್​ಗಾಗಿ ಕಾಯುತ್ತಿದ್ದರು. ಈ ಬಗ್ಗೆ ಅಲ್ಲು ಅರ್ಜುನ್​ ಮಾಹಿತಿ ನೀಡಿರುವುದು ಫ್ಯಾನ್ಸ್​ಗೆ ಸಂತೋಷ ನೀಡಿದೆ.

"ಈಗ ಪುಷ್ಪ 2 ಚಿತ್ರೀಕರಣ ಮುಗಿಸುವ ತಯಾರಿಯಲ್ಲಿದ್ದೇನೆ. ಸದ್ಯ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದ ದೃಶ್ಯಗಳಿಗಾಗಿ ನನ್ನ ಕೈಗಳಿಗೆ ಪಾರಾಣಿ (ಮೆಹಂದಿ) ಮತ್ತು ಉಗುರುಗಳಿಗೆ ನೇಲ್​ ಪಾಲಿಷ್​ ಹಚ್ಚಿದ್ದೇನೆ. ಮುಂಬರುವ ಪುಷ್ಪ 2 ನಿಮ್ಮ ಕಲ್ಪನೆಗೂ ಮೀರಿದ್ದು. ಇದಿಷ್ಟು ಈಗಿನ ಅಪ್​ಡೇಟ್​" ಎಂದು ತಿಳಿಸಿದ್ದಾರೆ. ಜೊತೆಗೆ 'ಮಂಗಳವಾರಂ' ಚಿತ್ರದ ಬಗ್ಗೆ ಕೆಲವು ಮಾತುಗಳನ್ನು ಹಂಚಿಕೊಂಡರು. ತಂಡಕ್ಕೆ ಶುಭಹಾರೈಸಿದರು.

ಇದನ್ನೂ ಓದಿ:ಸನ್ನಿ ಡಿಯೋಲ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ: 'ಪುಷ್ಪ' ನಿರ್ಮಾಪಕರು!

ಪುಷ್ಪ 2 ದಿ ರೂಲ್ ಸಿನಿಮಾಗೆ ಸುಕುಮಾರ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇದು 2021ರ ಬ್ಲಾಕ್​ಬಸ್ಟರ್ ಹಿಟ್ ಪುಷ್ಪ ದಿ ರೈಸ್​ ಚಿತ್ರದ ಮುಂದುವರಿದ ಭಾಗ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಎರ್ನೇನಿ ಮತ್ತು ವೈ ರವಿಶಂಕರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ದೇವಿಶ್ರೀಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಅಲ್ಲು ಅರ್ಜುನ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಚಿತ್ರದಲ್ಲಿ ಸುನೀಲ್, ಫಹಾದ್ ಫಾಜಿಲ್, ಅನಸೂಯ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಪುಷ್ಪ 2 ಶೂಟಿಂಗ್​.. ​'ಪುಷ್ಪ 2: ದಿ ರೂಲ್​' ಶೂಟಿಂಗ್​ ಭರದಿಂದ ಸಾಗುತ್ತಿದೆ. ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆಯೇ ಸೀಕ್ವೆಲ್​ ರೈಟ್ಸ್​ ಭಾರಿ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟವಾಗಿದೆಯಂತೆ. ಪುಷ್ಪ ದಿ ರೈಸ್​ ಬಾಲಿವುಡ್​ ಅಂಗಳದಲ್ಲಿ ದೊಡ್ಡ ಹಿಟ್​ ಕಂಡಿತ್ತು. ಅಲ್ಲು ಆಕ್ಟಿಂಗ್​, ಸುಕುಮಾರ್​ ಟೇಕಿಂಗ್​ಗೆ ಹಿಂದಿ ಪ್ರೇಕ್ಷಕರು ಫಿದಾ ಆಗಿದ್ದರು. ಬಾಲಿವುಡ್​ ಚಿತ್ರಗಳಿಗೆ ಟಕ್ಕರ್​ ಕೊಟ್ಟು ಪುಷ್ಪ ತಲೆ ಎತ್ತಿ ನಿಂತಿತ್ತು. ಇದೀಗ 'ಪುಷ್ಪ 2: ದಿ ರೂಲ್​' 200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್​ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್​ ಸೇಲ್​ ಆಗಿದೆ ಎಂಬ ಮಾಹಿತಿ ಸಿನಿ ಬಜಾರ್​ನಲ್ಲಿ ಓಡಾಡುತ್ತಿದೆ.

ಇದನ್ನೂ ಓದಿ:ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪುಷ್ಪ 2, ಸಲಾರ್​ ಶೂಟಿಂಗ್​​: ರಶ್ಮಿಕಾ ಸಿನಿಮಾ ಸಾಂಗ್​ನಲ್ಲಿ ಸಾವಿರ ಡ್ಯಾನ್ಸರ್ಸ್!!

ABOUT THE AUTHOR

...view details