ಕರ್ನಾಟಕ

karnataka

ETV Bharat / entertainment

ಬಿಡುಗಡೆಗೂ ಮುನ್ನವೇ 1,000 ಕೋಟಿ ರೂ ಕಲೆಕ್ಷನ್​ ಮಾಡಿದ ಪುಷ್ಪ-2? - ಈಟಿವಿ ಭಾರತ ಕನ್ನಡ

ಬಿಡುಗಡೆಗೂ ಮುನ್ನ ಪುಷ್ಪ-2 ಸಿನಿಮಾ ಥಿಯೇಟ್ರಿಕಲ್ ರೈಟ್ಸ್ ಮೂಲಕ 1000 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂಬ ವದಂತಿ ಕ್ರಿಯೇಟ್​ ಆಗಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

pushpa
ಪುಷ್ಪ-2

By

Published : Mar 9, 2023, 2:23 PM IST

ಪುಷ್ಪ- ದಿ ರೈಸ್​ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಹಿಟ್​ ಆಗಿದೆ. 2021 ರಲ್ಲಿ ತೆರೆಕಂಡ ಈ ಸಿನಿಮಾ ಬ್ಲಾಕ್​ ಬಸ್ಟರ್ ಎನಿಸಿಕೊಂಡಿದೆ.​ ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಕೆಂಪು ಚಂದನದ ಕಳ್ಳಸಾಗಣೆ ಕಥಾಧಾರಿತ ಸಿನಿಮಾವಾಗಿದ್ದು, ಪ್ರೇಕ್ಷಕರನ್ನು ಬಹುವಾಗಿ ರಂಜಿಸಿದೆ. ಅದರಲ್ಲೂ ಅಲ್ಲು ಅರ್ಜುನ್​ ಸ್ಟೈಲ್​, ಲುಕ್​, ಡೈಲಾಗ್ಸ್​ ಅಭಿಮಾನಿಗಳನ್ನು ತುಸು ಹೆಚ್ಚೇ ಆಕರ್ಷಿಸಿತು.

ಯಾವುದೇ ಪ್ರಚಾರವಿಲ್ಲದೇ ಬಿಡುಗಡೆಯಾದ ಈ ಚಿತ್ರ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಪುಷ್ಪ ಟಾಲಿವುಡ್​ ಮಾತ್ರವಲ್ಲ, ಬಾಲಿವುಡ್​ನಲ್ಲೂ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಪುಷ್ಪರಾಜ್​ ಅಲಿಯಾಸ್​ ಪುಷ್ಪ ಆಗಿ ಅಲ್ಲು ಅರ್ಜುನ್​ ಯಾರಿಗೂ ಬಗ್ಗೋದೆ ಇಲ್ಲ ಅಂತ ಅಬ್ಬರಿಸಿದ್ರೇ, ಶ್ರೀ ವಲ್ಲಿಯಾಗಿ ರಶ್ಮಿಕಾ ಮಂದಣ್ಣ ಸಖತ್​ ಸೊಂಟ ಬಳುಕಿಸಿ ಸಿನಿ ಪ್ರಿಯರ ಹೃದಯವನ್ನು ಗೆದ್ದರು. ಇದೀಗ ಸೂಪರ್​ ಹಿಟ್​ ಪುಷ್ಪದ ಮುಂದುವರಿದ ಭಾಗ ಪುಷ್ಪ- 2 ತಯಾರಾಗುತ್ತಿದೆ. ಈಗಾಗಲೇ ಹೈದರಾಬಾದ್​ ಸೇರಿದಂತೆ ಹಲವೆಡೆ ಶರವೇಗದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

ಇದನ್ನೂ ಓದಿ:'ಚಳಿ, ಕೇಕ್, ಮುದ್ದಾಟ..': ಸ್ಯಾಂಡಲ್​ವುಡ್ ಸಿಂಡ್ರೆಲಾ ಬರ್ತ್​ಡೇ ಸೆಲೆಬ್ರೇಷನ್ ಫೋಟೋ

ಜೊತೆಗೆ ಪಾರ್ಟ್​ 2 ನಲ್ಲಿ ಹಳೆ ಪಾತ್ರಗಳ ಜೊತೆ ಹೊಸ ಪಾತ್ರಗಳು ಕೂಡ ಇರಲಿವೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಬಹುಭಾಷಾ ನಟಿ ಸಾಯಿ ಪಲ್ಲವಿ ಕೂಡ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರ ಹತ್ತು ದಿನಗಳ ಕಾಲ್​ ಶೀಟ್​ ಕೂಡ ನಿಗದಿಯಾಗಿದೆ. ಇದು ಸಿನಿಮಾದ ಹೈಪ್​ ಹೆಚ್ಚಿಸಿದೆ. ಅಲ್ಲದೇ ಏಪ್ರಿಲ್​ 8 ರಂದು ಅಲ್ಲು ಅರ್ಜುನ್​ ಹುಟ್ಟುಹಬ್ಬವಿದ್ದು, ಆ ದಿನದಂದೇ ಪುಷ್ಪ 2 ಟೀಸರ್​ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಬಿಡುಗಡೆಗೂ ಮುನ್ನವೇ 1000 ಕೋಟಿ ಕಲೆಕ್ಷನ್: ಇಷ್ಟೆಲ್ಲಾ ವದಂತಿಗಳ ನಡುವೆ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡುತ್ತಿದೆ. ಪುಷ್ಪ 2 ಬಿಡುಗಡೆಗೂ ಮುನ್ನವೇ ಸಿನಿಮಾ ಕೋಟಿ ಕೋಟಿ ಸಂಗ್ರಹಿಸಿದೆ. ಈಗಾಗಲೇ ​ಥಿಯೇಟ್ರಿಕಲ್ ರೈಟ್ಸ್ ಮೂಲಕ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ ಈ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇನ್ನು ಪುಷ್ಪ 1 ಚಿತ್ರವು ವಿಶ್ವದಾದ್ಯಂತ ಸುಮಾರು 400 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. 2021 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಪುಷ್ಪ ಕೂಡ ಒಂದಾಗಿದೆ. ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ಮತ್ತು ಮುತ್ತಂ ಶೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸುನೀಲ್, ಫಹಾದ್ ಫಾಜಿಲ್, ಅನಸೂಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಸಾಮಾಜಿಕ ಜಾಲತಾಣದಲ್ಲಿ ಹಾಟ್​ ಟಾಪಿಕ್​ ಆದ ರಶ್ಮಿಕಾ - ಗಿಲ್​ ಸುದ್ದಿ..! ಕಾರಣ ಇಲ್ಲಿದೆ

ABOUT THE AUTHOR

...view details