ಹೈದರಾಬಾದ್‌ನಲ್ಲಿ ನಡೆದ ಸನ್‌ಬರ್ನ್ ಉತ್ಸವದಲ್ಲಿ (Sunburn fest ival) ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಧೂಳೆಬ್ಬಿಸಿದ್ದಾರೆ. ಉತ್ಸವದಲ್ಲಿ ಈ ಬಹುಬೇಡಿಕೆ ತಾರೆ ಭಾಗಿಯಾಗಿದ್ದು, ಜನರು ಆಶ್ಚರ್ಯಚಕಿತರಾದರು.
ಉತ್ಸವದ ವೇದಿಕೆಯಲ್ಲಿ ಅಲ್ಲು ಅರ್ಜುನ್ ಅವರು ಡಿಜೆ ಮಾರ್ಟಿನ್ ಗ್ಯಾರಿಕ್ಸ್ (DJ Martin Garrix) ಜೊತೆ ಸೇರಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ನಟ ಅಲ್ಲು ಅರ್ಜುನ್ ತಮ್ಮ ಪುಷ್ಪ ಚಿತ್ರದ ಊ ಅಂಟಾವಾ ಸೂಪರ್ ಹಿಟ್ ಹಾಡಿಗೆ ಸಖತ್ ಸ್ಟೆಪ್ ಹಾಕಿದರು. ಮಾರ್ಟಿನ್ ಗ್ಯಾರಿಕ್ಸ್ ಮತ್ತು ಅಲ್ಲು ಅರ್ಜುನ್ ಡ್ಯಾನ್ಸ್ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಅಲ್ಲು ಅರ್ಜುನ್ ಕಪ್ಪು ಟೀ ಶರ್ಟ್, ಕಪ್ಪು ಕಾರ್ಗೋ ಪ್ಯಾಂಟ್, ಕ್ಯಾಪ್ ಧರಿಸಿ ಸಿಂಪಲ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಇವರ ಎಂಟ್ರಿಗೆ ಅಭಿಮಾನಿಗಳ ಸಿಳ್ಳೆ, ಚಪ್ಪಾಳೆ ಸ್ವಾಗತ ಕೋರಿತು. ಬಳಿಕ ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಜೊತೆ ಸೇರಿ ವೇದಿಕೆ ಮೇಲೆ ಧೂಳೆಬ್ಬಿಸಿದರು. ಊ ಅಂಟಾವಾ ಮಾಮ.. ಊ ಊ ಅಂಟಾವಾ ಹಾಡಿಗೆ ಮತ್ತಷ್ಟು ಮೆರುಗು ತಂದರು. ಅಲ್ಲು ಅರ್ಜುನ್ ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಜೊತೆ ಸೇರಿ ಭರ್ಜರಿ ಸ್ಟೆಪ್ಸ್ ಹಾಕಿದರು.
ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಜೊತೆಗಿನ ಎರಡು ಫೋಟೋಗಳನ್ನು ನಟ ಅಲ್ಲು ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫನ್ ನೈಟ್, ಊ ಅಂಟಾವಾ ವಿಥ್ ಡಿಜೆ ಮಾರ್ಟಿನ್ ಗ್ಯಾರಿಕ್ಸ್, ಹೈದರಾಬಾದ್ ತಗ್ಗೆದೆಲೆ ಎಮದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಸನ್‌ಬರ್ನ್ ಉತ್ಸವದ ಮೂರು ಪೋಸ್ಟ್‌ಗಳನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ಗಳು ಸಖತ್ ಪಾರ್ಟಿ ಮೂಡ್ನಿಂದ ಕೂಡಿದೆ.