ಕರ್ನಾಟಕ

karnataka

ETV Bharat / entertainment

'ತೆಲುಗು ಇಂಡಿಯನ್ ಐಡಲ್ 2'ರ ವಿಜೇತೆ ಸೌಜನ್ಯ ಗುಣಗಾನ ಮಾಡಿದ ಅಲ್ಲು ಅರ್ಜುನ್​​ - Allu Arjun on Soujanya Bhagavathula

ಸಂಗೀತ ಸ್ಪರ್ಧೆ 'ತೆಲುಗು ಇಂಡಿಯನ್ ಐಡಲ್ 2'ರ ವಿಜೇತರಾಗಿ ಸೌಜನ್ಯ ಭಾಗವತುಲಾ ಹೊರಹೊಮ್ಮಿದ್ದಾರೆ.

Telugu Indian Idol 2 winner Soujanya
'ತೆಲುಗು ಇಂಡಿಯನ್ ಐಡಲ್ 2'ರ ವಿಜೇತೆ ಸೌಜನ್ಯ

By

Published : Jun 6, 2023, 12:54 PM IST

ಟಾಲಿವುಡ್ ಸೂಪರ್​​ ಸ್ಟಾರ್ ಅಲ್ಲು ಅರ್ಜುನ್ ಅವರು ತೆಲುಗು 'ಇಂಡಿಯನ್ ಐಡಲ್ 2'ರ ವಿಜೇತರಾಗಿ ಸೌಜನ್ಯ ಭಾಗವತುಲಾ (Soujanya Bhagavathula) ಹೆಸರನ್ನು ಘೋಷಿಸಿದ್ದಾರೆ. ಸ್ಥಳೀಯ ಒಟಿಟಿ ವೇದಿಕೆಯಾದ 'ಆಹಾ' (aha) ಪ್ರಸ್ತುತಪಡಿಸಿದ ರೋಮಾಂಚನಕಾರಿ ಸಂಗೀತ ಕಾರ್ಯಕ್ರಮವು ತನ್ನ ಪ್ರದರ್ಶನ ಮತ್ತು ಪ್ರತಿಭೆಗಳಿಂದ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸಫಲವಾಗಿದೆ. ಪುಷ್ಪ ಸ್ಟಾರ್​ ಅಲ್ಲು ಅರ್ಜುನ್ ಗ್ರ್ಯಾಂಡ್ ಫಿನಾಲೆಗೆ ಸಾಕ್ಷಿಯಾಗಿ, ಕೊನೆಯಲ್ಲಿ ವಿಜೇತರನ್ನು ಘೋಷಿಸಿದರು.

ರೋಮಾಂಚಕ ಮತ್ತು ಸ್ಪರ್ಧಾತ್ಮಕವಾಗಿದ್ದ 'ತೆಲುಗು ಇಂಡಿಯನ್ ಐಡಲ್ 2'ರ ಗ್ರ್ಯಾಂಡ್​ ಫಿನಾಲೆಯಲ್ಲಿ ವಿಶಾಖಪಟ್ಟಣಂನ ಸೌಜನ್ಯ ಭಾಗವತುಲಾ ವಿಜೇತರಾಗಿ ಹೊರಹೊಮ್ಮಿದರು. ಅದ್ಭುತ ದನಿಯಲ್ಲಿ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದರು. ಜಯರಾಮ್ ಮತ್ತು ಲಾಸ್ಯ ಪ್ರಿಯಾ ಅವರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದರು.

ಸಂಗೀತ ಮಾಂತ್ರಿಕರಾದ ಎಸ್.ಎಸ್ ಥಮನ್, ಗೀತಾ ಮಾಧುರಿ ಮತ್ತು ಕಾರ್ತಿಕ್ ಅವರನ್ನು ಒಳಗೊಂಡ ಕಾರ್ಯಕ್ರಮದ ತೀರ್ಪುಗಾರರ ಸಮಿತಿಯು ಪ್ರತಿಭಾವಂತರಿಗೆ ಮಾರ್ಗದರ್ಶನ ನೀಡುವಲ್ಲಿ ಮತ್ತು ತಿರ್ಪು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಾರ್ಯಕ್ರಮದ ನಿರೂಪಕರಾಗಿ, ಹೇಮಾ ಚಂದ್ರ ಅವರು ಗಮನ ಸೆಳೆದರು. ಪ್ರೇಕ್ಷಕರಿಗೆ ಆಕರ್ಷಕ ಮತ್ತು ಸ್ಪರ್ಧಾತ್ಮಕ ಮನರಂಜನೆಯನ್ನು ಈ ಕಾರ್ಯಕ್ರಮ ಕೊಟ್ಟಿದೆ.

ಆಡಿಷನ್‌ನಲ್ಲಿ 10,000ಕ್ಕೂ ಹೆಚ್ಚು ಮಂದಿ ಪ್ರದರ್ಶನದ ಟಾಪ್ 12 ಸ್ಥಾನಗಳಿಗಾಗಿ ಸ್ಪರ್ಧಿಸಿದ್ದರು. ನ್ಯೂಜೆರ್ಸಿಯ ಶ್ರುತಿ, ಹೈದರಾಬಾದ್‌ನ ಜಯರಾಮ್, ಸಿದ್ದಿಪೇಟೆಯ ಲಾಸ್ಯ ಪ್ರಿಯಾ, ಹೈದರಾಬಾದ್‌ನ ಕಾರ್ತಿಕೇಯ ಮತ್ತು ವಿಶಾಖಪಟ್ಟಣದ ಸೌಜನ್ಯ ಭಾಗವತುಲಾ ಅವರು ಟಾಪ್ 5ರೊಳಗೆ ಸ್ಥಾನ ಪಡೆದಿದ್ದಾರೆ. ಸೌಜನ್ಯ ಭಾಗವತುಲಾ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಸೌಜನ್ಯ ಭಾಗವತುಲಾ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ ಪ್ಯಾನ್​ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್, "ಇಂತಹ ಬೇಡಿಕೆಯ ಸ್ಪರ್ಧೆಯಲ್ಲಿ ಭಾಗವಹಿಸುವಾಗ ಎರಡು ವರ್ಷದ ಮಗುವಿನ ತಾಯಿಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ನಾನು ಸೌಜನ್ಯ ಅವರ ಸಮರ್ಪಣೆ ಮತ್ತು ಬದ್ಧತೆಯನ್ನು ಗೌರವಿಸುತ್ತೇನೆ'' ಎಂದು ತಿಳಿಸಿದರು.

ಇದನ್ನೂ ಓದಿ:ಪ್ರಕೃತಿ ಮಡಿಲಲ್ಲಿ 'ಚಂದನ'ದ ಗೊಂಬೆ ನಿವಿ.. ಗೌನ್​ ಧರಿಸಿದ್ರೆ ಥೇಟ್ ಬಾರ್ಬಿ ಡಾಲ್​​

"ಎಲ್ಲರಿಗೂ ಅವರ ಕೆಲಸಕ್ಕೆ ಬೆಂಬಲ ಬೇಕು. ನಾನು ಕುಟುಂಬದಿಂದ ಸಿಗುವ ಬೆಂಬಲದ ಪ್ರಾಮುಖ್ಯತೆಯನ್ನು ನಂಬುತ್ತೇನೆ. ಸೌಜನ್ಯ ಅವರು ತಮ್ಮ ಪತಿಯ ಪ್ರೀತಿ ಮತ್ತು ಬೆಂಬಲವನ್ನು ಹೊಂದಿದ್ದು, ಅದೃಷ್ಟಶಾಲಿಯಾಗಿದ್ದಾರೆ. ಪ್ರತಿಯೊಬ್ಬ ಪತಿಯು ತಮ್ಮ ಪತ್ನಿಯನ್ನು ಬೆಂಬಲಿಸಬೇಕು ಮತ್ತು ಪ್ರತಿ ಮಹಿಳೆಯರು ತಮ್ಮ ಗುರುತನ್ನು ಸೃಷ್ಟಿಸಲು ಶ್ರಮಿಸಬೇಕು. ಸೌಜನ್ಯ ಅವರ ಯಶಸ್ಸು ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಅವರ ಸಂಗೀತದ ಪಯಣದಲ್ಲಿ ಸದಾ ಯಶಸ್ಸನ್ನು ಕಾಣಲಿ ಎಂದು ನಾನು ಬಯಸುತ್ತೇನೆ" ಎಂದು ಅಲ್ಲು ತಿಳಿಸಿದರು.

ಇದನ್ನೂ ಓದಿ:ಹಿಂದೆಂದೂ ನಡೆಯದಿರುವಂತೆ 'ಆದಿಪುರುಷ್​​' ಪ್ರೀ ರಿಲೀಸ್ ಸಮಾರಂಭಕ್ಕೆ ತಯಾರಿ: ಏನಿದರ ವಿಶೇಷತೆ

ವಿಜೇತೆ ಸೌಜನ್ಯ ಮಾತನಾಡಿ, ಅಲ್ಲು ಅರ್ಜುನ್ ಅವರಿಂದ ಪ್ರಶಸ್ತಿ ಸ್ವೀಕರಿಸುವ ಕನಸು ನೆರವೇರಿದೆ. ಅವರ ಪ್ರೋತ್ಸಾಹ ಮತ್ತು ಮೆಚ್ಚುಗೆಯ ಮಾತುಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಈ ಅದ್ಭುತ ಪ್ರಯಾಣವು ನನಗೆ ಪರಿಶ್ರಮದ, ಪ್ರಯತ್ನದ ಶಕ್ತಿಯನ್ನು ಕಲಿಸಿದೆ. 'ಆಹಾ'ಗೆ (ಒಟಿಟಿ ವೇದಿಕೆ) ನಾನು ಚಿರಋಣಿಯಾಗಿದ್ದೇನೆ ಎಂದು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ಈ ವೇದಿಕೆಯನ್ನು ಒದಗಿಸಿದ ಕಾರ್ಯಕ್ರಮದ ಹಿಂದೆ ಹಲವರ ಶ್ರಮ ಅಡಗಿದೆ. ಈ ಗೆಲುವು ನನ್ನದಲ್ಲ, ನನ್ನನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಸೇರಿದೆ. ನನ್ನ ಸಂಗೀತ ಪಯಣದಲ್ಲಿ ಶ್ರೇಷ್ಠತೆಗಾಗಿ ಶ್ರಮಿಸುತ್ತೇನೆ ಎಂದು ಸೌಜನ್ಯ ತಿಳಿಸಿದರು.

ABOUT THE AUTHOR

...view details