ಕರ್ನಾಟಕ

karnataka

ETV Bharat / entertainment

ಸಾಕು ನಾಯಿಗಳು ಕಚ್ಚಿದ ಆರೋಪ‌: ನಟ ದರ್ಶನ್, ಮನೆ ಕೆಲಸಗಾರನ ವಿರುದ್ಧ ಎಫ್‌ಐಆರ್‌ ದಾಖಲು - Woman complains against actor Darshan

ಸಾಕು ನಾಯಿಗಳು ಕಚ್ಚಿದ ಆರೋಪ‌ಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಮನೆಯ ಕೆಲಸಗಾರನ ವಿರುದ್ಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ.

Etv Bharat
Etv Bharat

By ETV Bharat Karnataka Team

Published : Nov 1, 2023, 8:42 AM IST

Updated : Nov 1, 2023, 9:26 AM IST

ಬೆಂಗಳೂರು:ನಟ ದರ್ಶನ್ ಮತ್ತು ಮನೆಯ ಕೆಲಸಗಾರನ ಮೇಲೆ ಆರ್‌.ಆರ್.ನಗರದ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ದರ್ಶನ್ ಮನೆಯ ಸಾಕು ನಾಯಿಗಳು ಅಮಿತಾ ಜಿಂದಾಲ್ ಎಂಬ ಮಹಿಳೆಯೊಬ್ಬರಿಗೆ ಕಚ್ಚಿದ ಆರೋಪಕ್ಕೆ ಸಂಬಂಧ ನಾಯಿ ನೋಡಿಕೊಳ್ಳುತ್ತಿದ್ದ ಕೆಲಸಗಾರ ಹಾಗೂ ನಟ ದರ್ಶನ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಅಕ್ಟೋಬರ್ 28ರಂದು ಖಾಸಗಿ ಆಸ್ಪತ್ರೆಯಲ್ಲಿದ್ದ ಕಾರ್ಯಕ್ರಮಕ್ಕೆ ತೆರಳಿದ್ದ ಅಮಿತಾ ಜಿಂದಾಲ್, ನಟ ದರ್ಶನ್ ಮನೆಯ ಮುಂಭಾಗದ ರಸ್ತೆಯ ಖಾಲಿ ಜಾಗದಲ್ಲಿ ತಮ್ಮ ಕಾರನ್ನ ನಿಲ್ಲಿಸಿದ್ದರು. ವಾಪಸ್ ತೆರಳಲು ಕಾರಿನ ಬಳಿ ಬಂದಾಗ ಅಕ್ಕಪಕ್ಕದಲ್ಲಿದ್ದ ಮೂರು ನಾಯಿಗಳನ್ನ ಕಂಡ ಅಮಿತಾ ಅವರು 'ತಾವು ಕಾರಿನ ಬಳಿ ಹೋಗಬೇಕು, ನಾಯಿಗಳನ್ನ ಕರೆದುಕೊಂಡು ಹೋಗಿ' ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿದ್ದ ದರ್ಶನ್​ರ ಮನೆಯ ಕೆಲಸಗಾರ ಕಾರು ಪಾರ್ಕಿಂಗ್ ವಿಚಾರವಾಗಿ ಗಲಾಟೆ ಆರಂಭಿಸಿದ್ದ. ಇಬ್ಬರ ನಡುವಿನ ವಾಗ್ವಾದದ ವೇಳೆ ನಾಯಿಯೊಂದು ಅಮಿತಾರ ಮೇಲೆರಗಿದೆ. ನೆಲಕ್ಕೆ ಬಿದ್ದ ಅವರ ಮೇಲೆ ಮತ್ತೊಂದು ನಾಯಿ ಸಹ ಮೇಲೆರಗಿ ಹೊಟ್ಟೆಯ ಭಾಗಕ್ಕೆ ಕಚ್ಚಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಾಯಿಗಳು ಕಚ್ಚುತ್ತವೆ ಎಂದು ತಿಳಿದಿದ್ದರೂ ಸಹ ನಿಯಂತ್ರಿಸದೇ ಕೆಲಸಗಾರ ಸುಮ್ಮನಿದ್ದನೆಂದು ಆರೋಪಿಸಿರುವ ಅಮಿತಾ ಅವರು, ನಾಯಿಗಳನ್ನ ನೋಡಿಕೊಳ್ಳುತ್ತಿದ್ದ ಕೆಲಸಗಾರ ಹಾಗೂ ಮಾಲೀಕ ದರ್ಶನ್ ವಿರುದ್ಧ ದೂರು ನೀಡಿದ್ದಾರೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಮಡಿಕೇರಿ: ಕಟ್ಟಡ ಕಾಮಗಾರಿ ವೇಳೆ ಬರೆ ಕುಸಿದು ಮೂವರು ಕಾರ್ಮಿಕರು ಸಾವು

Last Updated : Nov 1, 2023, 9:26 AM IST

ABOUT THE AUTHOR

...view details