ಹೈದರಾಬಾದ್: ಪಾಕಿಸ್ತಾನದ ಖ್ಯಾತ ಟಿಕ್ ಟಾಕ್ ತಾರೆ ಹರೀಮ್ ಷಾ ಈ ಹಿಂದೆ ವಿವಾದಕ್ಕೆ ಒಳಗಾಗಿರುವುದು ಹೊಸತೇನಲ್ಲ. ಈ ಬಾರಿ ತನ್ನ ಖಾಸಗಿ ವೀಡಿಯೊ ಸೋರಿಕೆಯೊಂದಿಗೆ ಮತ್ತೆ ಬೆಳಕಿಗೆ ಬಂದಿದ್ದಾರೆ. ವರದಿಗಳ ಪ್ರಕಾರ, ಮಾರ್ಚ್ 1 ರಂದು ತನ್ನ ಸ್ನೇಹಿತರಾದ ಸ್ಯಾಂಡಲ್ ಖಟ್ಟಕ್ ಮತ್ತು ಆಯೆಷಾ ನಾಜ್ ಅವರೊಂದಿಗಿನ ಜಗಳದ ನಂತರ ಆಕೆಯ ಖಾಸಗಿ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ತನ್ನ ಇಮೇಜ್ ಅನ್ನು ಕೆಡಿಸಲು ತನ್ನ ಸ್ನೇಹಿತರು ವೀಡಿಯೊ ಸೋರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಪಖ್ಯಾತಿಗೊಳಿಸುವ ಉದ್ದೇಶದಿಂದ ವೀಡಿಯೊವನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪ:ತನ್ನ ಖಾಸಗಿ ವೀಡಿಯೊ ಆನ್ ಲೈನ್ ನಲ್ಲಿ ಸೋರಿಕೆಯಾದ ನಂತರ ಪಾಕಿಸ್ತಾನಿ ಟಿಕ್ ಟಾಕ್ ತಾರೆ ಪ್ರಚಾರದಲ್ಲಿದ್ದಾರೆ, ಈ ವೀಡಿಯೊ ತುಣುಕಿನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸ್ನಾನಗೃಹವನ್ನು ಹಂಚಿಕೊಂಡಿರುವ ದೃಶ್ಯಗಳಿವೆ. ಇದಾದ ನಂತರ, ಹರೀಮ್ ತನ್ನ ಸ್ನೇಹಿತೆ ಆಯೆಷಾ ನಾಜ್ ಬಗ್ಗೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ ದೂರು ನೀಡಿದಿದ್ದಾರೆ. ಈ ದೂರಿನಲ್ಲಿ ಹರೀಮ್ ನನ್ನನ್ನು ಅಪಖ್ಯಾತಿಗೊಳಿಸುವ ಉದ್ದೇಶದಿಂದ ವೀಡಿಯೊವನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹರೀನ್ ಮತ್ತು ತನ್ನ ಪತಿ ಬಿಲಾಲ್ ಶಾ ನಡುವಿನ ಸಂಬಂಧವನ್ನು ಮುರಿಯುವ ಸಲುವಾಗಿ ಆಯೆಷಾ ತನ್ನ ವೀಡಿಯೊವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.