ಅಲಿಗಢ (ಉತ್ತರ ಪ್ರದೇಶ): ಬಾಲಿವುಡ್ನ ಹಿರಿಯ ನಟ ನಾಸಿರುದ್ದೀನ್ ಶಾ ತಮ್ಮ ಪುತ್ರಿ ಹಿಬಾ ಶಾ ಅವರಿಗೆ ಜನನ ಪ್ರಮಾಣಪತ್ರವನ್ನು ಉತ್ತರ ಪ್ರದೇಶದ ಅಲಿಗಢ ಮಹಾನಗರ ಪಾಲಿಕೆಯು ವಿತರಿಸಿದೆ. 53 ವರ್ಷಗಳ ನಂತರ ಹಿಬಾ ತಮ್ಮ ಜನನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಈ ವಿಷಯ ಕಳೆದ ಮೂರು ತಿಂಗಳಿಂದ ಸಾರ್ವಜನಿಕ ಚರ್ಚೆಗೂ ಒಳಪಟ್ಟಿತ್ತು.
ನಾಸಿರುದ್ದೀನ್ ಶಾ ಅವರ ಮಗಳು 1970ರಲ್ಲಿ ಅಲಿಗಢದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಜನಿಸಿದ್ದರು. ಸುಮಾರು 53 ವರ್ಷಗಳ ನಂತರ ಜನನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜುಲೈ ತಿಂಗಳಲ್ಲಿ ಹಿಬಾ ಶಾ ಜನನ ಪ್ರಮಾಣಪತ್ರ ಪಡೆಯಲು ಸಂಬಂಧಿಕರೊಬ್ಬರ ಮೂಲಕ ಮುನ್ಸಿಪಲ್ ಕಾರ್ಪೊರೇಷನ್‌ಗೆ ಅರ್ಜಿ ಹಾಕಿದ್ದರು. ಆಗ ಪಾಲಿಕೆಯು ಪ್ರಮಾಣಪತ್ರ ನೀಡಲು ಬಲವಾದ ದಾಖಲೆಗಳನ್ನು ಕೇಳಿತ್ತು. ಇದಾದ ಬಳಿಕ ಮತ್ತೊಮ್ಮೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಸಿಎಂಒ (ಮುಖ್ಯ ವೈದ್ಯಾಧಿಕಾರಿ ಕಚೇರಿ) ಮತ್ತು ಎಸ್‌ಡಿಎಂ (ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್) ವರದಿ ಆಧಾರದ ಮೇಲೆ ಜನನ ಪ್ರಮಾಣ ಪತ್ರ ನೀಡಲಾಗಿದೆ.
ಜನನ ಪ್ರಮಾಣ ಪತ್ರ ನೀಡುವ ಮುನ್ನ ನಗರಸಭೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿದೆ. ಆಗಸ್ಟ್‌ನಲ್ಲಿ ಇವುಗಳ ಪರಿಶೀಲನೆಗಾಗಿ ಮುಖ್ಯ ವೈದ್ಯಾಧಿಕಾರಿ ಕಚೇರಿಗೆ ಪತ್ರವನ್ನು ಬರೆಲಾಗಿತ್ತು. ಮುಖ್ಯ ವೈದ್ಯಾಧಿಕಾರಿ ಕಚೇರಿಯು ನಿಯಮಾನುಸಾರ ಜನನ ಪ್ರಮಾಣಪತ್ರ ನೀಡುವಂತೆ ಆದೇಶಿಸಿತ್ತು. ಇದಾದ ನಂತರ ಸೆಪ್ಟೆಂಬರ್‌ನಲ್ಲಿ ಎಸ್‌ಡಿಎಂಗೆ ಈ ಪತ್ರ ತಲುಪಿತ್ತು. ಎಲ್ಲ ವರದಿಗಳನ್ನು ಪರಿಶೀಲಿಸಿ ಜನನ ಪ್ರಮಾಣಪತ್ರವನ್ನು ನೀಡಲು ಮ್ಯಾಜಿಸ್ಟ್ರೇಟ್ ಶಿಫಾರಸು ಮಾಡಿದ್ದಾರೆ.