ಕರ್ನಾಟಕ

karnataka

ETV Bharat / entertainment

Alia Bhatt: ₹3 ಲಕ್ಷದ ಬ್ಯಾಗ್​ ಹಾಕಿಕೊಂಡು ಮುಂಬೈ ಏರ್​ಪೋರ್ಟ್​ನಲ್ಲಿ ಮಿಂಚಿದ ಆಲಿಯಾ ಭಟ್​

ನಟಿ ಆಲಿಯಾ ಭಟ್ ಬ್ರೆಜಿಲ್​ನಿಂದ ಭಾರತಕ್ಕೆ ಮರಳಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ಧರಿಸಿದ್ದ ಮಿನಿ ಬ್ಯಾಗ್​ ಎಲ್ಲರ ಗಮನ ಸೆಳೆಯಿತು.

Alia Bhatt
ಆಲಿಯಾ ಭಟ್​

By

Published : Jun 19, 2023, 3:59 PM IST

ಬಾಲಿವುಡ್​ ನಟಿ ಆಲಿಯಾ ಭಟ್ ತಮ್ಮ ಫ್ಯಾಷನ್​ ಸೆನ್ಸ್​ ಮತ್ತು ಸ್ಟೈಲಿಶ್​ ಅವತಾರದಿಂದ ಮತ್ತೊಮ್ಮೆ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದಾರೆ. ಬ್ರೆಜಿಲ್​ನಿಂದ ಭಾರತಕ್ಕೆ ಮರಳಿದ್ದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಆಲಿಯಾ ತಮ್ಮ ಹಾಲಿವುಡ್ ಚೊಚ್ಚಲ ಚಿತ್ರ 'ಹಾರ್ಟ್ ಆಫ್ ಸ್ಟೋನ್‌'ನ ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಬ್ರೆಜಿಲ್‌ಗೆ ತೆರಳಿದ್ದರು.

ಇನ್​ಸ್ಟಾಗ್ರಾಮ್​ನಲ್ಲಿ ಪಾಪರಾಜಿ ಖಾತೆಯಿಂದ ಹಂಚಿಕೊಂಡಿರುವ ವಿಡಿಯೋದಲ್ಲಿ ಆಲಿಯಾ ಭಟ್​ ಸ್ಟೈಲಿಶ್​ ಆಗಿ ಕಂಡಿದ್ದಾರೆ. ಬಿಳಿ ಗ್ರಾಫಿಕ್ ಟಿ-ಶರ್ಟ್ ಮತ್ತು ಮಾಮ್-ಫಿಟ್ ಜೀನ್ಸ್‌ನ ಮೇಲೆ ಉದ್ದವಾದ ಡೆನಿಮ್ ಜಾಕೆಟ್ ಧರಿಸಿದ್ದರು. ಕಣ್ಣಿಗೆ ಕೂಲಿಂಗ್​ ಗ್ಲಾಸ್​ ಹಾಕಿಕೊಂಡಿದ್ದರು. ಡ್ರೆಸ್​ಗೆ ಮ್ಯಾಚಿಂಗ್​ ಆಗುವಂತೆ ಬಿಳಿ ಸ್ನೀಕರ್ಸ್​ ಹಾಕಿದ್ದರು.

ಆಲಿಯಾ ತನ್ನ ಕೂದಲನ್ನು ಅಚ್ಚುಕಟ್ಟಾಗಿ ಪೋನಿಟೇಲ್‌ ಹಾಕಿದ್ದರು. ಬಿಳಿ ಸ್ಲಿಂಗ್ ಬ್ಯಾಗ್‌ನೊಂದಿಗೆ ತನ್ನ ನೋಟವನ್ನು ಪೂರ್ಣಗೊಳಿಸಿದರು. ಅದು ನೆಟಿಜನ್‌ಗಳ ಗಮನ ಸೆಳೆದಿದೆ. ಮಿನಿ ಬ್ಯಾಗ್​ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಗುಸ್ಸಿಯಿಂದ ಬಂದಿದ್ದು, ಅದರ ಬೆಲೆ 3,68,777 ರೂಪಾಯಿ ಆಗಿದೆ.

ಈ ವಿಡಿಯೋಗೆ ಅನೇಕ ಕಮೆಂಟ್​ಗಳು ಬಂದಿವೆ. ನೆಟ್ಟಿಗರೊಬ್ಬರು, "ನನ್ನ ಒಂದು ವರ್ಷದ ಆದಾಯ ನಿಮ್ಮ ಆ ಬ್ಯಾಗ್​ ಬೆಲೆಯ ಅರ್ಧದಷ್ಟಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, "ನೀವು ನೋಡಲು ತುಂಬಾ ಸುಂದರವಾಗಿದ್ದೀರಿ. ಈ ಔಟ್​ಫಿಟ್​ನಲ್ಲಿ ಮತ್ತಷ್ಟು ಚೆನ್ನಾಗಿ ಕಾಣಿಸುತ್ತಿದ್ದೀರಿ" ಎಂದಿದ್ದಾರೆ. ಇನ್ನೊಬ್ಬರು, "ಲಡ್ಕಿ ಬ್ಯೂಟಿಫುಲ್..ಮಮ್ಮಿ ಲುಕ್ ಕೂಲ್" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಒಂದು ದಿನದ ಅಂತರದಲ್ಲಿ ಶಾಹಿದ್​, ಸಾರಾ​ ಸಿನಿಮಾ ಬಿಡುಗಡೆ; ಬಾಲಿವುಡ್​ನಲ್ಲಿ ಸ್ಟಾರ್​ ಸಿನಿಮಾಗಳ ಘರ್ಷಣೆ

'ಹಾರ್ಟ್ ಆಫ್ ಸ್ಟೋನ್‌'ಟ್ರೇಲರ್​:ಬ್ರೆಜಿಲ್​ನ ಸಾವೊ ಪೌಲೊದಲ್ಲಿ ನಡೆದನೆಟ್​ಫ್ಲಿಕ್ಸ್​​ ಟುಡುಮ್​ 2023ರ ಸಮಾರಂಭದಲ್ಲಿ 'ಹಾರ್ಟ್ ಆಫ್ ಸ್ಟೋನ್' ಚಿತ್ರದ ಟ್ರೇಲರ್​ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಆಲಿಯಾ ಭಟ್​ ಅವರ ಹಾಲಿವುಡ್​ನ ಚೊಚ್ಚಲ ಚಿತ್ರವಾಗಿದೆ. ಇದರಲ್ಲಿ ಗಾಲ್​ ಗಡೋಟ್​ ಮತ್ತು ಜಿಮಿ ಡೊರ್ನನ್ ಕೂಡ ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಗೊಂಡಿರುವ ಟ್ರೇಲರ್​ನಲ್ಲಿ ಆಲಿಯಾ ಭಟ್​ ವಿಲನ್​ ಆಗಿ ಕಂಡಿದ್ದಾರೆ. ಗಾಲ್​ ಗಡೋಟ್​ ಮತ್ತು ಜಿಮಿ ಡೊರ್ನನ್ ಅವರ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. 2.5 ನಿಮಿಷಗಳ ಈ ಟ್ರೇಲರ್‌ನಲ್ಲಿ ಆಲಿಯಾ ಕೇವಲ 5-6 ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಟಲಿ, ಲಂಡನ್ ಮತ್ತು ಲಿಸ್ಬನ್ ಸೇರಿದಂತೆ ಹಲವೆಡೆ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಚಿತ್ರವು ಆಗಸ್ಟ್ 11 ರಿಂದ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಆಗಲಿದೆ.

ಇದನ್ನೂ ಓದಿ:’90 ಬಿಡಿ ಮನೀಗ್ ನಡಿ’.. ನಟ ವೈಜನಾಥ್​ ಬಿರಾದರ್​ರ 500ನೇ ಚಿತ್ರದ ಟ್ರೈಲರ್ ರಿಲೀಸ್.. ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ

ABOUT THE AUTHOR

...view details