ಬಾಲಿವುಡ್ ಸುಂದರ ಜೋಡಿ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್. ಈ ದಂಪತಿಯ ಮಗಳು ರಾಹಾಗೆ ಇಂದು ಜನ್ಮದಿನದ ಸಂಭ್ರಮದ ಸಂಭ್ರಮ. ಫಸ್ಟ್ ಬರ್ತ್ಡೇ ಖುಷಿಯಲ್ಲಿರುವ ಪುಟಾಣಿಗೆ ತಾಯಿ ಆಲಿಯಾ ಭಟ್ ವಿಶೇಷವಾಗಿ ವಿಶ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಬರ್ತ್ಡೇ ಸೆಲೆಬ್ರೇಶನ್ನ ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರಾಹಾ ತನ್ನೆರಡು ಪುಟ್ಟ ಕೈಗಳನ್ನು ಕೇಕ್ ಮೇಲೆ ಇರಿಸಿ ಆನಂದಿಸುತ್ತಿರುವುದನ್ನು ಕಾಣಬಹುದು.
ತಮ್ಮ ಪುಟ್ಟ ರಾಜಕುಮಾರಿಗೆ ಶುಭಾಶಯಗಳನ್ನು ಕೋರಿರುವ ನಟಿ ಆಲಿಯಾ ಭಟ್, "ನಮ್ಮ ಸಂತೋಷ, ನಮ್ಮ ಜೀವನ.. ನಮ್ಮ ಬೆಳಕು. ನಿನ್ನೆ ಮೊನ್ನೆಯಷ್ಟೇ ನಾವು ನಿನಗಾಗಿ ಈ ಹಾಡನ್ನು ನುಡಿಸುತ್ತಿದ್ದೆವು. ನೀನು ನನ್ನ ಹೊಟ್ಟೆಯಲ್ಲಿದ್ದಾಗ ಒದೆಯುತ್ತಿರುವಂತೆ ಭಾಸವಾಗುತ್ತಿತ್ತು. ನಮ್ಮ ಜೀವನದಲ್ಲಿ ನಿಮ್ಮನ್ನು ಹೊಂದಲು ನಾವು ಆಶೀರ್ವದಿಸಿದ್ದೇವೆ. ಹ್ಯಾಪಿ ಬರ್ತ್ಡೇ ಬೇಬಿ ಟೈಗರ್. ನಾವು ನಿನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.
ಆಲಿಯಾ ಭಟ್ 2022ರ ಏಪ್ರಿಲ್ 14 ರಂದು ನಟ ರಣಬೀರ್ ಕಪೂರ್ ಜೊತೆ ಮದುವೆಯಾದರು. 2022ರ ಜೂನ್ ತಿಂಗಳಲ್ಲಿ ತಮ್ಮ ಗರ್ಭಧಾರಣೆ ಘೋಷಿಸಿದರು. ಕಳೆದ ವರ್ಷ ನವೆಂಬರ್ 6 ರಂದು ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಮಗುವಿಗೆ ರಾಹಾ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ:'ಆಲಿಯಾ ಭಟ್ ಪ್ರಬುದ್ಧ ನಟಿ, ನಾನವರ ಅಭಿಮಾನಿ': ವಿವೇಕ್ ಅಗ್ನಿಹೋತ್ರಿ ಗುಣಗಾನ
ಸಿನಿಮಾ ವಿಚಾರ..ಆಲಿಯಾ ಭಟ್ ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಲ್ಲಿ ರಣವೀರ್ ಸಿಂಗ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಥಿಯೇಟರ್ನಲ್ಲಿ ಧೂಳೆಬ್ಬಿಸಿತ್ತು. ಇದರ ಜೊತೆ ಆಲಿಯಾ ಮೊದಲನೇ ಬಾರಿಗೆ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಹಾರ್ಟ್ ಆಫ್ ಸ್ಟೋನ್' ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದಲ್ಲದೇ, ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಮುಂಬರುವ ಚಿತ್ರ 'ಜೀ ಲೇ ಜರಾ'ದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ರಣ್ಬೀರ್ ಕಪೂರ್ ಅವರು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾಹಿದ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಕಬೀರ್ ಸಿಂಗ್ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿರುವ ಎರಡನೇ ಬಾಲಿವುಡ್ ಸಿನಿಮಾವಿದು. ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ರಶ್ಮಿಕಾ, ರಣ್ಬೀರ್ ಜೋಡಿ ಗೀತಾಂಜಲಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬಾಬಿ ಡಿಯೋಲ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ಟಿ ಸಿರೀಸ್, ಮುರಾದ್ ಖೇತಾನಿಯವರ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ಅನಿಮಲ್ ಚಿತ್ರ ನಿರ್ಮಿಸಿದೆ.
ಇದನ್ನೂ ಓದಿ:ಶಾರುಖ್ ಬರ್ತ್ಡೇ ಪಾರ್ಟಿಯಿಂದ 'ರಾಲಿಯಾ' ರೊಮ್ಯಾಂಟಿಕ್ ಫೋಟೋ ವೈರಲ್