ಕರ್ನಾಟಕ

karnataka

ETV Bharat / entertainment

ತಾಯಿಯಾದ ಬಳಿಕ ಮೊದಲ ಫೋಟೋ ಹಂಚಿಕೊಂಡ ಆಲಿಯಾ ಭಟ್ - Alia Bhatt baby photo

ತಾಯಿಯಾದ ನಂತರ ನಟಿ ಆಲಿಯಾ ಭಟ್ ಇದೀಗ ​ ತಮ್ಮ ಮೊದಲ ಫೋಟೋ ಹಂಚಿಕೊಂಡಿದ್ದಾರೆ.

Alia Bhatt
ನಟಿ ಆಲಿಯಾ ಭಟ್

By

Published : Nov 15, 2022, 2:44 PM IST

ಏಪ್ರಿಲ್​​ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ವಿವಾಹವಾದ ಬಾಲಿವುಡ್ ಜೋಡಿ ರಣ್​ಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಪೋಷಕರಾಗಿ ಬಡ್ತಿ ಪಡೆದಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ತಮ್ಮ ಮೊದಲ ಮಗುವಿನ ಆಗಮನದ ನಂತರ ಬಾಲಿವುಡ್​ನ ಬಹುಬೇಡಿಕೆ ನಟಿ ಆಲಿಯಾ ಭಟ್ ಇದೀಗ ಅಭಿಮಾನಿಗಳಿಗಾಗಿ​ ತಮ್ಮ ಮೊದಲ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ನಟಿ ಆಲಿಯಾ ಭಟ್

ಇದೇ ನವೆಂಬರ್​ 6ರಂದು ಆಲಿಯಾ ಭಟ್ ಮುಂಬೈನ ಹೆಚ್​ಹೆನ್​ ರಿಲಯನ್ಸ್​​​​​​ ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಕೆಲ ಹೊತ್ತಿನಲ್ಲೇ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ಈ ಶುಭ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದರು. ಒಂದು ಮರಿ ಸಿಂಹದ ಜೊತೆಗೆ ಎರಡು ಪೋಷಕ ಸಿಂಹಗಳಿರುವ ಫೋಟೋದೊಂದಿಗೆ, ''ನಮ್ಮ ಜೀವನದ ಅತ್ಯುತ್ತಮ ಸುದ್ದಿ. ನಮ್ಮ ಮಗು ಈಗ ನಮ್ಮೊಂದಿಗೆ. ಅಬ್ಬಾ ಎಂಥಾ ಮ್ಯಾಜಿಕಲ್ ಹುಡುಗಿ. ನಾವು ಅಧಿಕೃತವಾಗಿ ಪ್ರೀತಿಯಿಂದ ಈ ವಿಷಯವನ್ನು ಘೋಷಣೆ ಮಾಡುತ್ತಿದ್ದೇವೆ. ಆಶೀರ್ವಾದ ಗಳಿಸಿದ ಪೋಷಕರು - ಲವ್ ಲವ್ ಲವ್ ಆಲಿಯಾ ಮತ್ತು ರಣಬೀರ್'' ಎಂದು ಬರೆದಿದ್ದರು.

ರಾಲಿಯಾ ದಂಪತಿ

ಇದನ್ನೂ ಓದಿ:ನಟನೆಯಿಂದ ಕೊಂಚ ವಿರಾಮ.. ಕುಟುಂಬಕ್ಕೆ ಸಮಯ ಕೊಡಲು ನಿರ್ಧರಿಸಿದ ಅಮಿರ್​ ಖಾನ್​

ಆಸ್ಪತ್ರೆಯಿಂದ ಡಿಸ್ಜಾರ್ಜ್​ ಆಗಿ ಮನೆಗೆ ಹೋಗುವ ವೇಳೆ ಪಾಪರಾಜಿಗಳ ಕಣ್ಣಿಗೆ ರಾಲಿಯಾ ದಂಪತಿ ಕಾಣಿಸಿಕೊಂಡಿದ್ದರು. ಆದರೆ, ಅವರ ಫೋಟೋವಾಗಲಿ ಅಥವಾ ಮಗುವಿನ ಚಿತ್ರವನ್ನಾಗಲಿ ಹಂಚಿಕೊಂಡಿರಲಿಲ್ಲ. ಅಭಿಮಾನಿಗಳು ತಾಯಿ ಮಗುವಿನ ಫೋಟೋಗಾಗಿ ಕಾದು ಕುಳಿತಿದ್ದರು.

ಇದೀಗ ಆಲಿಯಾ ಕಾಫಿ ಕಪ್​ ಹಿಡಿದು ತನ್ನ ಫೋಟೋ ಹಂಚಿಕೊಂಡಿದ್ದಾರೆ. ಕಪ್​ ಮೇಲೆ 'ಮಮ್ಮಾ' ಎಂದು ಬರೆದಿದೆ. ಈ ಫೋಟೋದಲ್ಲಿ ಆಲಿಯಾರ ಮುಖ ಸರಿಯಾಗಿ ಕಂಡಿಲ್ಲ. ಹಾಗಾಗಿ ತಾಯಿ ಮಗುವಿನ ಕ್ಲಿಯರ್​ ಪಿಕ್ಚರ್​ಗೆ ಅಭಿಮಾನಿಗಳು ಬೇಡಿಕೆಯಿಟ್ಟಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯಿಂದ ಆಲಿಯಾ ಡಿಸ್ಚಾರ್ಜ್​​.. ಮಗುವನ್ನು ಸ್ವಾಗತಿಸಲು ಮನೆಯಲ್ಲಿ ಭರ್ಜರಿ ತಯಾರಿ

ABOUT THE AUTHOR

...view details