ಕರ್ನಾಟಕ

karnataka

ETV Bharat / entertainment

ತಿಂಗಳ ನಂತರ ಮುಂಬೈಗೆ ಆಲಿಯಾ ಭಟ್.. ಏರ್​ಪೋರ್ಟ್​ನಲ್ಲೇ ಸರ್​ಪ್ರೈಸ್ ಕೊಟ್ಟ ರಣಬೀರ್ ಸಿಂಗ್ - ಮುಂಬೈ ಏರ್​ಪೋರ್ಟ್​ನಲ್ಲಿ ಆಲಿಯಾ ಭಟ್

ಆಲಿಯಾ ಭಟ್ ಅವರು ತಿಂಗಳ ನಂತರ ಮುಂಬೈಗೆ ಆಗಮಿಸಿದ್ದು, ಏರ್​ಪೋರ್ಟ್​ನಲ್ಲಿ ರಣಬೀರ್ ಕಪೂರ್ ಸರ್​ಪ್ರೈಸ್​ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಣಬೀರ್ ಆಲಿಯಾ ಏರ್‌ಪೋರ್ಟ್ ವೈರಲ್ ಪೋಟೋ
ರಣಬೀರ್ ಆಲಿಯಾ ಏರ್‌ಪೋರ್ಟ್ ವೈರಲ್ ಪೋಟೋ

By

Published : Jul 10, 2022, 9:06 PM IST

ಬಾಲಿವುಡ್​ ನಟಿ ಆಲಿಯಾ ಭಟ್ ಭಾನುವಾರ ಮುಂಜಾನೆ ಯುಕೆಯಿಂದ ಮುಂಬೈಗೆ ಮರಳಿದ್ದಾರೆ. ಆಲಿಯಾಗೆ ಆಶ್ಚರ್ಯವಾಗುವಂತೆ, ಅವರ ಪತಿ ರಣಬೀರ್ ಕಪೂರ್ ತನ್ನ ಹಾಲಿವುಡ್ ಚೊಚ್ಚಲ ಹಾರ್ಟ್ ಆಫ್ ಸ್ಟೋನ್ಸ್ ಚಿತ್ರೀಕರಣವನ್ನು ಮುಗಿಸಿ ಮನೆಗೆ ಹಿಂತಿರುಗಿದಾಗ ಆಲಿಯಾ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದರು.

ತಿಂಗಳ ಬಳಿಕ ರಣಬೀರ್ ಆಲಿಯಾ ಭೇಟಿ- ವೈರಲ್ ವಿಡಿಯೋ

ರಣಬೀರ್ ತಮ್ಮ ಪತ್ನಿ ತಿಂಗಳ ನಂತರ ಮನೆಗೆ ಹಿಂದಿರುಗಿದಾಗ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ. ಪತಿ ತನಗಾಗಿ ಕಾಯುತ್ತಿರುವುದಾಗಿ ಆಲಿಯಾಗೆ ಹೇಳಿದಾಗ, ತಾರೆ ತಮ್ಮ ಕಾರಿನತ್ತ ಧಾವಿಸಿ, "ಬೇಬಿ!!" ಎಂದು ಖುಷಿಯಿಂದ ಕಿರುಚಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಆಲಿಯಾ ಮತ್ತು ರಣಬೀರ್ ಅವರ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಮ್ಮ ಮೊದಲ ಮಗುವನ್ನು ಒಟ್ಟಿಗೆ ನಿರೀಕ್ಷಿಸುತ್ತಿರುವ ದಂಪತಿ ತಿಂಗಳ ನಂತರ ಮತ್ತೆ ಒಂದಾಗುತ್ತಿದ್ದಂತೆ ಉತ್ಸುಕತೆ ಮತ್ತು ಸಂತೋಷ ವ್ಯಕ್ತಪಡಿಸಿದರು.

ಗಾಲ್ ಗಡೋಟ್ ಮತ್ತು ಜೇಮಿ ಡೋರ್ನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರದ ಚಿತ್ರೀಕರಣಕ್ಕಾಗಿ ಆಲಿಯಾ ಯುಕೆಗೆ ಹೋಗಿದ್ದರು. ಏಪ್ರಿಲ್‌ನಲ್ಲಿ ಅವರ ಮದುವೆಯ ನಂತರ ರಣಬೀರ್ ಮತ್ತು ಆಲಿಯಾ ತಮ್ಮ ವೃತ್ತಿಪರ ಜೀವನಕ್ಕೆ ಪ್ರವೇಶಿಸಿದ್ದಾರೆ. ಮದುವೆಯ ಮೂರು ದಿನಗಳ ನಂತರ ರಣಬೀರ್ ಟಿ-ಸೀರೀಸ್ ಕಚೇರಿಯಲ್ಲಿ ಕಾಣಿಸಿಕೊಂಡರೆ, ಆಲಿಯಾ ಅವರು ಮೇ 19 ರಂದು ವಿಮಾನದಲ್ಲಿ ಯುಕೆಗೆ ತೆರಳಿ ಒಂದು ತಿಂಗಳ ನಂತರ ಮುಂಬೈಗೆ ಮರಳಿದರು.

ಆಲಿಯಾ ಮತ್ತು ರಣಬೀರ್ ಈ ವರ್ಷದ ಏಪ್ರಿಲ್ 14 ರಂದು ವಿವಾಹವಾಗಿದ್ದರು. ಜೂನ್ 27 ರಂದು ಆಲಿಯಾ ಇನ್ಸ್ಟಾಗ್ರಾಂನಲ್ಲಿ ತಾನು ಗರ್ಭಿಣಿಯಾಗಿರುವ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು.

ಓದಿ:ಎಲ್ಲರೊಂದಿಗೆ ಸಮನ್ವಯ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ: ಸಿಎಂ ಬೊಮ್ಮಾಯಿ

ABOUT THE AUTHOR

...view details