ಆಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮುಂಬೈನಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ 2023ರ ಗ್ರ್ಯಾಂಡ್ ಬ್ರೈಡಲ್ ಕೌಚರ್ ಶೋನಲ್ಲಿ ಚಿತ್ರತಂಡ ತಮ್ಮ ಸಿನಿಮಾದ ಪ್ರಚಾರವನ್ನು ಕೂಡ ಮಾಡಿದ್ದಾರೆ. ಈವೆಂಟ್‌ನಲ್ಲಿ, ಆಲಿಯಾ ಭಟ್ ತಮ್ಮ ಎಂಟು ತಿಂಗಳ ಮಗು ರಾಹಾ ಬಗ್ಗೆ ಮಾತನಾಡಿದ್ದಾರೆ. ನನ್ನ ಮಗಳು ವಿಜ್ಞಾನಿಯಾಗುತ್ತಾಳೆ ಎಂದು ಹೇಳಿದ್ದಾರೆ.
ಪಾಪಾರಾಜಿ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಲಿಯಾ ಸ್ಕೈ ಬ್ಲೂ ಸೀರೆಯಲ್ಲಿ ಕಂಡಿದ್ದಾರೆ. ಹಣೆಗೆ ಬಿಂದಿ ಇಟ್ಟು ಗಮನ ಸೆಳೆದಿದ್ದಾರೆ. ವಿಡಿಯೋದಲ್ಲಿ ಆಲಿಯಾ ತಮ್ಮ ಮಗಳ ಬಗ್ಗೆ ಮಾತನಾಡಿ, "ನಾನು ನನ್ನ ಮಗಳನ್ನು ನೋಡಿದಾಗ, ನೀನು ವಿಜ್ಞಾನಿಯಾಗುತ್ತೀಯಾ ಎನ್ನುತ್ತೇನೆ. ಏಕೆಂದರೆ ನಾನು ವಿಜ್ಞಾನಿಯಾಗಬೇಕೆಂದು ಬಯಸಿದ್ದೆ" ಎಂದಿದ್ದಾರೆ.
ಈ ವಿಡಿಯೋಗೆ ನೆಟ್ಟಿಗರು ಬಗೆ ಬಗೆಯ ಕಮೆಂಟ್ನಿಂದ ಪ್ರತಿಕ್ರಿಯಿಸಿದ್ದಾರೆ. ಒಬ್ಬರು, 'ಅವರು ವಿಜ್ಞಾನಿಯ ಪಾತ್ರವನ್ನು ನಿರ್ವಹಿಸುತ್ತಾರೆ' ಎಂದಿದ್ದಾರೆ. ಮತ್ತೊಬ್ಬರು, 'ಕರಣ್ ಜೋಹರ್ ಅವರೇ 20 ವರ್ಷಗಳ ನಂತರ ಚಿತ್ರಕ್ಕೆ ಸೈಂಟಿಸ್ಟ್ ಎಂದು ಹೆಸರಿಡಿ' ಎಂದು ಕಮೆಂಟ್ ಮಾಡಿದ್ದಾರೆ. ಆದಾಗ್ಯೂ, ಹೆಚ್ಚಿನ ಜನರು ರಾಹಾ ನಿಸ್ಸಂದೇಹವಾಗಿ ಆಲಿಯಾ ಮತ್ತು ರಣಬೀರ್ ಕಪೂರ್ ಅವರ ಹೆಜ್ಜೆಗಳನ್ನು ಅನುಸರಿಸುತ್ತಾರೆ ಮತ್ತು ನಟಿಯಾಗುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.
ಆಲಿಯಾ ಭಟ್ 2022ರ ಏಪ್ರಿಲ್ 14 ರಂದು ನಟ ರಣಬೀರ್ ಕಪೂರ್ ಜೊತೆ ಮದುವೆಯಾದರು. 2022ರ ಜೂನ್ ತಿಂಗಳಲ್ಲಿ ತಮ್ಮ ಗರ್ಭಧಾರಣೆ ಘೋಷಿಸಿದರು. ಕಳೆದ ವರ್ಷ ನವೆಂಬರ್ 6 ರಂದು ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಮಗುವಿಗೆ ರಾಹಾ ಎಂದು ಹೆಸರಿಡಲಾಗಿದೆ.