ಕರ್ನಾಟಕ

karnataka

ETV Bharat / entertainment

'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಶೂಟಿಂಗ್​ಗಾಗಿ ಕಾಶ್ಮೀರದಲ್ಲಿ ಕಾಣಿಸಿಕೊಂಡ ಆಲಿಯಾ ಭಟ್ - ಈಟಿವಿ ಭಾರತ ಕನ್ನಡ

'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಚಿತ್ರೀಕರಣಕ್ಕಾಗಿ ಆಲಿಯಾ ಭಟ್​ ಕಾಶ್ಮೀರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ.

kashmir
ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ

By

Published : Mar 4, 2023, 11:07 AM IST

Updated : Mar 4, 2023, 3:20 PM IST

ಬಾಲಿವುಡ್​ ಬೆಡಗಿ ಆಲಿಯಾ ಭಟ್​ ಹೊಸ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ಸಮಯ ಸಿನಿಮಾದಿಂದ ದೂರ ಉಳಿದಿದ್ದ ನಟಿ ಇದೀಗ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕರಣ್​ ಜೋಹರ್​ ನಿರ್ದೇಶನದ 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಸಿನಿಮಾದ ಚಿತ್ರೀಕರಣಕ್ಕಾಗಿ ನಟಿ ಆಲಿಯಾ ಭಟ್​ ಪ್ರಸ್ತುತ ಕಾಶ್ಮೀರದಲ್ಲಿದ್ದಾರೆ.

ಕಳೆದ ವರ್ಷ ಏಪ್ರಿಲ್​ 14 ರಂದು ಬಾಲಿವುಡ್​ ನಟ ರಣಬೀರ್ ಕಪೂರ್​ ಜೊತೆ ದಾಂಪತ್ಯಕ್ಕೆ ಕಾಲಿರಿಸಿದ್ದ ನಟಿ, ನವೆಂಬರ್​ 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಆಲಿಯಾ ಮಗುವಿನ ಆರೈಕೆಯಲ್ಲಿಯೇ ಬ್ಯುಸಿಯಾಗಿ ಬಿಟ್ಟಿದ್ದರು. ಈ ಕಾರಣಕ್ಕೆ ತಮ್ಮ ಸಿನಿಮಾಗಳಿಗೆ ಕೊಂಚ ಕಾಲ ಬ್ರೇಕ್​ ನೀಡಿದ್ದರು. ಇದೀಗ ಮತ್ತೆ ಸಿನಿಮಾದ ಶೂಟಿಂಗ್​ಗಾಗಿ ನಟಿ ಕಾಶ್ಮೀರದಲ್ಲಿ ಕಾಣಿಸಿಕೊಂಡಿದ್ದಾರೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ತಂಡವು ಸಿನಿಮಾದ ರೊಮ್ಯಾಂಟಿಕ್​ ಹಾಡನ್ನು ಚಿತ್ರೀಕರಿಸಲು ಕಣಿವೆ ನಾಡಿಗೆ ತೆರಳಿದ್ದಾರೆ.

ಇದನ್ನೂ ಓದಿ:ವಿರಾಟ್​ ಕೊರಳಲ್ಲಿ ರುದ್ರಾಕ್ಷಿ ಸರ, ಭಸ್ಮ ಆರತಿಯಲ್ಲಿ ವಿರುಷ್ಕಾ ಭಾಗಿ.. ಮಹಾಕಾಳೇಶ್ವರನ ದರ್ಶನ ಪಡೆದ ದಂಪತಿ

ಈ ಮಧ್ಯೆ ಸಿನಿಮಾ ಶೂಟಿಂಗ್​ನ ಕೆಲವೊಂದು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅದರಲ್ಲಿ ಆಲಿಯಾ ಅವರ ಕೆಲವು ಫೋಟೋಗಳು ವಿಶೇಷ ಗಮನ ಸೆಳೆದಿದ್ದು, ಕುತೂಹಲ ಮೂಡಿಸಿದೆ. ನಟಿ ಕೆಂಪು ಟರ್ಟಲ್ನೆಕ್​ ಸ್ವೆಟರ್​ಗೆ ಹೊಂದಿಕೆಯಾಗುವ ಕೆಂಪು ಬ್ಲೇಜರ್​ ಅನ್ನು ಧರಿಸಿ, ಮೂಗುತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕ್ಲಿಪ್​ನಲ್ಲಿ ಆಲಿಯಾ ಕಾರಿನಲ್ಲಿ ಕುಳಿತು ಹಾಡಿನ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಸಿನಿಮಾ ಬಗೆಗೆ ನಿರೀಕ್ಷೆ ಹೆಚ್ಚಾಗಿದೆ.

ಚಿತ್ರತಂಡ ಹೀಗಿದೆ.. 'ಏ ದಿಲ್​ ಮುಷ್ಕಿಲ್'​ (2016) ಸಿನಿಮಾ ನಂತರ ಕರಣ್​ ಜೋಹರ್ ನಿರ್ದೇಶನದಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರ ಸಿದ್ಧವಾಗುತ್ತಿದೆ. ಸಿನಿಮಾದಲ್ಲಿ ಆಲಿಯಾ ಭಟ್​ ಜೊತೆ ರಣವೀರ್​ ಸಿಂಗ್​ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಧರ್ಮೇಂದ್ರ, ಜಯಾ ಬಚ್ಚನ್​ ಮತ್ತು ಶಬಾನಾ ಅಜ್ಮಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವು ರಾಕಿ ಮತ್ತು ರಾಣಿಯ ಪ್ರೇಮ ಕಹಾನಿಯನ್ನು ಹೇಳುತ್ತದೆ. ಈಗಾಗಲೇ ಸಿನಿಮಾವನ್ನು ಫೆಬ್ರವರಿ 14, ಪ್ರೇಮಿಗಳ ದಿನದಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಬರುವ ಜುಲೈ 23 ರಂದು ಬಿಡುಗಡೆಗೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಹೆಂಡತಿ, ಮಗಳನ್ನು ಮಿಸ್​ ಮಾಡಿಕೊಂಡ ರಣಬೀರ್​: ಆಲಿಯಾ ಭಟ್​ ಶೂಟಿಂಗ್​ಗಾಗಿ ಕಾಶ್ಮೀರಕ್ಕೆ ತೆರಳಿದ್ದು, ತನ್ನ ಮಗಳು ರಾಹಾಳನ್ನು ಕರೆದೊಯ್ದಿದ್ದಾರೆ. ಆಲಿಯಾ ತನ್ನ ಮಗಳಿಗೆ ಜನ್ಮ ನೀಡಿದ ನಂತರ ಮೊದಲ ಸಿನಿಮಾ ಚಿತ್ರೀಕರಣ ಇದಾಗಿದೆ. ಹೀಗಾಗಿ ಹೆಂಡತಿ ಮತ್ತು ಮಗಳನ್ನು ರಣಬೀರ್​ ಕಪೂರ್​ ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹೇಳಿಕೊಂಡಿರುವ ರಣಬೀರ್​, "ಆಲಿಯಾ ಕಾಶ್ಮೀರದಲ್ಲಿ ಶೂಟಿಂಗ್​ಗಾಗಿ ತೆರಳಿದ್ದಾಳೆ. ಜೊತೆಗೆ ಮಗಳು ರಾಹಾಳನ್ನು ಕರೆದೊಯ್ದಿದ್ದಾಳೆ. ನಾನು ಇಬ್ಬರನ್ನೂ ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ.

ಇದನ್ನೂ ಓದಿ:ಮಧ್ಯರಾತ್ರಿಯಲ್ಲೇ ಹೆಂಡ್ತಿ, ಮಕ್ಕಳನ್ನು ಹೊರಹಾಕಿದ ನವಾಜುದ್ದೀನ್ ಸಿದ್ದಿಕಿ: ವಿಡಿಯೋ ಹಂಚಿಕೊಂಡ ಆಲಿಯಾ

Last Updated : Mar 4, 2023, 3:20 PM IST

ABOUT THE AUTHOR

...view details