ಕರ್ನಾಟಕ

karnataka

ETV Bharat / entertainment

ಚನ್ನ ಮೇರೆಯಾ ಹಾಡಿಗೆ ಮುದ್ದಾಗಿ ಹೆಜ್ಜೆ ಹಾಕಿದ ಆಲಿಯಾ ಭಟ್ - ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನೆಮಾ ಫೆಬ್ರವರಿಯಲ್ಲಿ ಬಿಡುಗಡೆ

ಆಲಿಯಾ ಭಟ್ ಅವರು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನೆಮಾದ ಡಬ್ಬಿಂಗ್​ನ್ನು ಪೂರ್ಣಗೊಳಿಸಿದ್ದಾರೆ. ಕರಣ್ ಚಿತ್ರದ ಸೆಟ್‌ನಿಂದ ಆಲಿಯಾ ಅವರ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ರಣಬೀರ್ ಕಪೂರ್ ಅವರ ಚನ್ನ ಮೆರೆಯಾ ಹಾಡಿಗೆ ಆಲಿಯಾ ಭಟ್ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.

alia-bhatt-bids-adieu-to-rocky-aur-rani-ki-prem-kahani-team-in-channa-mereya-style
ಚನ್ನ ಮೇರೆಯಾ ಹಾಡಿದ ಮುದ್ದಾಗಿ ಹೆಜ್ಜೆ ಹಾಕಿದ ಆಲಿಯಾ ಭಟ್

By

Published : Jul 26, 2022, 4:59 PM IST

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಿರ್ದೇಶನದ ಬಹುನಿರೀಕ್ಷಿತ ಸಿನೆಮಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಣವೀರ್ ಸಿಂಗ್ ಹಾಗೂ ಅಲಿಯಾ ಭಟ್ ನಟಿಸಿದ್ದು, ಸದ್ಯ ಸಿನೆಮಾದ ಚಿತ್ರೀಕರಣದ ಮುಗಿಸಿರುವ ತಂಡ, ಒಂದು ಹಾಡಿನ ಚಿತ್ರೀಕರಣವನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ.

ಸದ್ಯ ಚಿತ್ರ ತಂಡದ ಒಂದು ವಿಡಿಯೋ ತುಣುಕನ್ನು ನಿರ್ದೇಶಕ ಕರಣ್ ಜೋಹರ್ ತಮ್ಮ ಇನ್​ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟಿ ಅಲಿಯಾ ಭಟ್ ಮತ್ತು ರಣವೀರ್ ತಾವು ಸೆಟ್ ನಲ್ಲಿ ಆನಂದಿಸುತ್ತಿರುವುದನ್ನು ಕಾಣಬಹುದು.

ಈ ವಿಡಿಯೋದಲ್ಲಿ ಅಲಿಯಾ ಭಟ್, ರಣಬೀರ್​ ಕಪೂರ್​​ ಅವರ ಏ ದಿಲ್ ಹೈ ಮುಷ್ಕಿಲ್ ಸಿನೆಮಾದ ಚನ್ನ ಮೇರೆಯಾ ಹಾಡಿಗೆ ರಣವೀರ್ ಅವರ ಹುಕ್ ಸ್ಟೆಪ್ ನ್ನು ಹಾಕಿದ್ದಾರೆ. ಆಲಿಯಾ ನೃತ್ಯ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನೆಮಾದಲ್ಲಿ ಹಿರಿಯ ತಾರೆಯರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಮುಂತಾದವರು ನಟಿಸಿದ್ದಾರೆ. 2016ರಲ್ಲಿ ಬಿಡುಗಡೆಗೊಂಡ ಏ ದಿಲ್ ಹೈ ಮುಷ್ಕಿಲ್ ಸಿನೆಮಾದ ನಂತರ ಕರಣ್ ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ. ಗಲ್ಲಿ ಬಾಯ್ ಬಳಿಕ ಮತ್ತೆ ರಣವೀರ್ ಮತ್ತು ಆಲಿಯಾ ಒಟ್ಟಾಗಿ ತೆರೆಮೇಲೆ ಮಿಂಚಲಿದ್ದಾರೆ. ಈ ಸಿನೆಮಾ ಮುಂದಿನ ವರ್ಷ ಫೆಬ್ರವರಿ 10 ರಂದು ತೆರೆಕಾಣಲಿದೆ ಎಂದು ಚಿತ್ರ ತಂಡ ಹೇಳಿದೆ.

ಓದಿ :ಕೆಜಿಎಫ್​ 2 ಜೊತೆ ಆಗುತ್ತಿದ್ದ ಘರ್ಷಣೆಯಿಂದ ನಮ್ಮ ಸಿನಿಮಾ ತಪ್ಪಿಸಿಕೊಂಡಿದೆ: ಅಮೀರ್ ಖಾನ್

ABOUT THE AUTHOR

...view details