ಕರ್ನಾಟಕ

karnataka

ETV Bharat / entertainment

ಆಲಿಯಾ-ರಣ್​​ಬೀರ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಟ್ರೈಲರ್ ರಿಲೀಸ್ - ಆಲಿಯಾ ಭಟ್ ಬ್ರಹ್ಮಾಸ್ತ್ರ

ಆಲಿಯಾ ಭಟ್, ರಣ್​​ಬೀರ್ ಕಪೂರ್​ ಅಭಿನಯದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ..

Brahmastra trailer release
'ಬ್ರಹ್ಮಾಸ್ತ್ರ ಭಾಗ 1: ಶಿವ' ಟ್ರೈಲರ್ ರಿಲೀಸ್

By

Published : Jun 15, 2022, 1:26 PM IST

ಪೌರಾಣಿಕ ಫ್ಯಾಂಟಸಿ ಸಾಹಸ ಚಿತ್ರ 'ಬ್ರಹ್ಮಾಸ್ತ್ರ ಭಾಗ 1 : ಶಿವ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಬಾಲಿವುಡ್​ನಲ್ಲಿ ಭರವಸೆ ಮೂಡಿಸಿದೆ. ರಣಬೀರ್ ಕಪೂರ್, ಆಲಿಯಾ ಭಟ್​​, ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ತೆಲುಗು ಸ್ಟಾರ್ ನಾಗಾರ್ಜುನ್ ಅಕ್ಕಿನೇನಿ ಈ ಸಿನಿಮಾದ ಪ್ರಮುಖ ತಾರಾಗಣವಾಗಿದ್ದು, ಟ್ರೈಲರ್ ಸಖತ್​ ಕ್ರೇಜ್ ಹುಟ್ಟಿಸಿದೆ. ಟ್ರೈಲರ್​ ಬಿಡುಗಡೆಯಾಗಿ ಕೆಲವೇ ಹೊತ್ತಿನಲ್ಲಿ 13 ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ.

'ಬ್ರಹ್ಮಾಸ್ತ್ರ ಭಾಗ 1: ಶಿವ' ಎಂಬುದು ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು, ಕಥೆಗಳಿಂದ ಸ್ಫೂರ್ತಿ ಪಡೆದ ಸಿನಿಮಾವಾಗಿದೆ. ನಿರ್ದೇಶಕ ಅಯಾನ್‌ ಮುಖರ್ಜಿ ಅವರ ನಿರ್ದೇಶನದ ಈ ಚಿತ್ರವನ್ನು ಎಸ್.ಎಸ್ ರಾಜಮೌಳಿ ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂನಲ್ಲಿ ನಿರ್ಮಿಸಿ ಪ್ರಸ್ತುತಪಡಿಸಲಿದ್ದಾರೆ.

ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 9ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಬ್ರಹ್ಮಾಸ್ತ್ರ ಚಿತ್ರದ ಮೌನಿ ರಾಯ್ ಫಸ್ಟ್​ ಲುಕ್​ ಬಿಡುಗಡೆ

ಇಂದು ಟ್ರೈಲರ್‌ ಅನ್ನು ರಿಲೀಸ್ ಮಾಡಲಾಗಿದೆ. 2018ರಲ್ಲೇ ಚಿತ್ರೀಕರಣ ಆರಂಭಿಸಲಾಗಿತ್ತು. ಟ್ರೈಲರ್​ ಬೆಂಕಿ, ಪ್ರೀತಿ, ಅಸ್ತ್ರ, ನಕಾರಾತ್ಮಕ-ಸಕಾರಾತ್ಮಕ ಶಕ್ತಿ ನಡುವಿನ ಯುದ್ಧ ಎತ್ತಿ ಹಿಡಿದಿದೆ.

ABOUT THE AUTHOR

...view details