ಬಾಲಿವುಡ್ ತಾರಾ ದಂಪತಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದೇ ಮೊದಲ ಬಾರಿಗೆ ತಮ್ಮ ಮಗಳನ್ನು ಜಗತ್ತಿಗೆ ಪರಿಚಯಿಸಿ, ಗಮನ ಸೆಳೆದಿದ್ದಾರೆ. ಸೋಮವಾರ ಕ್ರಿಸ್ಮಸ್ ಶುಭ ಸಂದರ್ಭದಲ್ಲಿ ಪುತ್ರಿ ರಾಹಾ ಜೊತೆ 'ರಾಲಿಯಾ' ಕಾಣಿಸಿಕೊಂಡರು. ಪಾಪರಾಜಿಗಳ ಕ್ಯಾಮರಾಗೆ ಮಗಳೊಂದಿಗೆ ಪೋಸ್ ನೀಡಿ ಸದ್ದು ಮಾಡಿದ್ದಾರೆ. ಇಂದು ಮತ್ತೆ ಮಗಳೊಂದಿಗೆ ಕಾಣಿಸಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾ ಚರ್ಚೆಯ ವಿಷಯವಾಗಿದ್ದಾರೆ. ನ್ಯೂ ಇಯರ್ ವೆಕೇಶನ್ಗೆ ಹೊರಟಿರುವ ಇವರು ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಪಾಪರಾಜಿಗಳು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ರಣ್ಬೀರ್ ಕಪೂರ್ ಕಾರಿನಿಂದ ಕೆಳಗಿಳಿದಿದ್ದು, ಪಾಪರಾಜಿಗಳು ನಟನ ಹೆಸರು ಹೇಳುತ್ತಿದ್ದಂತೆ ರಣ್ಬೀರ್ ಅವರತ್ತ ಕೈ ಬೀಸಿದರು. ನಂತರ, ಆಲಿಯಾ ಭಟ್ ಕಾರಿನಿಂದ ಹೊರಬಂದು ವಿಮಾನ ನಿಲ್ದಾಣದ ಗೇಟ್‌ನತ್ತ ಸಾಗಿದರು. ಮಗು ರಾಹಾರನ್ನು ಹಿಡಿದುಕೊಂಡಿರುವುದು ವಿಡಿಯೋದಲ್ಲಿದೆ. ನಿದ್ರೆಯಲ್ಲಿದ್ದ ರಾಹಾ ವಿಡಿಯೋದಲ್ಲಿ ಅಲ್ಪಸ್ವಲ್ಪ ಕಾಣಿಸಿಕೊಂಡಿದ್ದಾಳೆ.
ಆಲಿಯಾ ಭಟ್ ಪಾಪರಾಜಿಗಳನ್ನು ನೋಡಿ ಮುಗುಳ್ನಗೆ ಬೀರಿದ್ದು, ರಣ್ಬೀರ್ ಕಪೂರ್ ವಿಮಾನ ನಿಲ್ದಾಣ ಪ್ರವೇಶಿಸುವ ಮುನ್ನ ಥಂಬ್ಸ್-ಅಪ್ ಮಾಡಿ ಮುನ್ನಡೆದರು. ಏರ್ಪೋರ್ಟ್ನಲ್ಲಿ ಕ್ಯಾಶುವಲ್ ಆಗಿ ಅವರು ಕಾಣಿಸಿಕೊಂಡರು. ರಣ್ಬೀರ್ ಕಪೂರ್ ಬ್ಲ್ಯಾಕ್ ಪ್ರಿಂಟೆಡ್ ಹೂಡಿ, ಅದಕ್ಕೆ ಹೊಂದಿಕೆಯಾಗುವ ಪ್ಯಾಂಟ್, ಶೂಸ್ ಹಾಗೂ ಡಾರ್ಕ್ ಸನ್ ಗ್ಲಾಸ್ ಧರಿಸಿದ್ದರು. ಮತ್ತೊಂದೆಡೆ, ಆಲಿಯಾ ಭಟ್ ಬಿಳಿ ಟೀ ರ್ಟ್, ಬ್ಲ್ಯಾಕ್ ಪ್ಯಾಂಟ್ ಮತ್ತು ಸನ್ ಗ್ಲಾಸ್ನಲ್ಲಿ ಕಂಗೊಳಿಸಿದರು.