ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ನಟಿ ಪರಿಣಿತಿ ಚೋಪ್ರಾ ಅಭಿಯನದ ಬಹು ನಿರೀಕ್ಷಿತ ಚಿತ್ರ 'ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ' ಚಿತ್ರ ಇಂದು ಅದ್ದೂರಿಯಾಗಿ ತೆರೆ ಕಂಡಿದೆ. ಅಕ್ಟೋಬರ್ 6ರಂದು ಬಿಡುಗಡೆಯಾಗಿರುವ ಈ ಚಿತ್ರದ ಫಸ್ಟ್ ಶೋ ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅನೇಕ ಮಂದಿ ಚಿತ್ರವನ್ನು ಹೊಗಳಿ, ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವು ಪ್ರೇಕ್ಷಕರು ಚಿತ್ರದ ವಿಎಫ್ಎಕ್ಸ್ ಪ್ರಯತ್ನ ಅತಿಯಾಯಿತು ಎಂಬ ಟೀಕೆ ವ್ಯಕ್ತಪಡಿಸಿದ್ದಾರೆ.
'ಮಿಷನ್ ರಾಣಿಗಂಜ್ ಚಿತ್ರ' ಇಂದು ಬಿಡುಗಡೆಯಾಗುತ್ತಿದ್ದಂತೆ ಅಕ್ಷಯ್ ಅಭಿಮಾನಿಗಳು ಚಿತ್ರ ವೀಕ್ಷಣೆ ಮಾಡಿದ್ದಾರೆ. ಚಿತ್ರ ಹಿಟ್ ಆಗುತ್ತದೆಯೋ ಇಲ್ಲಾ ಫ್ಲಾಫೋ ಗೊತ್ತಿಲ್ಲ. ಆದರೆ, ಜನರು ತಮ್ಮ ಸಮೀಪದ ಥಿಯೇಟರ್ಗೆ ಹೋಗಿ ಚಿತ್ರವನ್ನು ನೋಡಬೇಕು ಎಂದು ಅಭಿಮಾನಿಯೊಬ್ಬರು ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಹೀಗಿದೆ ಪ್ರತಿಕ್ರಿಯೆ: ಮತ್ತೊಬ್ಬ ಅಭಿಮಾನ, ಮೊದಲ ದಿನವೇ ನಟ ಅಕ್ಷಯ್ ಕುಮಾರ್ ಅಭಿನಯದ ಚಿತ್ರ ನೋಡಿದೆ. ಇದು ಉತ್ತಮ ಚಿತ್ರವಾಗಿದೆ. ಚಿತ್ರಕಥೆಯಲ್ಲಿ ಹಿಡಿತವಿದೆ. ನಿರ್ದೇಶನ ಸೂಪರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಚಿತ್ರದ ಮಧ್ಯಭಾಗದಲ್ಲಿ ಮಿಷನ್ ರಾಣಿಗಂಜ್ ಸೀಟಿನ ತುದಿಗೆ ನಿಮ್ಮನ್ನು ತಂದು ಕೂರಿಸುತ್ತದೆ. ಇದು ಮಾಸ್ಟರ್ಪೀಸ್ ಎಂದು ಸಾಬೀತು ಮಾಡಿದೆ ಎಂದಿದ್ದಾರೆ. ಇನ್ನು ಚಿತ್ರದ ಕುರಿತು ಕೆಲವು ಮಂದಿ ಟೀಕೆ ವ್ಯಕ್ತಪಡಿಸಿದ್ದು, ಇಂಟರ್ವೆಲ್ ಸಮಯದಲ್ಲಿಸಿನ ವಾಟರ್ ಸಿಜಿಐ ಕೆಟ್ಟದಾಗಿದೆ. ಆದರೆ, ಅದರ ಭಾವನಾತ್ಮಕ ಅಂಶ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.