ಕರ್ನಾಟಕ

karnataka

ETV Bharat / entertainment

ಟ್ವಿಂಕಲ್​​ ಖನ್ನಾ ಹೊಸ ಪುಸ್ತಕ ಬಿಡುಗಡೆಯಲ್ಲಿ ಪ್ರಶ್ನೆ ಕೇಳಿದ ಅಕ್ಷಯ್​; ಏನದು ಅಂತೀರಾ? - ಟ್ವಿಂಕಲ್​ ಖನ್ನಾ ಹೊಸ ಪುಸ್ತಕ ಬಿಡುಗಡೆ ಸಮಾರಂಭ

ಟ್ವಿಂಕಲ್​ ಖನ್ನಾ ಈಗಾಗಲೇ 'ಪೈಜಾಮಸ್​​ ಅರ್​ ಫರ್​ಗೀವಿಂಗ್''​​ ಮತ್ತು ಮಿಸಸ್​ ಫನ್ನಿ ಬೊನ್ಸ್​'' ಮತ್ತು ದಿ ಲೆಜೆಂಡ್​ ಆಫ್​ ಲಕ್ಷ್ಮಿ ಪ್ರಸಾದ್''​ ಪುಸ್ತಕಗಳನ್ನು ಹೊರ ತಂದಿದ್ದಾರೆ.

akshay-kumars-this-question-leaves-twinkle-khanna-doing-a-few-cartwheels-to-get-a-suitable-answer-at-her-book-launch-watch
akshay-kumars-this-question-leaves-twinkle-khanna-doing-a-few-cartwheels-to-get-a-suitable-answer-at-her-book-launch-watch

By ETV Bharat Karnataka Team

Published : Dec 16, 2023, 3:52 PM IST

ಮುಂಬೈ: ಬಾಲಿವುಡ್​ನಲ್ಲಿ ಒಂದು ಕಾಲದಲ್ಲಿ ನಟಿಯಾಗಿ ಮಿಂಚಿದ್ದ ಟ್ವಿಂಕಲ್​ ಖನ್ನಾ, ಮದುವೆಯಾದ ಬಳಿಕ ತೆರೆ ಹಿಂದೆ ಸರಿದರು. ಮಕ್ಕಳು ಕುಟುಂಬದ ಜವಾಬ್ದಾರಿ ನಿರ್ವಹಣೆ ಜೊತೆಗೆ ಲೇಖಕಿಯಾಗಿ ಯಶಸ್ಸು ಸಾಧಿಸುತ್ತಿದ್ದಾರೆ. ''ವೆಲ್​ಕಮ್​ ಟು ಪ್ಯಾರಡೈಸ್​ ಎಂಬ ಹೆಸರಿನಲ್ಲಿ ಅವರು ಪುಸ್ತಕ ಬರೆದಿದ್ದು, ಇತ್ತೀಚಿಗೆ ಇದರ ಉದ್ಘಾಟನಾ ಸಮಾರಂಭ ಕೂಡಾ ನಡೆದಿದೆ. ಸಂಬಂಧಗಳು, ಪ್ರೇಮ ವೈಫಲ್ಯಗಳು ಮತ್ತು ವಂಚನೆಗಳು ಈ ಪುಸ್ತಕದ ಪ್ರಮುಖ ವಿಚಾರವಾಗಿದೆ. ಈಗಾಗಲೇ ಪೈಜಾಮಸ್​​ ಅರ್​ ಫರ್​ಗೀವಿಂಗ್''​​ ಮತ್ತು ಮಿಸಸ್​ ಫನ್ನಿ ಬೊನ್ಸ್​'' ಮತ್ತು ದಿ ಲೆಜೆಂಡ್​ ಆಫ್​ ಲಕ್ಷ್ಮಿ ಪ್ರಸಾದ್''​ ಪುಸ್ತಕಗಳನ್ನು ಹೊರ ತಂದಿದ್ದಾರೆ.

ಇನ್ನು ಇತ್ತೀಚೆಗೆ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಟ್ವಿಂಕಲ್​ ಖನ್ನಾ ಗಂಡ, ನಟ ಅಕ್ಷಯ್​ ಕುಮಾರ್ ಪ್ರಶ್ನೆಯೊಂದನ್ನು ಹಾರಿ ಬಿಟ್ಟಿದ್ದಾರೆ. ಈ ಕುರಿತ ವಿಡಿಯೋವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಪುಸ್ತಕದಲ್ಲಿ ಎಲ್ಲ ಪ್ರಮುಖ ಪಾತ್ರಗಳು ಪುರುಷರದ್ದೇ ಆಗಿದೆ. ಪುರುಷರು ಅಪ್ರಸ್ತುತರಾ ಎಂಬುದನ್ನು ನಾನು ತಿಳಿಯಬೇಕಿದೆ ಎಂದಿದ್ದಾರೆ ನಟ ಅಕ್ಷಯ್​. ಇದಕ್ಕೆ ಉತ್ತರಿಸಿರುವ ಲೇಖಕಿ ಟ್ವಿಂಕಲ್​ ಖನ್ನಾ, ಸಂತೋಷಿಸಲು ನಿಮಗೆ ಡೆಸರ್ಟ್​​ ಬೇಕು ಅಲ್ವಾ​. ಪುರುಷರು ನಮ್ಮ ಜೀವನದಲ್ಲಿ ಪ್ರಮುಖ ವಿಷಯದಲ್ಲಿ ಬೇಕಾಗುತ್ತಾರೆ. ನೀವು ಓದಲು ಹೋಗುತ್ತೇವೆ ಎಂದಾಗಲೂ ಅವರು ನಿಮಗೆ ಬೆಂಬಲ ನೀಡದಿದ್ದರೆ, ನಿಮ್ಮ ಓದಿನ ಕನಸು ನನಸಾಗದು ಎಂದು ಹೇಳುವ ವಿಡಿಯೋ ಇದರಲ್ಲಿ ಕಾಣಬಹುದಾಗಿದೆ.

ನಟಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಇದಕ್ಕೆ ಅಡಿ ಬರಹ ಬರೆದಿರುವ ನಟಿ, ವೆಲ್​ ಕಮ್​ ಟು ಪ್ಯಾರಡೈಸ್​​​ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೇಳಿದ ಪ್ರಶ್ನೆ ನನನ್ನು ಕ್ಷಣಕಾಲ ಮೂಕರನ್ನಾಗಿ ಮಾಡಿತು. ಇದಕ್ಕೆ ಸೂಕ್ತವಾದ ಉತ್ತರ ನೀಡಲು ನನ್ನ ಮೆದುಳು ಕೆಲವು ಕ್ಷಣ ಯೋಚಿಸಿದೆ. ನನ್ನ ಜಾಗದಲ್ಲಿ ನೀವಿದಿದ್ದರೆ ಏನು ಉತ್ತರ ಕೊಡುತ್ತಿದ್ದೀರಿ? ಪುಸ್ತಕ ಓದುವಾಗ ಪುರುಷರು ಅಪ್ರಸ್ತುತರು ಎಂದು ನಿಮಗೆ ಅನಿಸಿದೆಯಾ ಎಂದು ಕೇಳಿದ್ದಾರೆ.

ಹೆಂಡತಿಯ ಈ ಕೆಲಸಕ್ಕೆ ನಟ ಅಕ್ಷಯ್​ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟ್ವಿಂಕಲ್​ ಪುಸ್ತಕ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಹೆಮ್ಮೆ, ಹೆಮ್ಮೆ, ಹೆಮ್ಮೆ. ನೀನು ಯಾವಾಗಲೂ ನನ್ನನ್ನು ಹಾಗೇ ಮಾಡಿದ್ದೀಯಾ. ಅದು ಬರವಣಿಗೆ ವಿಚಾರ ಆಗಿರಬಹುದು. 40 ವರ್ಷದಲ್ಲಿ ವಿಶ್ವವಿದ್ಯಾಲಯಕ್ಕೆ ವಿಷಯ ಆಗಿರಬಹುದು. ನಿನ್ನ ಪುಸ್ತಕ ನನ್ನನ್ನು ಈಗಾಗಲೇ ಸೆಳೆದಿದೆ ಶುಭಾಶಯಗಳು ಎಂದು ಅಡಿ ಬರಹ ಬರೆದಿದ್ದಾರೆ

ಇನ್ನು ನಟನೆಯ ವಿಚಾರದಲ್ಲಿ ನಟ ಅಕ್ಷಯ್​​, ಆಲಿ ಅಬ್ಬಾಸ್​ ಜಾಫರ್​ ಅವರ ಬಡೇ ಮಿಯಾ ಚೋಟೆ ಮಿಯಾ ಚಿತ್ರದಲ್ಲಿ ಟೈಗರ್​ ಶ್ರಾಫ್​ ಜೊತೆ ನಟಿಸುತ್ತಿದ್ದಾರೆ. ಜೊತೆಗೆ ಸಂಜಯ್​ ದತ್​​, ರವಿನಾ ಟಂಡನ್​, ಜಾಕ್ವಲಿನ್​ ಫರ್ನಾಂಡಿಸ್​, ಪರೇಶ್​ ರಾವಲ್​ ಮತ್ತಿತ್ತರ ಜೊತೆಗೆ ''ವೆಲ್​ಕಮ್​ ಟು ದಿ ಜಂಗಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬಹುನಿರೀಕ್ಷಿತ ​​'ಇಂಡಿಯನ್ ಪೊಲೀಸ್ ಫೋರ್ಸ್‌' ಟೀಸರ್​ ರಿಲೀಸ್

ABOUT THE AUTHOR

...view details