ಮುಂಬೈ: ನಟ ಅಕ್ಷಯ್ ಕುಮಾರ್ ಮತ್ತು ಪರಿಣಿತಿ ಚೋಪ್ರಾ ಅಭಿನಯದ 'ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ' ಚಿತ್ರ ಘೋಷಣೆಯಾದಾಗಿನಿಂದ ಸದ್ದು ಮಾಡಿದ ಹಾಗೂ ಚರ್ಚೆಗೆ ಒಳಪಟ್ಟ ಚಿತ್ರವಾಗಿದೆ. ಈ ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.
ಈ ಕುರಿತು ಹೊಸ ಮಾಹಿತಿ ಹಂಚಿಕೊಂಡಿರುವ ಚಿತ್ರ ವಿಶ್ಲೇಷಕ ತರಣ್ ಆದರ್ಶ್, ಅಕ್ಷಯ್ ಕುಮಾರ್ ಅವರ 'ದಿ ಗ್ರೇಟ್ ಇಂಡಿಯನ್ ರೆಸ್ಕೂ' ಚಿತ್ರ ಅಕ್ಟೋಬರ್ 5ಕ್ಕೆ ಬಿಡುಗಡೆಗೆ ಸಜ್ಜಾಗಿದೆ ಎಂದಿದ್ದಾರೆ. ಈ ಚಿತ್ರವನ್ನು ಟಿನು ಸುರೇಶ್ ದೇಸಾಯಿ ನಿರ್ಮಿಸಿದ್ದು, ವಶುಭಗ್ನಾನಿ, ದೀಪ್ಶೀಖಾ ದೇಶ್ಮುಖ್, ಜಾಕಿ ಭಗ್ನಾನಿ ಮತ್ತು ಅಜಯ್ ಕಪೂರ್ ನಿರ್ಮಾಣ ಮಾಡಿದ್ದಾರೆ.
ದೇಶದ ಮೊದಲ ಕಲ್ಲಿದ್ದಲು ಗಣಿ ರಕ್ಷಣಾ ಮಿಷನ್ನ ನೇತೃತ್ವದ ವಹಿಸಿದ್ದ ಶ್ರೀ ಜಸ್ವಂತ್ ಸಿಂಗ್ ಗಿಲ್ ಅವರ ಜೀವಾನಾಧಾರಿತ ಕಥೆಯ ಚಿತ್ರ ಇದಾಗಿದೆ. ಇದೇ ಅಕ್ಟೋಬರ್ 5 ರಂದು ಚಿತ್ರ ವರ್ಲ್ಡ್ ವೈಡ್ ಥಿಯೇಟರ್ನಲ್ಲಿ ಬಿಡುಗಡೆಯಾಗಲಿದೆ. 2019ರಲ್ಲಿ ಕೇಸರಿ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಮತ್ತು ನಟಿ ಪರಿಣಿತಿ ಚೋಪ್ರಾ ಒಟ್ಟಿಗೆ ನಟಿಸಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಈ ಚಿತ್ರ ಯಶಸ್ವಿಯಾಗಿದೆ. ಇದಾದ ಬಳಿಕ ಮತ್ತೊಮ್ಮೆ ಈ ಜೋಡಿ ಈ ಚಿತ್ರದಲ್ಲಿ ಜೊತೆಯಾಗಿದ್ದಾರೆ.
ಇನ್ನು ನಟ ಅಕ್ಷಯ್ ಕುಮಾರ್ ನಿರ್ದೇಶಕ ಟಿನು ಸುರೇಶ್ ದೇಸಾಯಿ ಕೂಡ ಒಟ್ಟಾಗಿ ಕೆಲಸ ಮಾಡುತ್ತಿರುವ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ಈ ಜೋಡಿ 'ರುಸ್ತುಂ' ಎಂಬ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಕೆಲಸ ಮಾಡಿದ್ದರು. ಈ ಹಿಂದೆ ಈ ಚಿತ್ರದ ಕೆಲವು ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ನಟ ಅಕ್ಷಯ್ ಕೆಂಪು ಬಣ್ಣದ ಟರ್ಬನ್ (ಪಂಜಾಬಿಗಳು ತಲೆಗೆ ಕಟ್ಟುವ ಪೇಟ) ಮತ್ತು ಸ್ಟ್ರಿಪಡ್ ಶರ್ಟ್ ಮತ್ತು ರಿಡೀಂಗ್ ಗ್ಲಾಸ್ನಲ್ಲಿದ್ದ ಸಿನಿಮಾದ ದೃಶ್ಯಗಳು ಸೋರಿಕೆ ಆಗಿದ್ದವು.
ಈ ಚಿತ್ರದ ಹೊರತಾಗಿ ನಟ ಅಕ್ಷಯ್ ಕುಮಾರ್ 'ಒಎಂಜಿ- ಒ ಮೈ ಗಾಡ್ '2 ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಯಾಮಿ ಗೌತಮ್ ಮತ್ತು ಪಂಕಹ್ ತ್ರಿಪಾಠಿ ಕೂಡ ಬಣ್ಣ ಹಚ್ಚಿದ್ದಾರೆ, ಈ ಚಿತ್ರ ಇದೇ ಆಗಸ್ಟ್ 11ಕ್ಕೆ ಬಿಡುಗಡೆ ಕಾಣಲಿದೆ.
ಇದರ ಜೊತೆಗೆ ನಟ ಸೂರ್ಯ ನಟಿಸಿದ್ದ ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾ 'ಸೂರರೈ ಪೊಟ್ರು'ವಿನ ಹಿಂದಿ ರಿಮೇಟ್ನಲ್ಲಿ ಕೂಡ ನಟಿಸುತ್ತಿದ್ದು, ಈ ಚಿತ್ರದ ಶೀರ್ಷಿಕೆ ಇನ್ನು ಅಂತಿಮವಾಗಿಲ್ಲ. ಈ ಚಿತ್ರ ಇದೇ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ನಟಿ ರಾಧಿಕಾ ಮದನ್ ಮತ್ತು ಪರೇಶ್ ರಾವಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಹೊರತಾಗಿ ನಟ ಅಕ್ಷಯ್ ಕುಮಾರ್ ಟೈಗರ್ ಶ್ರಾಫ್ ಅವರು ಆ್ಯಕ್ಷನ್ ಥ್ರಿಲ್ಲರ್ 'ಬಡೇ ಮಿಯಾನ್ ಚೋಟೆ ಮಿಯಾನ್ವಿಚ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2024ರ ಈದ್ಗೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ನಟ ಶಾರುಖ್ ಖಾನ್ಗೆ ಮುತ್ತಿಟ್ಟ ಮಹಿಳಾ ಅಭಿಮಾನಿ: ವಿಡಿಯೋ ವೈರಲ್, ನೆಟಿಜನ್ಸ್ ಅಸಾಮಾಧಾನ