ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಕೊನೆಯ ಸಿನಿಮಾ ಓ ಮೈ ಗಾಡ್ 2. ಕಾಮಿಡಿ ಸಿನಿಮಾದ ಪೋಸ್ಟರ್‌ಗಳು ಮತ್ತು ಟ್ರೇಲರ್ ಬಿಡುಗಡೆಯಾದಾಗ ವಿವಾದ ಎದುರಿಸಿತ್ತು. ನಂತರ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಒಪ್ಪಿಗೆ ಪಡೆದು ಆಗಸ್ಟ್ 11 ರಂದು ಸಿನಿಮಾ ಬಿಡುಗಡೆ ಆಯಿತು. ಆದರೆ ಅಕ್ಷಯ್ ಕುಮಾರ್ ಅವರನ್ನು ಈ ಚಿತ್ರದಲ್ಲಿ ಶಿವನ ಸಂದೇಶವಾಹಕ ಎಂದು ಚಿತ್ರಿಸಿರುವುದಕ್ಕೆ ಕೆಲ ನೆಟಿಜನ್ಗಳು ಮತ್ತು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದರು.
ಇತ್ತೀಚಿನ ಸಂದರ್ಶನದಲ್ಲಿ ನಾಯಕ ನಟ ಅಕ್ಷಯ್ ಕುಮಾರ್ ಅವರು, ಚಿತ್ರದ ಪ್ರಮಾಣೀಕರಣ ಮತ್ತು ಒಟಿಟಿ ಬಿಡುಗಡೆ ಸುತ್ತ ಇರುವ ವಿವಾದದ ಕುರಿತು ಮಾತನಾಡಿದರು. ''ಮಕ್ಕಳಿಗಾಗಿಯೇ ಸಿನಿಮಾ ಮಾಡಿದ್ದೆ, ಮಕ್ಕಳಿಗೆ ತೋರಿಸಬೇಕಾದ ಸಿನಿಮಾ ಇದು. ಆದರೆ ದುರಾದೃಷ್ಟವಶಾತ್, ಅಡಲ್ಟ್ ಸರ್ಟಿಫಿಕೇಟ್ ಸಿಕ್ಕ ಹಿನ್ನೆಲೆ ಸಿನಿಮಾವನ್ನು ಮಕ್ಕಳಿಗೆ ತೋರಿಸಲು ಸಾಧ್ಯವಾಗಲಿಲ್ಲ'' ಎಂದು ತಿಳಿಸಿದರು.
''ಒಟಿಟಿ ಆವೃತ್ತಿ ಕೂಡ ಥಿಯೇಟರ್‌ನಲ್ಲಿದ್ದ ದೃಶ್ಯವನ್ನೇ ಹೊಂದಿದೆ. ನಾನು ಸೆನ್ಸಾರ್ ಮಂಡಳಿಯನ್ನು ಗೌರವಿಸುತ್ತೇನೆ. ಸೆನ್ಸಾರ್ ಮಂಡಳಿಯಿಂದ ಅನುಮೋದಿಸಿದ ದೃಶ್ಯ / ಸಿನಿಮಾವನ್ನೇ ನಾನು ವಿತರಿಸಿದ್ದೇನೆ" - ನಟ ಅಕ್ಷಯ್ ಕುಮಾರ್.
ಈ ರೀತಿಯ ಸಿನಿಮಾಗಳನ್ನು ಮಾಡುವುದರ ಹಿಂದಿನ ಉದ್ದೇಶವನ್ನೂ ಕೂಡ ನಟ ಬಹಿರಂಗಪಡಿಸಿದರು. ಇದು ನಾನು ನನ್ನ ಸಮಾಜಕ್ಕೆ ಹಿಂದಿರುಗಿಸಿ ಕೊಡುವ ಒಂದು ಮಾರ್ಗ ಎಂದು ಅಕ್ಷಯ್ ಕುಮಾರ್ ತಿಳಿಸಿದರು. ಮಾತು ಮುಂದುವರಿಸಿದ 56ರ ಹರೆಯದ ನಟ, ರೌಡಿ ರಾಥೋರ್, ಸೂರ್ಯವಂಶಿ ಅಥವಾ ಸಿಂಗ್ ಈಸ್ ಕಿಂಗ್ ನಂತಹ ಸಿನಿಮಾ ಮಾಡಿದರೆ ನನ್ನ ಗಳಿಕೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತದೆ ಎಂಬುದು ಅರಿವಿದೆ. ಆದರೆ, ಸಮಾಜದಲ್ಲಿ ಬೇರೂರಿರುವ ಪ್ರಮುಖ ವಿಷಯಗಳ ಮೇಲೆ ಮತ್ತು ಸಮಾಜದಲ್ಲಿನ ನಿಷೇಧಿತ ವಿಷಯಗಳ ಮೇಲೆ ಸಿನಿಮಾ ಮಾಡಲು ಇಷ್ಟಪಡುತ್ತೇನೆ. ಇಂತಹ ಸಿನಿಮಾಗಳಿಂದ ತಾನು ಹೆಚ್ಚು ಗಳಿಸುವುದಿಲ್ಲ ಎಂಬುದು ನನಗೆ ತಿಳಿದಿದೆ, ಇದು ಕೇವಲ ಹಣದ ವಿಷಯಲ್ಲ. ಸಮಾಜಕ್ಕೆ ಕೊಡುವ ಒಂದು ಸಂದೇಶದ ವಿಷಯ ಎಂಬುದನ್ನು ನಟ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:'ಬರ್ಕಳಿ ಡೇಟು, ಹತ್ತಿ ಕೆಂಪ್ ಬಸ್ಸು': ಟಗರು ಪಲ್ಯ ರಿಲೀಸ್ ಡೇಟ್ ಅನೌನ್ಸ್
ಅಮಿತ್ ರೈ ನಿರ್ದೇಶನದ ಓಎಂಜಿ 2 ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಪೋಸ್ಟರ್‌ಗಳು, ಟೀಸರ್, ಹಾಡು, ಟ್ರೇಲರ್ ಬಿಡುಗಡೆ ಆದಾಗ ಸಖತ್ ಸದ್ದು ಮಾಡಿ, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಆದಾಗ್ಯೂ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಕೆಲ ಸೀನ್ಗಳನ್ನು ಕಟ್ ಮಾಡಿ ಚಲನಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡಿದೆ. ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿದೆ.
ಇದನ್ನೂ ಓದಿ:ಬಿಗ್ ಬಾಸ್ಗೆ ಸಿಪಾಯಿಯಾಗಿ ಎಂಟ್ರಿ ಕೊಟ್ಟ 'ಒಳ್ಳೆ ಹುಡ್ಗ' ಪ್ರಥಮ್: ಕುತೂಹಲ ಹೆಚ್ಚಿಸಿದ ಪ್ರೋಮೋ