ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ 'ರಕ್ಷಾ ಬಂಧನ'ದ 'ತೇರೆ ಸಾಥ್ ಹೂ ಮೈನ್' ಶೀರ್ಷಿಕೆಯ ಮೊದಲ ಹಾಡು ಬುಧವಾರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಅಕ್ಷಯ್ ಕುಮಾರ್, ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳಲ್ಲಿ 'ರಕ್ಷಾ ಬಂಧನ' ಅತ್ಯುತ್ತಮ ಚಿತ್ರ. ಮೊದಲು ಸಿನಿಮಾ ಕುರಿತು ನಿರ್ದೇಶಕರು ನನ್ನ ಬಳಿ ಎರಡು ಲೈನ್ ಸ್ಟೋರಿ ಹೇಳಿದ್ದರು. ನಾನು ಚಿತ್ರ ಮಾಡೋಣ ಎಂದೆ, ಅತ್ಯಂತ ಸಂತೋಷದಿಂದ ಈ ಚಿತ್ರದಲ್ಲಿ ಕೆಲಸ ಮಾಡಿದೆ. ಸಹೋದರರ ಪ್ರೀತಿಗೆ ಹೋಲಿಸಿದರೆ ಸಹೋದರಿಯರ ಪ್ರೀತಿಯೇ ಮೇಲು. ಕಳೆದ ವರ್ಷ ನನ್ನ ತಾಯಿಯನ್ನ ಕಳೆದುಕೊಂಡೆ, ಈಗ ನನ್ನ ತಂಗಿಯೇ ನನ್ನ ತಾಯಿ ಎಂದು ಭಾವನಾತ್ಮಕವಾದರು.