ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ 'ರಕ್ಷಾ ಬಂಧನ್' ಸಿನಿಮಾ ಮುಂದಿನ ವಾರ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ತಮ್ಮ ಚಿತ್ರದ ಪ್ರಚಾರಕ್ಕಾಗಿ ‘ಸೂಪರ್‌ಸ್ಟಾರ್ ಸಿಂಗರ್ 2' ರಿಯಾಲಿಟಿ ಶೋಗೆ ತೆರಳಿದ್ದ ಅಕ್ಷಯ್, ಸಖತ್ ಎಮೋಷನಲ್ ಆಗಿ ಕಣ್ಣೀರು ಹಾಕಿದ್ದಾರೆ.
ನಟ ಅಕ್ಷಯ್ ಕುಮಾರ್ ಸಾಧ್ಯವಾದಷ್ಟು ಸಮಯವನ್ನ ಕುಟುಂಬದೊಂದಿಗೆ ಕಳೆಯಲು ಇಷ್ಟಪಡುತ್ತಾರೆ. 'ಸೂಪರ್‌ಸ್ಟಾರ್ ಸಿಂಗರ್ 2'ಗೆ ಅತಿಥಿಯಾಗಿ ಆಗಮಿಸಿದ್ದ ವೇಳೆ ಸಹೋದರಿ ಅಲ್ಕಾ ಭಾಟಿಯಾ ಅವರಿಂದ ಅಚ್ಚರಿಯ ಆಡಿಯೋ ಸಂದೇಶ ಕೇಳಿದ ನಂತರ ನಟ ಕಣ್ಣೀರಿಟ್ಟರು. ಆಡಿಯೋದಲ್ಲಿ ಅಲ್ಕಾ ಭಾಟಿಯಾ ಸಹೋದರನ ಪ್ರೀತಿಯನ್ನ ಹಾಡಿ ಹೊಗಳಿದ್ದಾರೆ. ಅಕ್ಷಯ್ ಕುಮಾರ್ ಕೇವಲ ಅಣ್ಣನಷ್ಟೇ ಅಲ್ಲ, ತಂದೆ - ತಾಯಿ, ಗೆಳೆಯನ ಸ್ಥಾನವನ್ನು ತುಂಬಿದ್ದಾರೆ ಎಂದಿದ್ದಾರೆ.