ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಈ ವರ್ಷದ ಮೂರನೇ ಚಿತ್ರವನ್ನು ಘೋಷಿಸಿದ್ದಾರೆ. ಬಚ್ಚನ್ ಪಾಂಡೆ ಮತ್ತು ಸಾಮ್ರಾಟ್ ಪೃಥ್ವಿರಾಜ್ ಚಿತ್ರಗಳ ನಂತರ 'ರಕ್ಷಾ ಬಂಧನ' ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಪೋಸ್ಟರ್ ಹರಿಬಿಡುವ ಮೂಲಕ ತಮ್ಮ ಮೂರನೇ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಕ್ಷಯ್ಕುಮಾರ್ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಸಿನಿಮಾದ ಮೊದಲ ಪೋಸ್ಟರ್ ಹಂಚಿಕೊಳ್ಳುವ ಮೂಲಕ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ರಕ್ಷಾಬಂಧನ್ ಎಂದು ಹೆಸರಿಸಲಾದ ಈ ಸಿನಿಮಾ ಅಣ್ಣ-ತಂಗಿಯರ ಬಾಂಧವ್ಯದ ಬಗೆಗಿನ ಕಥಾಹಂದರ ಹೊಂದಿದೆ. ಚಿತ್ರದ ಟ್ರೈಲರ್ ಅನ್ನು ಜೂನ್ 21ರಂದು ಬಿಡುಗಡೆ, ಆಗಸ್ಟ್ 11 ರಂದು ಸಿನಿಮಾ ತೆರೆ ಮೇಲೆ ಬರಲಿದೆ ಎಂದು ತಿಳಿಸಿದ್ದಾರೆ.
'ಸಹೋದರಿಯರು ಪ್ರಾಣವಿದ್ದಂತೆ. ಸಹೋದರರು ಮುರಿಯಲಾಗದ ಪ್ರೀತಿಯ ಬಂಧದೊಂದಿಗೆ ಬಂಧಿಸಲ್ಪಟ್ಟಿದ್ದಾರೆ. ಅಂತಹ ಅದ್ಭುತ ಜಗತ್ತಿನಲ್ಲಿ ಒಂದು ನೋಟ ಬೀರುವ ನಮ್ಮ ಪ್ರಯತ್ನ ಇಲ್ಲಿದೆ. ಸಿನಿಮಾ ಟ್ರೈಲರ್ ಇದೇ ಜೂನ್ 21 ರಂದು, ಸಿನಿಮಾ ಆಗಸ್ಟ್ 11 ರಂದು ಥಿಯೇಟರ್ಗಳಿಗೆ ಬರಲಿದೆ' ಎಂದು ಬರೆದುಕೊಂಡಿದ್ದಾರೆ.
ಆನಂದ್ ಎಲ್ ರೈ ನಿರ್ದೇಶನದ ರಕ್ಷಾ ಬಂಧನ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ತೆರೆಕಾಣುವ ಸಮಯದಲ್ಲೇ ಇದೂ ಪರದೆಗೆ ಬರಲಿದೆ. ಹೀಗಾಗಿ ಎರಡೂ ಸಿನಿಮಾಗಳ ಮಧ್ಯೆ ಪೈಪೋಟಿ ಇರಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.
ಓದಿ:ತಂದೆಯಾಗುವುದರ ಅರ್ಥವನ್ನು ನನಗೆ ತೋರಿಸಿದ್ದೀರಿ ನನ್ನಾ: ಶುಭಾಶಯ ಕೋರಿದ ಮಹೇಶ್ ಬಾಬು