ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ದಿಶಾ ಪಟಾನಿ, ಮೌನಿ ರಾಯ್ ಮತ್ತು ಸೋನಮ್ ಬಾಜ್ವಾ ಅವರೊಂದಿಗೆ ಮಾರ್ಚ್ 1 ರಂದು ದಿ ಎಂಟರ್ಟೈನರ್ಸ್ ಕಾರ್ಯಕ್ರಮಕ್ಕಾಗಿ ಅಮೆರಿಕದ ಅಟ್ಲಾಂಟಾಗೆ ಹಾರಿದ್ದಾರೆ. ಇವರೊಂದಿಗೆ ನೋರಾ ಫತೇಹಿ ಮತ್ತು ಅಪರಶಕ್ತಿ ಖುರಾನಾ ಕೂಡ ಸೇರಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅವರು ಈವೆಂಟ್ಗೆ ಮುಂಚಿತವಾಗಿ ಉಳಿದ ತಾರೆಯರೊಂದಿಗೆ ತಮ್ಮ ಲೈವ್ ಸ್ಟೇಜ್ ಪ್ರದರ್ಶನಕ್ಕಾಗಿ ಪೂರ್ವಾಭ್ಯಾಸ ಮಾಡಿದ್ದರು.
ಈವೆಂಟ್ ಪ್ರಾರಂಭಕ್ಕೂ ಮೊದಲು ತಂಡವು ಗಾಯತ್ರಿ ಮಂತ್ರವನ್ನು ಪಠಿಸುತ್ತಿರುವ ವಿಡಿಯೋವನ್ನು ನಟ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ದೇವರ ಹೆಸರಿನಲ್ಲಿ ದಿ ಎಂಟರ್ಟೈನರ್ಸ್ ಶೋ ಸ್ಟಾರ್ಟ್ ಮಾಡೋಣ. ಉತ್ತಮ ಪ್ರದರ್ಶನಕ್ಕಾಗಿ ಎದುರು ನೋಡುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಕಪ್ಪು ಟೀ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುವುದನ್ನು ಕಾಣಬಹುದು. ಕೆಲವು ನೆಟ್ಟಿಗರು ವಿಡಿಯೋವನ್ನು ಶ್ಲಾಘಿಸಿದ್ದು, ಇನ್ನು ಕೆಲವರು ಟೀಕಿಸಿದ್ದಾರೆ.
ಇದನ್ನೂ ಓದಿ:'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಶೂಟಿಂಗ್ಗಾಗಿ ಕಾಶ್ಮೀರದಲ್ಲಿ ಕಾಣಿಸಿಕೊಂಡ ಆಲಿಯಾ ಭಟ್
"ಯಾವುದೇ ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ಗಾಯತ್ರಿ ಮಂತ್ರ ಪಠಿಸುವುದು ಒಳ್ಳೆಯ ವಿಷಯ. ನಿಮ್ಮ ಶೋ ಯಶಸ್ಸು ಕಾಣಲಿ" ಎಂದು ಕೆಲವು ಅಭಿಮಾನಿಗಳು ಸಕಾರಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ. ಆದರೆ, ಇನ್ನು ಕೆಲವರು ನಕಾರಾತ್ಮಕವಾಗಿ ಮಾತನಾಡಿದ್ದಾರೆ. "ಗಾಯಂತ್ರಿ ಮಂತ್ರ ಪಠಣ ಸರಿಯಲ್ಲ" ಎಂಬುದಾಗಿ ಹೇಳಿದ್ದಾರೆ.