ಕರ್ನಾಟಕ

karnataka

ETV Bharat / entertainment

'ಪೃಥ್ವಿರಾಜ್' ಪೋಸ್ಟರ್​ನಲ್ಲಿ ಅಕ್ಷಯ್​ ಕುಮಾರ್​ 30 ವರ್ಷದ ಸಿನಿ ಪಯಣ ಅನಾವರಣ - ಅಕ್ಷಯ್​ ಕುಮಾರ್​ ಮುವತ್ತು ವರ್ಷದ ಸಿನಿ ಪಯಣ

ಹಿಂದಿ ಖ್ಯಾತ ನಟ ಅಕ್ಷಯ್​ ಕುಮಾರ್​ ಚಿತ್ರರಂಗದಲ್ಲಿ ಪಯಣ ಆರಂಭಿಸಿ ಮೂರು ದಶಕದವಾದ ಹಿನ್ನೆಲೆಯಲ್ಲಿ ಪೃಥ್ವಿರಾಜ್ ಸಿನಿಮಾ ತಂಡ ಅಕ್ಷಯ್​ ಅವರ ಸಿನಿ ಪಯಣದ ಪೋಸ್ಟರ್​ ಬಿಡುಗಡೆ ಮಾಡಿದೆ.

Akshay Kumar 30 years
'ಪೃಥ್ವಿರಾಜ್' ಪೋಸ್ಟರ್​ನಲ್ಲಿ ಅಕ್ಷಯ್​ ಕುಮಾರ್​ ಮುವತ್ತು ವರ್ಷದ ಸಿನಿ ಪಯಣ

By

Published : May 4, 2022, 7:41 PM IST

ಮುಂಬೈ: ಬಾಲಿವುಡ್​ನ​ ಖ್ಯಾತ ನಟ ಅಕ್ಷಯ್​ ಕುಮಾರ್​ ಚಿತ್ರರಂಗದಲ್ಲಿ ಪಯಣ ಆರಂಭಿಸಿ ಮೂರು ದಶಕದ ಸಂಭ್ರಮದಲ್ಲಿದ್ದಾರೆ. 30 ವರ್ಷಗಳ ಕಾಲ ಪ್ರೀತಿ ನೀಡಿ ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಅಕ್ಷಯ್​ ಅವರು ಧನ್ಯವಾದ ತಿಳಿಸಿದ್ದಾರೆ. ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಜೀವನಾಧಾರಿತ ಅವರ ಇತ್ತೀಚಿನ ಚಿತ್ರ 'ಪೃಥ್ವಿರಾಜ್' ಬಿಡುಗಡೆಗೆ ಮುಂಚಿತವಾಗಿ, ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಅಕ್ಷಯ್​ ಅವರು ನಟಿಸಿದ ಪ್ರತಿಯೊಂದು ಚಲನಚಿತ್ರವನ್ನು ಒಳಗೊಂಡಿರುವ ಪೋಸ್ಟರ್ ಅ​ನ್ನು ಬಿಡುಗಡೆ ಮಾಡಿದೆ.

ಯಶ್ ರಾಜ್ ಫಿಲ್ಮ್ಸ್‌ನ ಟ್ವಿಟರ್​ ಖಾತೆಯು ವಿಡಿಯೋವನ್ನು ಪೋಸ್ಟ್ ಮಾಡಿದೆ, ಇದರಲ್ಲಿ ಪೃಥ್ವಿರಾಜ್ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಅವರ ಉಪಸ್ಥಿತಿಯಲ್ಲಿ ಅಕ್ಷಯ್​ ಕುಮಾರ್ ವಿಶೇಷ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಚಿತ್ರರಂಗದಲ್ಲಿ 30 ವರ್ಷ ಕಳೆದಿರುವ ಬಗ್ಗೆ ನನಗೆ ತಿಳಿದಿರಲಿಲ್ಲ. ಇದನ್ನು ನನಗೆ ಉಡುಗೊರೆಯಾಗಿ ನೀಡಿದ್ದಕ್ಕಾಗಿ ಆದಿತ್ಯ ಚೋಪ್ರಾ ಅವರಿಗೆ ಧನ್ಯವಾದಗಳು. ಬಾಬ್ ಕ್ರಿಸ್ಟೋ ಅವರೊಂದಿಗೆ ಊಟಿಯಲ್ಲಿ ಮೊದಲ ಶಾಟ್ ನೀಡಿದ್ದು, ನನಗೆ ಇನ್ನೂ ನೆನಪಿದೆ ಎಂದು ಅಕ್ಷಯ್​ ಹೇಳಿಕೊಂಡಿದ್ದಾರೆ.

ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಕ್ಷಯ್​ ನಟಿಸಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ದೂರದರ್ಶನದಲ್ಲಿ ನಿರ್ದೇಶಿಸಿ ನಟಿಸಿರುವ 'ಚಾಣಕ್ಯ' ಮತ್ತು 'ಪಿಂಜಾರ್' ಹಾಗೇ 'ಸೌಗಂಧ' ಚಿತ್ರದಿಂದ 'ಪೃಥ್ವಿರಾಜ್' ವರೆಗಿನ ನಿಮ್ಮ ಪಯಣ ಎಂದು ದ್ವಿವೇದಿ ಹೇಳಿದ್ದಾರೆ.

ಅಕ್ಷಯ್​ ಕುಮಾರ್​ ಕೂಡ ಟ್ವಿಟರ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡು, ಮೂವತ್ತು ವರ್ಷಗಳ ಸಿನಿಮಾದ ಪಯಣದಿಂದ ನನ್ನ ಜೀವಿತಾವಧಿಯ ತುಂಬಾ ನಿಮ್ಮ ಪ್ರೀತಿ ಸಿಕ್ಕಿದೆ. ಈ ಅದ್ಭುತ ಪ್ರಯಾಣಕ್ಕೆ ಧನ್ಯವಾದಗಳು. ಜೂನ್​ 3ರಂದು ಬಿಡುಗಡೆಯಾಗಲಿರುವ ಪೃಥ್ವಿರಾಜ್ ಸಿನಿಮಾದ ಪೋಸ್ಟರ್​ನೊಂದಿಗೆ ನನ್ನ ಸಿನಿಮಾ ಜರ್ನಿ ಕಟ್ಟಿಕೊಟ್ಟಿದ್ದಕ್ಕೆ ಯಶ್ ರಾಜ್ ಫಿಲ್ಮ್ಸ್‌ಗೆ ಧನ್ಯವಾದಗಳು ಎಂದು ಬರೆದಿದ್ದಾರೆ.

ಮೊದಲ ಸಿನಿಮಾ ಸೌಗಂಧ್​ದಲ್ಲಿ ರಾಜೀವ್ ಭಾಟಿಯಾ ಆಗಿ ರೊಮ್ಯಾಂಟಿಕ್-ಆ್ಯಕ್ಷನ್ ಹೀರೋ ಆಗಿ ಕಂಡಿದ್ದರು. ಈ ಚಿತ್ರ ಜನವರಿ 25, 1991 ರಂದು ಬಿಡುಗಡೆಯಾಗಿತ್ತು. 1990ರ ದಶಕದಲ್ಲಿ ರೊಮ್ಯಾಂಟಿಕ್-ಆ್ಯಕ್ಷನ್ ಹೀರೋ ಆಗಿ ಅಕ್ಷಯ್​ ಅವರನ್ನು ಗುರುತಿಸಲಾಗಿತ್ತು. ನಂತರದ ಖಿಲಾಡಿ ಮತ್ತು ಪ್ರಿಯದರ್ಶನ್ ಅವರ ಹೇರಾ ಫೇರಿ ಹಾಸ್ಯಕ್ಕೂ ಹೆಚ್ಚು ಒತ್ತು ಕೊಟ್ಟು ನಟಿಸಿದ್ದರು.

ಮುಜ್ಸೆ ಶಾದಿ ಕರೋಗಿ, ಗರಂ ಮಸಾಲಾ, ವೆಲ್‌ಕಮ್, ಸಿಂಗ್ ಈಸ್ ಕಿಂಗ್, ಟಾಯ್ಲೆಟ್: ಏಕ್ ಪ್ರೇಮ್ ಕಥಾ (2017), ಪ್ಯಾಡ್‌ಮನ್ (2018), ಮತ್ತು ಮಿಷನ್ ಮಂಗಲ್ (2019) ನಂತಹ ಚಿತ್ರಗಳು ಅಕ್ಷಯ್​ ಅವರಿಗೆ ಹಿಟ್​ ತಂದುಕೊಟ್ಟ ಚಿತ್ರಗಳು. ಸಾಮಾಜಿಕ ಸಮಸ್ಯೆಗಳು ಮತ್ತು ರಾಷ್ಟ್ರೀಯತೆಯ ಕುರಿತಾದ ಸಿನಿಮಾಗಳಲ್ಲೂ ಪಾತ್ರನಿರ್ವಹಿಸುತ್ತಾ ಬಂದರು.

ಪೃಥ್ವಿರಾಜ್​ನಲ್ಲಿ ಸಂಜಯ್ ದತ್, ಸೋನು ಸೂದ್ ಸಹ ನಟಿಸಿದ್ದಾರೆ ಮತ್ತು ಮಿಸ್ ವರ್ಲ್ಡ್ 2017ರ ಮಾನುಷಿ ಛಿಲ್ಲರ್ ಅವರು ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ:ಮೇ 20ರಂದು ಒಟಿಟಿಗೆ ಆರ್​ಆರ್​ಆರ್​ ಸಿನಿಮಾ : ಆದರೆ..?

ABOUT THE AUTHOR

...view details