ಮುಂಬೈ:ತೆಲುವು ನಟ ಗೌತಮ್ ಕೃಷ್ಣರ ಚೊಚ್ಚಲ ಸಿನಿಮಾ "ಆಕಾಸ ವೀದುಲ್ಲೋ" ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಅದರಲ್ಲಿ ನಟಿ ಪೂಜಿತಾ ಪೊನ್ನಡ ಅವರಿಗೆ ಲಿಪ್ಲಾಕ್ ಮಾಡಿದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಸಿನಿಮಾದ ರೊಮ್ಯಾಂಟಿಕ್ ಹಾಡಾದ ಅಯ್ಯಯ್ಯಯ್ಯೋದಲ್ಲಿ ಪೂಜಿತಾ ಮತ್ತು ಗೌತಮ್ ಕೃಷ್ಣ ಚುಂಬಿಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಲಿಪ್ಲಾಕ್ ಮಾಡಿದ್ದು, ಈ ದೃಶ್ಯ ಚರ್ಚಿತ ವಿಷಯವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಗೌತಮ್ ಕೃಷ್ಣ, ಹಾಡಿನಲ್ಲಿ ಪ್ರಣಯವನ್ನು ಸುಮಧುರ ಮತ್ತು ನೈಜವಾಗಿ ತೋರಿಸಲು ಈ ರೀತಿ ಚಿತ್ರಿಸಲಾಗಿದೆ. ನಾವು ಟೀಕೆಗಳ ಬಗ್ಗೆ ಚಿಂತಿಸಲಿಲ್ಲ. ಹಾಡಿಗೆ ಜೀವ ತುಂಬಲು ಇದು ಅಗತ್ಯವಾಗಿತ್ತು ಎಂದು ಸಮರ್ಥಿಸಿಕೊಂಡರು. ಸಿನಿಮಾದ ಟ್ರೈಲರ್ ಮತ್ತು ಹಾಡುಗಳು ಜನರಿಗೆ ಇಷ್ಟವಾಗಿವೆ. ಸಕಾರಾತ್ಮಕ ಸ್ಪಂದೆನ ದೊರಕುತ್ತಿದೆ ಎಂದು ಇದೇ ವೇಳೆ ಹೇಳಿದರು.