ಕರ್ನಾಟಕ

karnataka

ETV Bharat / entertainment

ಕ್ಲಾಂತ ಸಿನಿಮಾಗೆ ಸಾಥ್ ಕೊಟ್ಟ ಅಜಯ್ ರಾವ್ - ಕ್ಲಾಂತ ಚಿತ್ರ

ಕ್ಲಾಂತ ಚಿತ್ರದ ಟ್ರೇಲರ್ ತುಂಬಾ ಆ್ಯಕ್ಷನ್​ನಿಂದ ಕೂಡಿದೆ ಎಂದು ನಟ ಅಜಯ್ ರಾವ್ ತಿಳಿಸಿದ್ದಾರೆ.

ಕ್ಲಾಂತ ಸಿನಿಮಾ ತಂಡ
ಕ್ಲಾಂತ ಸಿನಿಮಾ ತಂಡ

By ETV Bharat Karnataka Team

Published : Jan 10, 2024, 6:22 PM IST

ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರೋ ಕ್ಲಾಂತ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ದಿನಾಂಕ ನಿಗದಿಯಾಗಿದೆ. ಟೀಸರ್ ಹಾಗೂ ಹಾಡಿನ ಮೂಲಕ ಸದ್ದು ಮಾಡುತ್ತಿರುವ ಕ್ಲಾಂತ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ SRV ಥಿಯೇಟರ್​ನಲ್ಲಿ ಕ್ಲಾಂತ ಚಿತ್ರದ ಟ್ರೈಲರ್ ಅ​ನ್ನು ನಟ ಅಜಯ್ ರಾವ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಗುಡ್ ಲಕ್ ಹೇಳಿದರು.

ಬಳಿಕ ನಟ ಅಜಯ್ ರಾವ್ ಮಾತನಾಡಿ, ಟ್ರೇಲರ್ ತುಂಬಾ ಆ್ಯಕ್ಷನ್​ನಿಂದ ಕೂಡಿದೆ. ಹೀರೋ, ಹೀರೋಯಿನ್ ಎಲ್ಲರೂ ಚೆನ್ನಾಗಿ ಕಾಣಿಸುತ್ತಿದ್ದಾರೆ. ಒಂದೊಳ್ಳೆ ಪ್ರಯತ್ನ. ಯಾವುದೇ ಆಗಲಿ ಎಲ್ಲದಕ್ಕೂ ಒಂದು ಪ್ರಾರಂಭ ಅಂತಾ ಇರುತ್ತದೆ. ಪ್ರಯತ್ನ ಇರುತ್ತದೆ. ಪ್ರಯತ್ನಕ್ಕೂ, ಪ್ರಾರಂಭಕ್ಕೂ ಒಳ್ಳೆ ಉದ್ದೇಶ ಇದ್ದಾಗ ಗೆಲುವು ಸಿಗಬೇಕು ಎಂದು ಆಶಿಸಬೇಕು. ನಿರ್ದೇಶಕರು ಹಾಗೂ ಅವರ ಸಹೋದರರು ನನ್ನ ಸ್ನೇಹಿತರು. ಹೊಸಬರಿಗೆ ಆದಷ್ಟು ಪ್ರೋತ್ಸಾಹಿ ಎಂದರು.

ನಿರ್ದೇಶಕ ವೈಭವ ಪ್ರಶಾಂತ್ ಮಾತನಾಡಿ, ಕ್ಲಾಂತ ಒಂದೂವರೆ ವರ್ಷದ ಜರ್ನಿ ನನ್ನದು. ಟ್ರೇಲರ್ ಈಗ ರಿಲೀಸ್ ಮಾಡಿದ್ದೇವೆ. ಶೂಟಿಂಗ್​ಗಾಗಿ 34 ರಿಂದ 40 ದಿನ ಕಾಡಲ್ಲೇ ಇದ್ದೆವು. ಸುಬ್ರಹ್ಮಣ್ಯ, ಕುದುರೆಮುಖ ಕಾಡುಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಲಾಕ್ ಡೌನ್ ಟೈಮ್​ನಲ್ಲಿಯೇ ಸ್ಕ್ರಿಪ್ಟ್ ಮಾಡಿದ್ದೇವೆ. ಕ್ಲಾಂತ ಎಂದರೆ ದಣಿವು, ಆಯಾಸ ಎಂದರ್ಥ. ಇದು ಸಂಸ್ಕೃತ ಶಬ್ಧ. ಈ ಮೊದಲು ವೀಕೆಂಡ್ ವಿತ್ ಲವರ್ ಎಂದು ಟೈಟಲ್ ಇಟ್ಟಿದ್ದೆವು. ಆ ಬಳಿಕ ಕ್ಲಾಂತ ಎಂದು ಬದಲಾಯಿಸಿದೆವು. ಸಿನಿಮಾದಲ್ಲಿ ಒಟ್ಟು ಮೂರು ಹಾಡುಗಳಿವೆ ಎಂದು ಹೇಳಿದರು.

ನಟ ವಿಘ್ನೇಶ್‌ ಮಾತನಾಡಿ, ಕನ್ನಡದಲ್ಲಿ ನನ್ನದು ಮೊದಲ ಸಿನಿಮಾ. ಜ.19ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಪ್ರಶಾಂತ್ ಸರ್ ಮತ್ತು ನನ್ನದು ಇದು ಎರಡನೇ ಕಾಂಬಿನೇಷನ್. ದಗಲ್ ಬಾಜಿಲು ಎಂಬ ತುಳು ಚಿತ್ರ ಮಾಡಿದ್ದೆವು. ಅದಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಕ್ಲಾಂತ ಸಿನಿಮಾ ಒಳ್ಳೆ ಸಕ್ಸಸ್ ಸಿಗುತ್ತದೆ ಎಂಬ ಹೋಪ್ ಇದೆ. ಪ್ರತಿಯೊಬ್ಬರೂ ಸಿನಿಮಾ ನೋಡ್ಬೇಕು ಎಂದರು.

ತುಳು ಮತ್ತು ಕೊಂಕಣಿ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿರುವ ನಟ ವಿಘ್ನೇಶ್‌, ಕ್ಲಾಂತ ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಾಯಕಿ ಸಂಗೀತಾ ಭಟ್‌ ಅವರೊಂದಿಗೆ ಶೋಭರಾಜ್‌, ವೀಣಾ ಸುಂದರ್‌, ಸಂಗೀತಾ, ದೀಪಿಕಾ, ಪ್ರವೀಣ್‌ ಜೈನ್‌, ಸ್ವಪ್ನಾ ಶೆಟ್ಟಿಗಾರ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸುಮಾರು ಹನ್ನೆರಡು ವರ್ಷಗಳಿಂದ ಸಕ್ರಿಯರಾಗಿರುವ ವೈಭವ್ ಪ್ರಶಾಂತ್ ಕ್ಲಾಂತ ಸಿನಿಮಾವನ್ನು ನಿರ್ದೇಶಿಸಿದ್ದು, ಸಿನಿಮಾಕ್ಕೆ ಮೋಹನ್‌ ಲೋಕನಾಥನ್‌ ಛಾಯಾಗ್ರಹಣ, ಪಿ. ಆರ್‌ ಸೌಂದರ ರಾಜ್‌ ಸಂಕಲನವಿದೆ. ಈ ಹಿಂದೆ ತೆರೆ ಕಂಡಿದ್ದ ದಗಲ್ ಬಾಜಿಲು ತುಳು ಚಿತ್ರದ ಜೋಡಿ ಆದ ನಿರ್ದೇಶಕ ವೈಭವ್ ಪ್ರಶಾಂತ್ ಹಾಗೂ ನಾಯಕ ವಿಘ್ನೇಶ್ ಮತ್ತೊಮ್ಮೆ ಜೊತೆಯಾಗಿ ಕ್ಲಾಂತ ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ :ಪಿ.ಸಿ. ಶೇಖರ್​​ ನಿರ್ದೇಶನದ 'BAD‌' ಚಿತ್ರದ ಟ್ರೇಲರ್ ಅನಾವರಣಕ್ಕೆ ಮುಹೂರ್ತ ಫಿಕ್ಸ್

ABOUT THE AUTHOR

...view details