ಕರ್ನಾಟಕ

karnataka

ETV Bharat / entertainment

ಅಜಯ್ ದೇವ್​ಗನ್​, ಜ್ಯೋತಿಕಾ, ಮಾಧವನ್ ಹೊಸ ಸಿನಿಮಾ ಶೀರ್ಷಿಕೆ 'ಶೈತಾನ್': ಬಿಡುಗಡೆ ಯಾವಾಗ?

ಅಜಯ್ ದೇವ್​ಗನ್​ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರಕ್ಕೆ 'ಶೈತಾನ್' ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ಜ್ಯೋತಿಕಾ ಮತ್ತು ಆರ್.ಮಾಧವನ್ ಕೂಡ ಇದ್ದಾರೆ.

By ETV Bharat Karnataka Team

Published : Jan 19, 2024, 3:17 PM IST

Shaitaan
ಶೈತಾನ್ ಸಿನಿಮಾ

ಭಾರತೀಯ ಚಿತ್ರರಂಗದ ಬಹುಬೇಡಿಕೆಯ ತಾರೆಯರಾದ ಅಜಯ್ ದೇವ್​ಗನ್​, ಜ್ಯೋತಿಕಾ ಮತ್ತು ಆರ್.ಮಾಧವನ್ ನಟನೆಯ ಸಿನಿಮಾ ಶೀರ್ಷಿಕೆ ಅನಾವರಣಗೊಂಡಿದೆ. ಬಹುನಿರೀಕ್ಷಿತ ಚಿತ್ರಕ್ಕೆ 'ಶೈತಾನ್' (Shaitaan) ಎಂದು ಹೆಸರಿಡಲಾಗಿದೆ. ಚಿತ್ರ ನಿರ್ಮಾಪಕರು ಚಿತ್ರದ ಟೈಟಲ್​​ ಪೋಸ್ಟರ್ ಅನಾವರಣಗೊಳಿಸಿ, ಸಿನಿಮಾ ಬಿಡುಗಡೆ ದಿನಾಂಕವನ್ನೂ ಬಹಿರಂಗಪಡಿಸಿದ್ದಾರೆ.

'ಶೈತಾನ್' ಸಿನಿಮಾದಲ್ಲಿ ಬಾಲಿವುಡ್​ ನಟ ಅಜಯ್​ ದೇವ್​ಗನ್​​ ಬಣ್ಣ ಹಚ್ಚುವ ಜೊತೆಗೆ ಸಹ-ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ಶೈತಾನ್​​ ಮೂಲಕ ಎರಡು ದಶಕಗಳ ಬ್ರೇಕ್​​ ಬಳಿಕ ಜ್ಯೋತಿಕಾ ಹಿಂದಿ ಚಿತ್ರಕ್ಕೆ ಮರಳಿದ್ದಾರೆ. ಆರ್.ಮಾಧವನ್ ಕೂಡ ಅಭಿನಯಿಸಿರೋ ಹಿನ್ನೆಲೆಯಲ್ಲಿ 'ಶೈತಾನ್' 2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ಗಳಲ್ಲಿ ಅಜಯ್​​ ದೇವ್​ಗನ್​​ ಆಕರ್ಷಕ ಟೈಟಲ್​ ಪೋಸ್ಟರ್ ಶೇರ್ ಮಾಡಿದ್ದಾರೆ. ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿರುವ ಅಜಯ್ ಇನ್​ಸ್ಟಾಗ್ರಾಮ್​ನಲ್ಲಿ, "ನಿಮಗಾಗಿ ಶೈತಾನ್ ಬರುತ್ತಿದೆ. 2024ರ ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ" ಎಂದು ಬರೆದುಕೊಂಡಿದ್ದಾರೆ.

ಚಿತ್ರಕ್ಕೆ ವಿಕಾಸ್ ಬಹ್ಲ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಗುಜರಾತಿ ನಟ ಜಾಂಕಿ ಬೋಡಿವಾಲಾ ಅವರ ಹಿಂದಿ ಭಾಷೆಯ ಚೊಚ್ಚಲ ಚಿತ್ರವಿದು. ಜಿಯೋ ಸ್ಟುಡಿಯೋಸ್, ಅಜಯ್ ದೇವಗನ್ ಫಿಲ್ಮ್ಸ್ ಮತ್ತು ಪನೋರಮಾ ಸ್ಟುಡಿಯೋಸ್ ಇಂಟರ್‌ನ್ಯಾಶನಲ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಅಜಯ್ ದೇವಗನ್, ಜ್ಯೋತಿ ದೇಶಪಾಂಡೆ, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ನಿರ್ಮಿಸಿದ್ದಾರೆ. 2023ರ ಜೂನ್​ನಲ್ಲಿ ಸಿನಿಮಾ ಸೆಟ್ಟೇರಿತ್ತು. ಸೂಪರ್​​​ ನ್ಯಾಚುರಲ್​​ ಥ್ರಿಲ್ಲರ್ ಸಿನಿಮಾದ ಹೆಚ್ಚಿನ ಶೂಟಿಂಗ್​​ ಮುಂಬೈ, ಮಸ್ಸೂರಿ ಮತ್ತು ಲಂಡನ್‌ನಲ್ಲಿ ನಡೆಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಕಾಮಿಡಿ ಕಿಲಾಡಿ ಖ್ಯಾತಿಯ ಸೀರುಂಡೆ ರಘು ಈಗ 'ರಣಾಕ್ಷ' ಹೀರೋ

'ಶೈತಾನ್​' ಬ್ಲ್ಯಾಕ್ ಮ್ಯಾಜಿಕ್ ಪ್ರಪಂಚವನ್ನು ಪರಿಶೀಲಿಸಲಿದೆ. ಕ್ವೀನ್, ಸೂಪರ್ 30, ಮತ್ತು ಗುಡ್ ಬೈನಂತಹ ಚಿತ್ರಗಳಿಗೆ ಹೆಸರುವಾಸಿಯಾಗಿರುವ ವಿಕಾಸ್ ಬಹ್ಲ್ ಅವರೊಂದಿಗೆ ಅಜಯ್ ದೇವ್​ಗನ್​​ ಮೊದಲ ಬಾರಿಗೆ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ:ರಾಮನ ಕುರಿತು ಸಂಭಾಷಣೆ ವಿವಾದ: ಕ್ಷಮೆಯಾಚಿಸಿದ ನಯನತಾರಾ

ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅಜಯ್ ದೇವ್​ಗನ್​​ ಇತ್ತೀಚೆಗೆ ತಮಿಳು ಬ್ಲಾಕ್‌ಬಸ್ಟರ್ ಕೈಥಿ ಸಿನಿಮಾದ ಹಿಂದಿ ರೂಪಾಂತರ 'ಭೋಲಾ'ದಲ್ಲಿ ಕಾಣಿಸಿಕೊಂಡಿದ್ದರು. 54ರ ಹರೆಯದ ನಟ, ಅಭಿಷೇಕ್ ಕಪೂರ್ ಅವರ ಮುಂಬರುವ ಆ್ಯಕ್ಷನ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ನಟನ ಸೋದರಳಿಯ ಅಮನ್ ದೇವ್​ಗನ್ ಮತ್ತು ರವೀನಾ ಟಂಡನ್ ಪುತ್ರಿ ರಾಶಾ ಥಡಾನಿ ಅವರ ಚೊಚ್ಚಲ ಚಿತ್ರವೂ ಹೌದು. ಅಲ್ಲದೇ, ರೋಹಿತ್ ಶೆಟ್ಟಿಯವರ ಸಿಂಗಮ್ ಎಗೈನ್ ಮತ್ತು ನೀರಜ್ ಪಾಂಡೆ ಅವರ ಔರಾನ್ ಮೇ ಕಹಾ ದಮ್ ಥಾ ಸೇರಿದಂತೆ ಕೆಲ ಪ್ರಾಜೆಕ್ಟ್​ಗಳನ್ನು ಹೊಂದಿದ್ದಾರೆ. ಮುಂತಾದ ಯೋಜನೆಗಳಿಗೆ ಸಜ್ಜಾಗುತ್ತಿದ್ದಾರೆ. ಮೈದಾನ್ ಮತ್ತು ರೈಡ್ 2 ಕೂಡ ಈ ಪಟ್ಟಿಯಲ್ಲಿದೆ.

ABOUT THE AUTHOR

...view details