ಬಾಲಿವುಡ್ ನಟ ಅಜಯ್ ದೇವಗನ್ ಪ್ರಸ್ತುತ 'ದೃಶ್ಯಂ 2' ಯಶಸ್ಸನ್ನು ಆನಂದಿಸುತ್ತಿದ್ದಾರೆ. ನವೆಂಬರ್ 18ರಂದು ತೆರೆಕಂಡ ಈ ಚಿತ್ರಕ್ಕೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ಅವರ ಮುಂದಿನ ಭೋಲಾ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇದರಲ್ಲಿ ಅಜಯ್ ದೇವಗನ್ ಸಾಹಸಮಯ, ನಿಗೂಢ ಮತ್ತು ಆಕ್ರಮಣಕಾರಿಯಾಗಿ ಕಾಣುತ್ತಾರೆ.
1.21 ನಿಮಿಷಗಳ ಟೀಸರ್ ಒಂದು ಅನಾಥಾಶ್ರಮದಿಂದ ಆರಂಭವಾಗುತ್ತದೆ. ಅನಾಥಾಶ್ರಮದಲ್ಲಿ ಕೆಲಸ ಮಾಡುವವರು ಒರ್ವ ಅನಾಥ ಹುಡುಗಿಗೆ, ನಾಳೆ ಮುಂಜಾನೆ ಬೇಗ ಎದ್ದು ಹೊರಡುವಂತೆ ಹೇಳುತ್ತಾರೆ. ನಿನ್ನನ್ನು ಕರೆದುಕೊಂಡು ಹೋಗಲು ಓರ್ವರು ಬರುತ್ತಿದ್ದಾರೆಂದು ತಿಳಿಸುತ್ತಾರೆ. ಆಗ ಆ ಹುಡುಗಿ ಯಾರೆಲ್ಲಾ ಬರಬಹುದು ಎಂದು ಯೋಚಿಸತೊಡಗುತ್ತಾಳೆ. ಇನ್ನುಳಿದ ಸೀನ್ನಲ್ಲಿ ಅಜಯ್ ದೇವಗನ್ ಎಂಟ್ರಿ. ಅಜಯ್ ದೇವಗನ್ ಜೈಲಿನಲ್ಲಿ ಹಣೆಯ ಮೇಲೆ ಚಿತಾಭಸ್ಮ ಹಾಕಿ, ಕೈಯಲ್ಲಿ ಭಗವದ್ಗೀತೆಯೊಂದಿಗೆ ಕಾಣಿಸಿಕೊಂಡಿದ್ದಾರೆ.
ಜೈಲಿನಿಂದ ಬಿಡುಗಡೆ ಅಗಲಿರುವ ಈ ಕೈದಿ ಮತ್ತು ಅನಾಥ ಹುಡುಗಿಯ ಕಥೆ ಹೇಳಲಿದೆ ಭೋಲಾ ಸಿನಿಮಾ. ಅಜಯ್ ದೇವಗನ್ ಅವರ ಮುಖವು ಟೀಸರ್ನಲ್ಲಿ ಸರಿಯಾಗಿ ಕಂಡಿಲ್ಲ. ಒಟ್ಟಿನಲ್ಲಿ ಅಜಯ್ ದೇವಗನ್, ಟಬು ಮತ್ತು ದಕ್ಷಿಣ ನಟಿ ಅಮಲಾ ಪೌಲ್ ಅಭಿನಯದ ಈ ಚಿತ್ರದ ಬಗ್ಗೆ ಅಭಿಮಾನಿಗಳು ಕುತೂಹಲರಾಗಿದ್ದಾರೆ.