ಸೂಪರ್ ನ್ಯಾಚುರಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಹಿಂದಿ ಸಿನಿಮಾವೊಂದು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಅಜಯ್ ದೇವಗನ್, ಆರ್ ಮಾಧವನ್ ಮತ್ತು ಜ್ಯೋತಿಕಾ ನಟನೆಯ ಹೆಸರಿಡದ ಚಿತ್ರದ ರಿಲೀಸ್ ಡೇಟ್ ಇಂದು ಅನೌನ್ಸ್ ಆಗಿದೆ. ಸೂಪರ್ 30, ಕ್ವೀನ್ ಮತ್ತು ಗುಡ್ ಬೈ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ವಿಕಾಸ್ ಬಹ್ಲ್ ನಿರ್ದೇಶನದಲ್ಲಿ ಈ ತ್ರಿಬಲ್ ಸ್ಟಾರ್ಗಳ ಸಿನಿಮಾ ಮೂಡಿಬರಲಿದೆ.
ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲು ಅಜಯ್ ದೇವಗನ್ ಅವರ ನಿರ್ಮಾಣ ಸಂಸ್ಥೆ ಅಜಯ್ ದೇವಗನ್ ಎಫ್ಫಿಲ್ಮ್ಸ್ ಎಕ್ಸ್ (ಹಿಂದಿನ ಟ್ವಿಟರ್) ವೇದಿಕೆಯನ್ನು ಬಳಸಿಕೊಂಡಿತು. "ಸೂಪರ್ ನ್ಯಾಚುರಲ್ ರೋಲರ್ ಕೋಸ್ಟರ್ ರೈಡ್ಗೆ ಸಿದ್ಧರಾಗಿ! ವಿಕಾಸ್ ಬಹ್ಲ್ ನಿರ್ದೇಶನದಲ್ಲಿ ಅಜಯ್ ದೇವಗನ್, ಆರ್ ಮಾಧವನ್ ಮತ್ತು ಜ್ಯೋತಿಕಾ ಅವರ ಮುಂಬರುವ ಥ್ರಿಲ್ಲರ್ಗಾಗಿ ಬ್ರೇಸ್ ಮಾಡಿ. ಮಾರ್ಚ್ 8, 2024 ನಿಮ್ಮ ಕ್ಯಾಲೆಂಡರ್ನಲ್ಲಿ ಗುರುತಿಸಿಕೊಳ್ಳಿ" ಎಂದು ಎಕ್ಸ್ನಲ್ಲಿ ಬರೆದುಕೊಂಡಿದೆ.
ಈ ಸಿನಿಮಾ ಮೂಲಕ 25 ವರ್ಷಗಳ ನಂತರ ಜ್ಯೋತಿಕಾ ಹಿಂದಿ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಕೊನೆಯ ಹಿಂದಿ ಸಿನಿಮಾ 'ಡೋಲಿ ಸಾಜಾ ಕೆ ರಖನಾ'. ಈ ಚಿತ್ರವು 1997 ರಲ್ಲಿ ಬಿಡುಗಡೆಯಾಯಿತು. ಇದನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದರು. ಹೆಚ್ಚುವರಿಯಾಗಿ ನೋಡುವುದಾದರೆ, ನಟ ಜಾಂಕಿ ಬೋಡಿವಾಲಾ ಅವದ್ದು ಚೊಚ್ಚಲ ಹಿಂದಿ ಚಿತ್ರವಿದು. ಅವರು ಗುಜರಾತ್ ಸಿನಿಮಾಗಳಾದ ಛೆಲೋ ದಿವಾಸ್, ತಂಬುರೋ, ಚುಟ್ಟಿ ಜಶೆ ಛಕ್ಕಾ ಮತ್ತು ಬೌ ನೌ ವಿಚಾರ್ಗಳಲ್ಲಿ ಕೆಲಸ ಮಾಡಿದ್ದಾರೆ.