ಮುಂಬೈ (ಮಹಾರಾಷ್ಟ್ರ):ಬಾಲಿವುಡ್ ನಟ ಅಜಯ್ ದೇವಗನ್ ನಟಿಸಿರುವ ಬಹುನಿರೀಕ್ಷಿತ 'ರನ್ ವೇ 34' ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ. ಇನ್ನು ಈ ಖುಷಿ ವಿಚಾರದೊಂದಿಗೆ ಅಜಯ್ ದೇವಗನ್ ತಮ್ಮ ನಟನೆಯ ಮತ್ತೊಂದು ಚಿತ್ರವನ್ನು ಘೋಷಿಸಿದ್ದಾರೆ. ಅದಕ್ಕೆ 'ಬೋಲಾ' ಎಂದು ಹೆಸರಿಡಲಾಗಿದೆ. ಮಾರ್ಚ್ 30, 2023ರಂದು ಬಿಡುಗಡೆಯಾಗಲಿದೆ ಎಂದು ಅವರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
'ಭೋಲಾ' ಚಿತ್ರವು ತಮಿಳಿನ ಸೂಪರ್ ಹಿಟ್ 'ಕೈದಿ' ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ಇದೊಂದು ಆ್ಯಕ್ಷನ್-ಡ್ರಾಮಾ ಸಿನಿಮಾ ಆಗಿದ್ದು, ಮಾರ್ಚ್ 30, 2023ರಂದು ಬಿಡುಗಡೆಯಾಗಲಿದೆಯಂತೆ. ಧರ್ಮೇಂದ್ರ ಶರ್ಮಾ ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಬಾಲಿವುಡ್ನ ಗ್ರೇಟ್ ನಟಿ ಟಬು ಕೂಡ ಸೂಪರ್-ಕಾಪ್‌ನ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಹಜವಾಗಿ ಇದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.