ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ 'ಭೋಲಾ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಈ ಬಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿಕೊಂಡಿರುವ ನಟ ಅಜಯ್, "ಯುದ್ಧಗಳನ್ನು ಆತ್ಮಬಲದಿಂದ ಗೆಲ್ಲಬೇಕೇ ಹೊರತು ಶಸ್ತ್ರಾಸ್ತ್ರ ಮತ್ತು ಪಡೆಗಳಿಂದಲ್ಲ" ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಅಜಯ್ ಅವರ ಅಭಿಮಾನಿಗಳು ಟ್ರೇಲರ್ ಬಗ್ಗೆ ತಮ್ಮ ಉತ್ಸಾಹವನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. "ಮೂರು ರಾಷ್ಟ್ರೀಯ ಪ್ರಶಸ್ತಿ ವಿಜೇತ ಸೂಪರ್‌ಸ್ಟಾರ್ ಅಜಯ್ ದೇವಗನ್ ಅವರ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ" ಎಂಬುದಾಗಿ ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನು ಕೆಲವರು "ಪ್ರತಿ ಫ್ರೇಮ್ ಕೂಡ ಅದ್ಭುತವಾಗಿದೆ! ಬ್ಲಾಕ್ ಬಸ್ಟರ್" ಎಂದು ಬರೆದಿದ್ದಾರೆ. ಈ ಮಧ್ಯೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೂಡ ಕಮೆಂಟ್ ಮಾಡಿದ್ದು, ಫೈರ್ ಎಮೋಜಿಯನ್ನು ಕಳುಹಿಸಿದ್ದಾರೆ.
ಇದನ್ನೂ ಓದಿ:ಮಸಾಲೆ ವ್ಯಾಪಾರದ ಕಡೆ ಇದ್ದ ಗಮನ.. ಹೀರೋ ಆಗುವ ಕನಸು ಕಂಡಿರಲಿಲ್ಲವಂತೆ ಟಾಲಿವುಡ್ ಸ್ಟಾರ್ ವೆಂಕಟೇಶ್
ಜೈಲಿನಿಂದ ಬಿಡುಗಡೆ ಆಗಿರುವ ಕೈದಿ ಮತ್ತು ಅನಾಥ ಹುಡುಗಿಯ ಕಥೆ ಹೇಳಲಿದೆ ಭೋಲಾ ಸಿನಿಮಾ. ಒಟ್ಟಿನಲ್ಲಿ ಅಜಯ್ ದೇವಗನ್, ಟಬು ಮತ್ತು ದಕ್ಷಿಣ ನಟಿ ಅಮಲಾ ಪೌಲ್ ಅಭಿನಯದ ಈ ಚಿತ್ರದ ಬಗ್ಗೆ ಅಭಿಮಾನಿಗಳು ಕುತೂಹಲ ಭರಿತರಾಗಿದ್ದಾರೆ. ಜೊತೆಗೆ ಸಂಜಯ್ ಮಿಶ್ರಾ, ದೀಪಕ್ ದೊಬ್ರಿಯಾಲ್ ರಾಯ್ ಅವರ ನಟನೆ ಕೂಡ ಇರಲಿದೆ. ಇತ್ತೀಚೆಗಷ್ಟೇ ಸಿನಿಮಾದ "ನಾಜರ್ ಲಗ್ ಜಾಯೇಗಿ" ರೊಮ್ಯಾಂಟಿಕ್ ಹಾಡನ್ನು ಬಿಡುಗಡೆಗೊಳಿಸಲಾಗಿತ್ತು.