ಸಿನಿಮಾ ಲೋಕದ ಕಲರ್ ಫುಲ್ ದುನಿಯಾದಲ್ಲಿ ನಟಿಯ ವಿಭಿನ್ನ ಬೆಡಗು ಬಿನ್ನಾಣ ಹೆಚ್ಚಿನವರ ಗಮನ ಸೆಳೆಯುತ್ತದೆ. ವಿಭಿನ್ನ ರೀತಿಯ ವಸ್ತ್ರ ವಿನ್ಯಾಸದಿಂದ ಮಿಂಚುವ ನಟಿ ಮಣಿಯರು ಕೆಲವೊಮ್ಮ ಹಾಸ್ಯಕ್ಕೂ ಒಳಗಾಗುತ್ತಾರೆ. ಈಗ ಬಾಲಿವುಡ್ ದಿವಾ ಐಶ್ವರ್ಯಾ ರೈ ಬಚ್ಚನ್ ವಸ್ತ್ರ ವಿನ್ಯಾಸವೂ ಸಹ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ವಿಭಿನ್ನ ವಿಮರ್ಶೆಗೆ ಒಳಪಡುತ್ತಿದೆ. ಅದಕ್ಕೆ ಅವರು ಧರಿಸಿರುವ ಬಟ್ಟೆಯಲ್ಲಿರುವ ಹುಡ್ ಕಾರಣವಾಗಿದೆ. ಈ ರೀತಿಯ ವಿಮರ್ಶೆಗಳು ನಟಿಯರಿಗೆ ಹೊಸದೇನಲ್ಲ, ಆದರೆ ಸಾಮಾಜಿಕ ಜಾಲತಾಣದಲ್ಲಿ ಇದು ಟ್ರೆಂಡ್ ಆಗಿದೆ.
ಐಶ್ವರ್ಯಾ ರೈ ಬಚ್ಚನ್ 76 ನೇ ವಾರ್ಷಿಕ ಕಾನ್ ಚಲನಚಿತ್ರೋತ್ಸವದಲ್ಲಿ ಇತ್ತೀಚೆಗೆ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದ ರತ್ನಗಂಬಳಿಯ ಮೇಲೆ ಕಪ್ ಗೌನ್ಗೆ ಬೆಳ್ಳಿಯ ಬಣ್ಣದ ಹುಡ್ ಇರುವ ಹೊಸ ವಿನ್ಯಾಸದ ವಸ್ತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದು ಕಾನ್ ಚಲನಚಿತ್ರೋತ್ಸವದ ಇಂಡಿಯಾನಾ ಜೋನ್ಸ್ ಮತ್ತು ಕಿಂಗ್‌ಡಮ್ ಆಫ್ ದಿ ಕ್ರಿಸ್ಟಲ್ ಸ್ಕಲ್‌ನ ಪ್ರಥಮ ಪ್ರದರ್ಶನವಾಗಿತ್ತು. ಇದಕ್ಕೆ ನೆಟ್ಟಿಗರಿಂದ ಹೊಸ ಕಮೆಂಟ್ಗಳು ಮತ್ತು ವಿಮರ್ಶೆ ಬರುತ್ತಿದೆ.
ಇದನ್ನೂ ಓದಿ:ಗೂಗಲ್ ಸಿಇಒ ಸುಂದರ್ ಪಿಚೈ ಪೂರ್ವಿಕರ ಮನೆ ಮಾರಾಟ: ತಮಿಳು ನಟನಿಂದ ಖರೀದಿ
ಈ ವಸ್ತ್ರ ವಿನ್ಯಾಸವನ್ನು ನೆಟ್ಟಿಗರು ಹೃತಿಕ್ ರೋಷನ್ ಅಭಿನಯದ ಕೋಯಿ...ಮಿಲ್ ಗಯಾ ಚಿತ್ರದ ಏಲಿಯನ್ಗೆ ಹೋಲಿಸಿದ್ದಾರೆ. ಅನ್ಯಗ್ರಹ ಜೀವಿ ಜಾದೂ ತಲೆಯ ಮೇಲೆ ಬಟ್ಟೆ ಇದ್ದು ಇದರಿಂದ ಪ್ರೇರಣೆ ಪಡೆದು ಈ ಬಟ್ಟೆಯನ್ನು ಡಿಸೈನ್ ಮಾಡಲಾಗಿದೆ ಎಂದು ಬರೆದಿದ್ದಾರೆ. ಇನ್ನೂ ಕೆಲವರು, ನಟಿ ಒಂದು ಚಿತ್ರದಲ್ಲಿ ನಟಿಸಿರುವ ಪಾತ್ರವನ್ನು ಕೊಲಾಜ್ ಮಾಡಿದ್ದಾರೆ. ಹಾಗೇ ಸ್ಯಾಂಡ್ವಿಚ್ಗೆ ಸಿಲ್ವರ್ ಕವರ್ ಮಾಡಿದ ರೀತಿ ಇದೆ ಎಂದಿದ್ದಾರೆ. ಅಮಿತಾಬ್ ಬಚ್ಚನ್ ಬೆಟ್ಶೀಟ್ನಲ್ಲಿ ಬೆಚ್ಚಗೆ ಮಲಗಿರುವ ಫೋಟೋದ ಜೊತೆ ಕೊಲಾಜ್ ಮಾಡಿದ್ದಾರೆ. ಗಿಫ್ಟ್ ಬಾಕ್ಸ್ನಲ್ಲಿ ಕವರ್ ಆಗಿರುವ ರೀತಿ ಇದೆ ಎಂದು ಹೀಗೇ ನಾನಾ ಚರ್ಚೆಗಳು ಅವರ ವಸ್ತ್ರ ವಿನ್ಯಾಸದ ಬಗ್ಗೆ ಆಗುತ್ತಿದೆ.
ಇದನ್ನೂ ಓದಿ:ಶೂಟಿಂಗ್ ಸೆಟ್ನಲ್ಲಿ ದಿಗ್ಗಜರ ಸಮಾಗಮ: ಕಪಿಲ್ ದೇವ್ ಭೇಟಿ ಬಗ್ಗೆ ರಜನಿಕಾಂತ್ ಏನಂದ್ರು ಗೊತ್ತಾ?
ಕಾನ್ ಚಲನಚಿತ್ರೋತ್ಸವದಲ್ಲಿ 22ನೇ ಬಾರಿಗೆ ಭೇಟಿ ನೀಡುತ್ತಿರುವ ಐಶ್ವರ್ಯಾ ರೈ ಬಚ್ಚನ್ ಕಪ್ಪು ಗೌನ್ಗೆ ಬೆಳ್ಳಿಯ ಹೊದಿಕೆಯ ಹುಡ್ ಹೊಂದಿರುವ ವಸ್ತ್ರದಲ್ಲಿ ಕಂಗೊಳಿಸಿದ್ದಾರೆ. ಇದನ್ನೂ ಕೇನ್ಸ್ ಕ್ಯಾಪ್ಸುಲ್ ಕಲೆಕ್ಷನ್ ಐಶ್ವರ್ಯಾ ರೈ ಬಚ್ಚನ್ಗಾಗಿ ತಯಾರಿಸಿತ್ತು. ಬೆಳ್ಳಿಯ ಹರಳಿನ ರೀತಿಯ ವಿನ್ಯಾಸವನ್ನು ವಿಂಟೇಜ್ ಬ್ರ್ಯಾಂಡ್‌ನ ಸಂಗ್ರಹ ಆಗಿತ್ತು. ವಸ್ತ್ರವು ಕಪ್ ಗೌನ್ ಮೇಲೆ ಬೆಳ್ಳಿಯ ಬಣ್ಣದ ಹೊದಿಕೆ ನೆಲಕ್ಕೆ ಹಾಸಿತ್ತು, ತಲೆಯ ಬಾಗಕ್ಕೆ ದೊಡ್ಡ ಹುಡ್ ಅವರನ್ನು ಆವರಿಸಿತ್ತು.
ಇದನ್ನೂ ಓದಿ:ಕಾನ್ ಚಿತ್ರೋತ್ಸವ 2023 : ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಸಾರಾ ಅಲಿ ಖಾನ್..ಫ್ಯಾನ್ಸ್ಗಳಿಂದ ಮೆಚ್ಚುಗೆ