ಮುಂಬೈ: ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಬಚ್ಚನ್ ಅವರ ಅನೇಕ ಸಿನಿಮಾಗಳು ಬಂದು ಹೋಗಿದ್ದರೂ ಅವರ ಕೆಲವು ಪಾತ್ರಗಳು ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಕುಳಿತಿರುತ್ತದೆ. ಅದರಲ್ಲಿ, ಅವರ ಹಮ್ ದಿಲ್ ದೇ ಚುಕೆ ಸನಂ ಚಿತ್ರದ ನಂದಿನಿ ಪಾತ್ರ. ಈ ಚಿತ್ರ ಇಂದಿಗೂ ಅನೇಕ ಮಂದಿಯ ಅಚ್ಚು ಮೆಚ್ಚು ಎಂದರೂ ತಪ್ಪಾಗಲಾರದು. ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದ ಸಲ್ಮಾನ್ ಖಾನ್, ಅಜಯ್ ದೇವಗನ್ ಜೊತೆ ನಟನೆ ಈ ಚಿತ್ರ ಇದೀಗ ಮತ್ತೆ ನೆನಪಿಸಿಕೊಳ್ಳಲು ಕಾರಣ ಅವರ ನಂದಿನಿ ಪಾತ್ರ.
ಹೌದು, ಹಮ್ ದಿಲ್ ದೇ ಚುಕೆ ಸನಂ ಸಿನಿಮಾದಲ್ಲಿ ನಂದಿನಿಯಾಗಿ ನಟಿಸಿ, ಅನೇಕ ಅಭಿಮಾನಿಗಳ ಹೃದಯ ಗೆದ್ದಿದ್ದ ಐಶ್ವರ್ಯಾ ರೈ ಇದೀಗ ಮತ್ತೊಮ್ಮೆ ಪೊನ್ನಿಯನ್ ಸೆಲ್ವಂನಲ್ಲಿ ನಂದಿನಿಯಾಗಿ ಮಿಂಚಲು ಸಿದ್ದರಾಗಿದ್ದಾರೆ. ಹಮ್ ದಿಲ್ ದೇ ಚುಕೆ ಸನಂನಲ್ಲಿ ಪ್ರೀತಿ ಅರಸುವ ನಂದಿನಿಯಾಗಿ ಐಶ್ವರ್ಯಾ ಗಮನ ಸೆಳೆದರೆ, ಇದೀಗ ಹಲವು ವರ್ಷಗಳ ಬಳಿಕ ಅದೇ ಮಾಸದ ಚೆಲುವಿನ ಮೂಲಕ ಚೋಳರ ರಾಣಿ ನಂದಿನಿಯಾಗಿ ಅವರು ಅಭಿಮಾನಿಗಳ ಹೃದಯ ಗೆಲ್ಲಲು ಮುಂದಾಗಿದ್ದಾರೆ. ಈಗಾಗಲೇ ಅವರ ರಾಣಿಯ ಪೋಷಾಕನ್ನು ಹಲವು ಅಭಿಮಾನಿಗಳು ಮೆಚ್ಚಿದ್ದು, ಟೀಸರ್ನಲ್ಲಿ ಅವರ ಲುಕ್ಗೆ ಫಿದಾ ಅಗಿದ್ದಾರೆ.
ನಟಿ ಮಾತು: ಶುಕ್ರವಾರ ಬಿಡುಗಡೆಗೆ ಸಜ್ಜಾಗಿ ಪೊನ್ನಿಯನ್ ಸೆಲ್ವಂ2 ಚಿತ್ರ ತಂಡ ಈಗಾಗಲೇ ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ಕಡೆ ಪ್ರಮೋಷನ್ ನಡೆಸಿದ್ದು, ಮುಂಬೈನಲ್ಲಿ ಕೂಡ ಭರ್ಜರಿ ಪ್ರಚಾರ ನಡೆಸಿದೆ. ಈ ವೇಳೆ, ಚಿತ್ರತಂಡದೊಂದಿಗೆ ಭಾಗಿಯಾಗಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ಗೆ ಈ ನಂದಿನಿ ಹೆಸರಿನ ಪಾತ್ರದ ಕುರಿತ ಪ್ರಶ್ನೆ ಎದುರಾಗಿದೆ. ಈ ಕುರಿತು ಮಾತನಾಡಿರುವ ನಟಿ, ಹಳೆಯ ದಿನದ ನೆನಪು ಮೆಲುಕು ಹಾಕುತ್ತಾ, ಇದೊಂದು ಸುಂದರ ಕಾಕತಾಳೀಯ. ಈ ರೀತಿ ಆಗುತ್ತಿರುವುದು ಅದ್ಬುತ ಅಲ್ಲವೇ ಎಂದ ಅವರು ಹಮ್ ದಿಲ್ ದೇ ಚುಕೆ ಸನಂ ನಂದಿನಿ ಮಾತ್ರ ಕೂಡ ಸ್ಮರಣಿಯ ಎಂದರು. ಈ ಪಾತ್ರದ ಮೂಲಕ ಅನೇಕರ ಹೃದಯದಲ್ಲಿ ನೆಲಿಸಿದ್ದೇನೆ. ಇದೀಗ ಮತ್ತೇ ಅದೇ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವುದು ಖುಷಿ ಸಂಗತಿ. ಈ ಪಾತ್ರ ಕೂಡ ಜನರಿಗೆ ಜೊತೆಗೆ ನನಗೆ ಕೂಡ ವಿಶೇಷವಾಗಿರಲಿದೆ. ಸಂಜಯ್ ಲೀಲಾ ಬನ್ಸಾಲಿ ಮತ್ತು ಮಣಿ ಅವರ ನಿರ್ದೇಶನ ಮೂಲಕ ಇಂತಹ ಅದ್ಬುತ ಶಕ್ತಿಶಾಲಿ ಮಹಿಳಾ ಪಾತ್ರದ ನಿರ್ವಹಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ಇನ್ನು ಪೊನ್ನಿಯನ್ ಸೆಲ್ವಂ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ದ್ವಿ ಪಾತ್ರದಲ್ಲಿ ಮಿಂಚುತ್ತಿರುವುದು ಮತ್ತೊಂದು ವಿಶೇಷ. ಇದರಲ್ಲಿ ನಂದಿನಿ ಮತ್ತು ಒಮೈ ರಾಣಿಯಾಗಿ ಅವರು ಪಾತ್ರ ನಿರ್ವಹಣೆ ಮಾಡಲಿದ್ದಾರೆ. ಈ ಪೊನ್ನಿಯನ್ ಸೆಲ್ವಂ 2 ಚಿತ್ರ ಇದೇ ಶುಕ್ರವಾರ ಅಂದರೆ, ಏಪ್ರಿಲ್ 28ಕ್ಕೆ ತೆರೆ ಕಾಣಲು ಸಜ್ಜಾಗಿದೆ.
ಇದನ್ನೂ ಓದಿ: ಪೊನ್ನಿಯನ್ ಸೆಲ್ವಂ-2 ಸಿನಿಮಾ ಟ್ರೇಲರ್ ರಿಲೀಸ್: ರಾಣಿಯರಾಗಿ ಮಿಂಚಿದ ಐಶ್ವರ್ಯಾ ರೈ, ತ್ರಿಶಾ