ಕರ್ನಾಟಕ

karnataka

ETV Bharat / entertainment

ಪೊನ್ನಿಯಿನ್ ಸೆಲ್ವನ್​ ಟ್ರೈಲರ್ ಸಮಾರಂಭದಲ್ಲಿ ರಜನಿಕಾಂತ್ ಆಶೀರ್ವಾದ ಪಡೆದ ಐಶ್ವರ್ಯ ರೈ - ನಟಿ ಐಶ್ವರ್ಯ ರೈ

ಪೊನ್ನಿಯಿನ್ ಸೆಲ್ವನ್​ ಟ್ರೈಲರ್ ಸಮಾರಂಭದಲ್ಲಿ ನಟ ರಜನಿಕಾಂತ್ ಅವರ ಕಾಲನ್ನು ಮುಟ್ಟಿ ನಟಿ ಐಶ್ವರ್ಯ ರೈ ಆಶೀರ್ವಾದವನ್ನು ಪಡೆದಿದ್ದಾರೆ.

ಐಶ್ವರ್ಯ ರೈ
ಐಶ್ವರ್ಯ ರೈ

By

Published : Sep 7, 2022, 4:01 PM IST

Updated : Sep 8, 2022, 3:02 PM IST

ತಮಿಳುನಾಡು:ಸೌತ್ ಫಿಲ್ಮ್ ಇಂಡಸ್ಟ್ರಿಯ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ತಮ್ಮ ಬಿಗ್ ಬಜೆಟ್ ಚಿತ್ರ 'ಪೊನ್ನಿಯಿನ್ ಸೆಲ್ವನ್ ಭಾಗ 1' ಟ್ರೇಲರ್ ಅನ್ನು ಚೆನ್ನೈನಲ್ಲಿ ಬಿಡುಗಡೆ ಮಾಡಿದರು. ಟ್ರೇಲರ್ ಲಾಂಚ್‌ಗೆ ಸೌತ್ ಫಿಲ್ಮ್ ಇಂಡಸ್ಟ್ರಿಯಿಂದ ರಜನಿಕಾಂತ್ ಮತ್ತು ಕಮಲ್ ಹಾಸನ್ ಕೂಡ ಆಗಮಿಸಿದ್ದರು. ಅದೇ ಸಮಯದಲ್ಲಿ ಚಿತ್ರದ ಪ್ರಮುಖ ತಾರಾಗಣವೂ ಈವೆಂಟ್‌ಗೆ ತಲುಪಿತು. ವಿಶೇಷವಾಗಿ ಐಶ್ವರ್ಯಾ ರೈ ಬಚ್ಚನ್ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ರಜನಿಕಾಂತ್ ಅವರು ಐಶ್ವರ್ಯಾ ರೈ ಅವರ ಮುಂದೆ ಬಂದ ತಕ್ಷಣ, ನಟಿ ಅವರ ಪಾದಗಳನ್ನು ಮುಟ್ಟಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಐಶ್ವರ್ಯಾ ರೈ ಓಡಿಹೋಗಿ ಮಣಿರತ್ನಂ ಅವರನ್ನು ತಬ್ಬಿಕೊಂಡಿದ್ದಾರೆ. ಹಾಗೆಯೇ, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪಾದಗಳನ್ನು ಸ್ಪರ್ಶಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಕ್ಷಣದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೀಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

'ಇದು ಭಾರತೀಯ ಸಂಸ್ಕೃತಿ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು 'ಇದು ಹಿರಿಯರಿಗೆ ನೀಡುವ ಗೌರವ' ಎಂದು ಬರೆದಿದ್ದಾರೆ. 'ತನ್ನ ಮಾರ್ಗದರ್ಶಕನನ್ನು ನೋಡಿದ ನಂತರ ಅವರು ಓಡಿಹೋಗಿ ತಬ್ಬಿಕೊಂಡ ರೀತಿ ನಿಜವಾಗಿಯೂ ಪ್ರಶಂಸನೀಯವಾಗಿದೆ' ಎಂದು ಸಾಕಷ್ಟು ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಐಶ್ವರ್ಯಾ ರೈ ನಾಲ್ಕು ವರ್ಷಗಳ ನಂತರ ಮತ್ತೆ ಹಿರಿತೆರೆಗೆ ಮರಳುತ್ತಿದ್ದಾರೆ. ಅವರು 2018 ರ ಫನ್ನಿ ಖಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಪೊನ್ನಿಯನ್ ಸೆಲ್ವನ್ 1 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಬಜೆಟ್ 500 ಕೋಟಿಗೂ ಹೆಚ್ಚಿದೆ. ಇತ್ತೀಚೆಗಷ್ಟೇ ತಮಿಳಿನಲ್ಲಿ ಬಿಡುಗಡೆಯಾಗಿರುವ ಟ್ರೇಲರ್ ಭಾರೀ ಸದ್ದು ಮಾಡಿದೆ. ಹಿಂದಿ ಜೊತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

ಓದಿ:RRR, ಭೂಲ್​​ ಭುಲೈಯಾ 2 ಮೀರಿಸಿದ 'ಬ್ರಹ್ಮಾಸ್ತ್ರ': ಬಾಲಿವುಡ್​​​ಗೆ ಸಿಗುವುದೇ ಬೂಸ್ಟರ್ ಡೋಸ್‌?

Last Updated : Sep 8, 2022, 3:02 PM IST

ABOUT THE AUTHOR

...view details