ಬಾಲಿವುಡ್ ಬಹುಬೇಡಿಕೆ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರ ಇತ್ತಿಚಿನ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಇತ್ತೀಚೆಗೆ ನಡೆದ ಫ್ಯಾಷನ್ ಈವೆಂಟ್ ಒಂದರಲ್ಲಿ ಹೆಜ್ಜೆ ಹಾಕಿ, ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ. ಸೂಪರ್ ಸ್ಟಾರ್ಗಳು ಸೇರಿದ್ದ ಫ್ಯಾಷನ್ ಶೋ ಒಂದರಿಂದ ಸೂಪರ್ ಹಿಟ್ ಪೊನ್ನಿಯಿನ್ ಸೆಲ್ವನ್ ನಟಿಯ ಹಲವು ಫೋಟೋ, ವಿಡಿಯೋಗಳು ಹೊರಬಿದ್ದಿವೆ.
ಇತ್ತೀಚಿನ ಫ್ಯಾಷನ್ ಈವೆಂಟ್ನಲ್ಲಿ, ಐಶ್ವರ್ಯಾ ರೈ ಬಚ್ಚನ್ ಅವರು ಬಹು ಆಕರ್ಷಣೀಯ ಗೋಲ್ಡನ್ ಗೌನ್ ಧರಿಸಿ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡರು. ನಟಿ ಕೇಶರಾಶಿಯನ್ನು ಫ್ರೀಯಾಗಿ ಬಿಟ್ಟಿದ್ದರು. ಮೇಕ್ ಅಪ್ ಕೂಡ ಅಚ್ಚುಕಟ್ಟಾಗಿ, ಆಕರ್ಷಣೀಯವಾಗಿತ್ತು. ಐಶ್ವರ್ಯಾ ರೈ ಬಚ್ಚನ್ ರ್ಯಾಂಪ್ ವಾಕ್ ಮಾಡುವ ವೇಳೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದವರನ್ನು ನೋಡಿ ನಕ್ಕರು. ಈವೆಂಟ್ನಲ್ಲಿ ಉಪಸ್ಥಿತರಿದ್ದವರತ್ತ ನೋಡಿ ಕೈ ಬೀಸಿದರು. ಬಳಿಕ ಅಮೆರಿಕನ್ ನಟಿ, ನಿರ್ಮಾಪಕಿ ವಿಯೋಲಾ ಡೇವಿಸ್ ಅವರ ಕೈ ಹಿಡಿದು ಐಶ್ ರ್ಯಾಂಪ್ ವಾಕ್ ಮಾಡಿದರು.
ಈವೆಂಟ್ನಿಂದ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ, ಐಶ್ವರ್ಯಾ ಅವರು ಕೆಂಡಲ್ ಜೆನ್ನರ್, ಇವಾ ಲಾಂಗೋರಿಯಾ, ಕ್ಯಾಮಿಲಾ ಕ್ಯಾಬೆಲ್ಲೊ, ಎಲ್ಲೆ ಫಾನ್ನಿಂಗ್ ಸೇರಿದಂತೆ ಹಲವು ಸ್ಟಾರ್ ಕಲಾವಿದರೊಂದಿಗೆ ವೇದಿಕೆಯಲ್ಲಿ ನಿಂತು ಕ್ಯಾಮರಾಗಳಿಗೆ ಪೋಸ್ ನೀಡುವುದನ್ನು ಕಾಣಬಹುದು. ಮತ್ತೊಂದು ವಿಡಿಯೋದಲ್ಲಿ ಐಶ್ವರ್ಯಾ ಇತರ ಕಲಾವಿದೊಂದಿಗೆ ಸೇರಿ ಸ್ಟೇಜ್ನಲ್ಲಿ ಮೈ ಬಳುಕಿಸಿದ್ದಾರೆ. ಹೀಗೆ ಸ್ಟಾರ್ ಕಲಾವಿದರೊಂದಿಗೆ ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಪ್ರತಿಷ್ಟಿತ ಫ್ಯಾಷನ್ ಈವೆಂಟ್ನಲ್ಲಿ ಭಾಗಿಯಾಗುವ ಮೂಲಕ ಸುದ್ದಿಯಾಗಿದ್ದಾರೆ.