ಕರ್ನಾಟಕ

karnataka

ETV Bharat / entertainment

ನಟ ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪತ್ನಿ ಐಂದ್ರಿತಾ - ದಿಗಂತ್​ ಕುತ್ತಿಗೆಗೆ​ ಗಂಭೀರ ಗಾಯ

ಪತಿ ದಿಗಂತ್​ ಆಪರೇಷನ್​ ನಂತರ ಚೇತರಿಕೆಯಲ್ಲಿದ್ದಾರೆ. ಕೆಲವು ತಿಂಗಳುಗಳ ವಿರಾಮದ ಬಳಿಕ ಮತ್ತೆ ಚಾಲೆಂಜಿಂಗ್ ಎಕ್ಸೈಜ್​ಗಳನ್ನು ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದು ಪತ್ನಿ, ನಟಿ ಐಂದ್ರಿತಾ ರೇ ತಿಳಿಸಿದರು.

Actor Diganth Bengaluru for treatment
ನಟ ದಿಗಂತ್

By

Published : Jun 22, 2022, 7:22 PM IST

ಬೆಂಗಳೂರು: ನಟದೂದ್​ಪೇಡ ದಿಗಂತ್ ಗೋವಾದಲ್ಲಿ ಮಂಗಳವಾರ ಸಮ್ಮರ್ ಸಾಲ್ಟ್ ಜಂಪ್ ಮಾಡಲು ಹೋಗಿ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು‌. ಈ ಸಂಬಂಧ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಆಪರೇಷನ್​ಗೆ ಒಳಗಾಗಿರೋ ದಿಗಂತ್ ಆರೋಗ್ಯದ ಬಗ್ಗೆ ಆಸ್ಪತ್ರೆಯವರಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಯಿತು. ಹೆಲ್ತ್ ಬುಲೆಟಿನ್​ನಲ್ಲಿ ವೈದ್ಯರು ಹೇಳುವ ಪ್ರಕಾರ ಇದೊಂದು ಸ್ಪೋರ್ಟ್ಸ್ ಇಂಜುರಿ ಆಗಿದ್ದು, ಇದಕ್ಕೆ ಚಿಕಿತ್ಸೆ ನೀಡಲಾಗಿದೆ ಅಂತಾ ತಿಳಿಸಿದರು.

ಇಂದು ಮಾಧ್ಯಮದವರಿಗೆ ದಿಗಂತ್ ಪತ್ನಿ ಐಂದ್ರಿತಾ ರೇ ಪತಿಯ ಆರೋಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದಿಗಂತ್ ನಾವು ಸಮ್ಮರ್ ಹಾಲಿಡೇಗೆ ಗೋವಾದ ರೆಸಾರ್ಟ್​ಗೆ ಹೋಗಿದ್ದೆವು. ಅಲ್ಲಿ ಎಂದಿನಂತೆ ದಿಗಂತ್ ವ್ಯಾಯಾಮಗಳನ್ನು ಮಾಡುತ್ತಿದ್ದರು. ಸಮ್ಮರ್ ಸಾಲ್ಟ್ ಮಾಡುವಾಗ ಸ್ವಲ್ಪ ವ್ಯತ್ಯಾಸವಾದ ಕಾರಣ ಪೆಟ್ಟಾಗಿದೆ ಎಂದರು.

ನಟ ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪತ್ನಿ ಐಂದ್ರಿತಾ ರೇ

ಕೂಡಲೇ ನಾವು ಗೋವಾದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಹೋಗಿದ್ದೆವು. ಆಗ ಹೆಚ್ಚಿನ ಡ್ಯಾಮೇಜ್​ ಆಗಿಲ್ಲ ಎಂದು ವೈದ್ಯರು ತಿಳಿಸಿದರು. ರಸ್ತೆಯಲ್ಲಿ ಕರೆದು ಕೊಂಡು ಬರುವುದು ಸಮಸ್ಯೆ ಆಗಲಿರುವ ಕಾರಣ ಏರ್ ಲಿಫ್ಟ್​ ಮಾಡಿದೆವು. ಗೋವಾ ಸರ್ಕಾರಕ್ಕೆ ಧನ್ಯವಾದ. ಸದ್ಯ ಆಪರೇಷನ್ ಆಗಿದ್ದು, ದಿಗಂತ್ ಚೇತರಿಕೆ ಕಾಣ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಗೋವಾದಲ್ಲಿದ್ದಾಗ ತುಂಬಾ ಟೆನ್ಷನ್ ಆಗಿದ್ದೆ. ಬೋನ್ ಇಂಜ್ಯೂರಿ ಆಗಿದೆ. ಆಪರೇಷನ್ ಅದ ಮೇಲೆ ದಿಗಂತ್ ನಗುತ್ತಿದ್ದಾರೆ. ಡಿಸ್ಚಾರ್ಜ್ ಇವತ್ತು ಅಥವಾ ನಾಳೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ಆ ಸಮಯದಲ್ಲಿ ತುರ್ತು ಚಿಕಿತ್ಸೆ ಅಗತ್ಯ ಇದ್ದ ಕಾರಣ ಏರ್ ಲಿಫ್ಟ್ ಮಾಡಿದ್ವಿ ಎಂದು ಕೊನೆಯಲ್ಲಿ ಐಂದ್ರಿತಾ ರೇ ಭಾವುಕರಾಗಿ ಮಾತನಾಡಿದರು. ಕೆಲವು ತಿಂಗಳುಗಳ ವಿಶ್ರಾಂತಿಯ ನಂತರ ಮತ್ತೆ ಚಾಲೆಂಜಿಂಗ್ ಎಕ್ಸೈಜ್ ಗಳನ್ನು ಅವರು ಮಾಡಬಹುದು ಎಂದು ವೈದ್ಯರು ಹೇಳಿರುವುದಾಗಿ ಐಂದ್ರಿತಾ ತಿಳಿಸಿದರು.

ಇದನ್ನೂ ಓದಿ:ದೂದ್ ಪೇಡಾ ದಿಗಂತ್ ಕುತ್ತಿಗೆ ಭಾಗಕ್ಕೆ ಆಪರೇಷನ್, ಯಾವುದೇ ಅಪಾಯವಿಲ್ಲ ಎಂದ ವೈದ್ಯರು

ABOUT THE AUTHOR

...view details