ಕರ್ನಾಟಕ

karnataka

ETV Bharat / entertainment

ಮಣಿರತ್ನಂ - ಕಮಲ್​ ಹಾಸನ್​ ಕಾಂಬೋದ 'KH234' ತಂಡ ಸೇರಿದ ದುಲ್ಕರ್​ ಸಲ್ಮಾನ್​, ತ್ರಿಶಾ - etv bharat kannada

'KH234' update: ಕಮಲ್​ ಹಾಸನ್​ ಮತ್ತು ಮಣಿರತ್ನಂ ಕಾಂಬೋದಲ್ಲಿ ಮೂಡಿ ಬರಲಿರುವ 'KH234' ಚಿತ್ರದಲ್ಲಿ ಮಾಲಿವುಡ್​ ನಟ ದುಲ್ಕರ್​ ಸಲ್ಮಾನ್​ ಮತ್ತು ಕಾಲಿವುಡ್​ ನಟಿ ತ್ರಿಶಾ ಕೃಷ್ಣನ್​ ನಟಿಸಲಿದ್ದಾರೆ.

Ahead of title unveil, makers of Kamal Haasan and Mani Ratnam's KH 234 welcomes Dulquer Salmaan on board
ಮಣಿರತ್ನಂ- ಕಮಲ್​ ಹಾಸನ್​ ಕಾಂಬೋದ 'KH234' ತಂಡ ಸೇರಿದ ದುಲ್ಕರ್​ ಸಲ್ಮಾನ್​, ತ್ರಿಶಾ

By ETV Bharat Karnataka Team

Published : Nov 6, 2023, 5:35 PM IST

ಕಾಲಿವುಡ್​ ಸೂಪರ್​ಸ್ಟಾರ್​ ನಟ ಕಮಲ್​ ಹಾಸನ್​. ಲೋಕೇಶ್​ ಕನಕರಾಜ್​ ಜೊತೆಗಿನ 'ವಿಕ್ರಮ್​' ಹಿಟ್​ ಆದ ನಂತರ ಇವರ ಜನಪ್ರಿಯತೆ ದುಪ್ಪಟ್ಟಾಗಿದೆ. ಈಗಾಗಲೇ ಸಾಕಷ್ಟು ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಂಡಿರುವ ಸ್ಟಾರ್​, ಖ್ಯಾತ ನಿರ್ದೇಶಕ ಮಣಿರತ್ನಂ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯಕ್ಕೆ 'KH234' ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರಕ್ಕೆ ಅಧಿಕೃತವಾಗಿ ಇತ್ತೀಚೆಗೆ ಚಾಲನೆ ಸಿಕ್ಕಿದೆ. ಈ ಸಿನಿಮಾಕ್ಕಾಗಿ 36 ವರ್ಷಗಳ ಬಳಿಕ ಕಮಲ್​ ಹಾಸನ್​ ಮತ್ತು ಮಣಿರತ್ನಂ ಒಂದಾಗುತ್ತಿದ್ದಾರೆ.

ಈ ಚಿತ್ರತಂಡಕ್ಕೆ ಮಾಲಿವುಡ್​ ಸ್ಟಾರ್​ ನಟ ದುಲ್ಕರ್​ ಸಲ್ಮಾನ್​ ಮತ್ತು ತಮಿಳು ನಟಿ ತ್ರಿಶಾ ಸೇರಿಕೊಂಡಿದ್ದಾರೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ನಟಿಸಿರುವ ಡಿಕ್ಯೂ, ಇದೀಗ ಕಮಲ್​ ಹಾಸನ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಪೊನ್ನಿಯನ್​ ಸೆಲ್ವನ್ ಚಿತ್ರದ ನಂತರ ತ್ರಿಶಾ ಕೃಷ್ಣನ್​ ಅವರು ಮಣಿರತ್ನಂ ಜೊತೆ ಮತ್ತೆ ಕೈಜೋಡಿಸುತ್ತಿದ್ದಾರೆ. ಸದ್ಯಕ್ಕೆ 'KH234' ಎಂದು ಹೆಸರಿಡಲಾದ ಈ ಚಿತ್ರದ ಶೀರ್ಷಿಕೆ ನಾಳೆ ಹೊರಬೀಳಲಿದೆ. ನ.7ರಂದು ಕಮಲ್​ ಹಾಸನ್​ 69ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಶುಭದಿನದಂದು ಚಿತ್ರತಂಡ ಟೈಟಲ್​ ಘೋಷಿಸಲಿದೆ.

ಕಮಲ್​ ಹಾಸನ್​ ಏಕಕಾಲಕ್ಕೆ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ 'ಇಂಡಿಯನ್​ 2' ಚಿತ್ರದ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. ನಾಗ್​ ಅಶ್ವಿನ್​ ನಿರ್ದೇಶನದ, ಬಹು ತಾರಾಗಣವಿರುವ 'ಕಲ್ಕಿ 2898 ಎಡಿ' ಸಿನಿಮಾದಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದಲ್ಲದೇ ಎಚ್​.ವಿನೋದ್​ ನಿರ್ದೇಶನ ಮಾಡುತ್ತಿರುವ 'KH233' ಚಿತ್ರಕ್ಕೂ ಇವರೇ ನಾಯಕ. ಕಮಲ್​ ಹಾಸನ್​ ಅವರ 234ನೇ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಇದನ್ನೂ ಓದಿ:ಗೆಳೆಯ ರಜನಿ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿರುವ ಅಭಿಮಾನಿ; ಕಮಲ್​ ಹಾಸನ್​ ರಿಯಾಕ್ಷನ್​ ಹೀಗಿತ್ತು..

ಇತ್ತೀಚೆಗಿನ ಮಾಹಿತಿ ಪ್ರಕಾರ, ಮಣಿರತ್ನಂ ಅವರು ಕಮಲ್​ ಹಾಸನ್​, ವಿನೋದ್​ ಅವರೊಂದಿಗಿನ ಸಿನಿಮಾದ ಕೆಲಸ ಮುಗಿಸಿದ ಬಳಿಕ ಶೂಟಿಂಗ್​ ಪ್ರಾರಂಭಿಸಲಿದ್ದಾರೆ ಎನ್ನಲಾಗಿತ್ತು. ಆದರೆ, 'KH234' ಚಿತ್ರಕ್ಕೆ ಚೆನ್ನೈನಲ್ಲಿ ಅ.27ರಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಹೀಗಾಗಿ ಎರಡು ಚಿತ್ರಗಳಲ್ಲೂ ಏಕಕಾಲಕ್ಕೆ ಕಮಲ್​ ಹಾಸನ್​ ಕೆಲಸ ಮಾಡಲಿದ್ದಾರೆ ಎಂದು ಕಾಣಿಸುತ್ತಿದೆ. ಈ ಸಿನಿಮಾದಲ್ಲಿ ಸಖತ್​ ಆ್ಯಕ್ಷನ್​ ಥ್ರಿಲ್ಲರ್​ ದೃಶ್ಯಗಳನ್ನು ನಿರೀಕ್ಷಿಸಬಹುದಾಗಿದೆ.

1987ರಲ್ಲಿ 'ನಾಯಕನ್​' ಚಿತ್ರ ರಿಲೀಸ್​ ಆಯಿತು. ಕಮಲ್​ ಹಾಸನ್​ಗೆ ಮಣಿರತ್ನಂ ಆ್ಯಕ್ಷನ್​ ಕಟ್​ ಹೇಳಿದ್ದರು. ಅದಾದ ನಂತರ ಈ ಜೋಡಿ ಮತ್ತೆ ಜೊತೆಯಾಗಿ ಕೆಲಸ ಮಾಡಿರಲಿಲ್ಲ. ಇದೀಗ 36 ವರ್ಷಗಳ ಬಳಿಕ ಒಂದಾಗಿದ್ದು, 'KH234' ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಚಿತ್ರಕ್ಕೆ ರವಿ.ಕೆ.ಚಂದ್ರನ್​ ಛಾಯಾಗ್ರಹಣ, ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಶ್ರೀಕರ್ ಪ್ರಸಾದ್ ಸಂಕಲನ, ಅನ್ಬರಿವ್ ಸಾಹಸ ನೃತ್ಯ ಸಂಯೋಜನೆ ಮತ್ತು ಶರ್ಮಿಷ್ಟಾ ರಾಯ್ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ.

ಇದನ್ನೂ ಓದಿ:ಸುದೀಪ್​ ಸೇರಿದಂತೆ ಸ್ಟಾರ್​ ನಟರಿಂದ ಅನಾವರಣಗೊಳ್ಳಲಿದೆ 'ಇಂಡಿಯನ್​ 2' ಫಸ್ಟ್ ಗ್ಲಿಂಪ್ಸ್​​

ABOUT THE AUTHOR

...view details