ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇನ್ಸ್ಟಾ ಹ್ಯಾಂಡಲ್ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ತಾಯಿಯನ್ನು ನೆನಪು ಮಾಡಿಕೊಂಡಿರುವ ನಟಿ 'ನನ್ನ ಎಲ್ಲ ಹೆಜ್ಜೆಯಲ್ಲೂ ನಿನ್ನನ್ನು ನೆನೆಯುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಫೆಬ್ರವರಿ 24ಕ್ಕೆ ಜಾಹ್ನವಿ ಕಪೂರ್ ತಾಯಿ ಶ್ರೀದೇವಿ ಅವರು ವಿಧಿವಶವಾಗಿ 5 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಅವರು ಶ್ರೀದೇವಿ ಅವರೊಂದಿಗೆ ಕುಳಿತಿರುವ ಫೋಟೋ ಹಂಚಿಕೊಂಡು ಭಾವನೆಗಳನ್ನು ಮುಕ್ತವಾಗಿ ವ್ಯಕ್ತ ಪಡಿಸಿದ್ದಾರೆ.
2018 ಫೆ. 24 ರಂದು ಸುಪರ್ಸ್ಟಾರ್ ಶ್ರೀದೇವಿ ಅವರು ಇಹ ಲಳೋಕ ತ್ಯಜಿಸಿದರು. ಶ್ರೀದೇವಿ ಅವರ 5 ನೇ ವಾರ್ಷಿಕೋತ್ಸವದ ಮೊದಲು, ಜಾಹ್ನವಿ ಸಾಮಾಜಿಕ ಮಾಧ್ಯಮದಲ್ಲಿ ಹೃದಯ ವಿದ್ರಾವಕ ಪೋಸ್ಟ್ ಅನ್ನು ಬರೆದಿದ್ದಾರೆ. ಅವರು ಪೋಸ್ಟ್ ಹಂಚಿಕೊಂಡ ಕೂಡಲೇ, ಮನೀಶ್ ಮಲ್ಹೋತ್ರಾ, ಭೂಮಿ ಪೆಡ್ನೇಕರ್, ತಾಹಿರಾ ಕಶ್ಯಪ್, ಸಂಜಯ್ ಕಪೂರ್ ಮತ್ತು ಇತರರು ಅವರ ಕಾಮೆಂಟ್ಗಳನ್ನು ಮಾಡಿದ್ದಾರೆ.
ಇನ್ಸ್ಟಾ ಪೋಸ್ಟ್ನಲ್ಲಿ "ನಾನು ಎಲ್ಲೆಡೆಯೂ ನಿಮ್ಮನ್ನು ಕಾಣುತ್ತೇನೆ. ನಾನು ಮಾಡುವ ಪ್ರತೀ ಕೆಲಸದಲ್ಲೂ ನಿಮ್ಮ ಹೆಮ್ಮೆ ಗೌರವವನ್ನು ಉಳಿಸುವ ಕಾರ್ಯ ಮಾಡುತ್ತೇನೆ. ನನ್ನ ಎಲ್ಲ ಕೆಲಸದ ಪ್ರಾರಂಭ ಮತ್ತು ಕೊನೆಯಲ್ಲಿ ನಿಮ್ಮನ್ನು ನೆನೆಯುತ್ತೇನೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದು, ಕಾರ್ಯಕ್ರಮ ಒಂದರಲ್ಲಿ ಒಟ್ಟಿಗೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಆ ಫೋಟೋವು ಸಹ ವಿಶೇಷವಾಗಿದ್ದು, ಜಾಹ್ನವಿ ಮತ್ತು ಶ್ರೀದೇವಿ ಅವರು ಒಟ್ಟಿಗೆ ಕಾಣಿಸಿಕೊಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ್ದಾಗಿದೆ. ಗೋವಾದಲ್ಲಿ ನಡೆದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ 48 ನೇ ಆವೃತ್ತಿ ಚಿತ್ರ ಹಂಚಿಕೊಂಡಿದ್ದಾರೆ. ಶ್ರೀದೇವಿ ಅವರ ಜೊತೆ ಜಾಹ್ನವಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಪ್ರಶಸ್ತಿ ಪ್ರದಾನ ಸಮಾರಂಭ 2018 ಜನವರಿ ಅಂದರೆ, ಶ್ರೀದೇವಿ ಅವರ ಮರಣಕ್ಕೂ ಒಂದು ತಿಂಗಳ ಮೊದಲು ನಡೆದಿತ್ತು.
ಜಾಹ್ನವಿ ಅವರ ಪೋಸ್ಟ್ಗೆ ಹಾರ್ಟ್ ಸಿಂಬಲ್ನ ಕಮೆಂಟ್ಗಳು ಹರಿದು ಬರುತ್ತಿದ್ದು, ಶ್ರೀದೇವಿ ಮತ್ತು ಅವರ ಮುದ್ದು ಫೋಟೋ ಮತ್ತು ಭಾವನಾತ್ಮಕ ಸಾಲುಗಳಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟ ನರೋತ್ತಮ್ ಚಂದ್ರವಂಶಿ ಜಾಹ್ನವಿಗೆ ಒಂದು ಸಲಹೆಯನ್ನು ನೀಡಿದ್ದು,"ಮುಂದಿನ ಬಾರಿ ನೀವು ಸೆಟ್‌ಗೆ ಹೋದಾಗ, ನಿಮ್ಮ ಶೇ 200ರಷ್ಟು ಫರ್ಫಾಮೆನ್ಸ್ ನೀಡಿ, ಅದೇ ನಿಮ್ಮ ತಾಯಿಗೆ ನೀವು ಕೊಡುವ ಮೊದಲ ಗೌರವ ಮತ್ತು ಪ್ರೀತಿ. ನೀವು ನಿಮ್ಮಿಂದಾಗುವ ಅತ್ಯುತ್ತಮ ಅಭಿನಯವನ್ನು ನೀಡಿ ತಾಯಿ ಅಲ್ಲಿಂದಲೇ ಇಷ್ಟ ಪಡುವಂತೆ. ಪ್ರೇಕ್ಷಕರು ನಿಮ್ಮಲ್ಲಿ ಅಮ್ಮನನ್ನು ಕಾಣುವಂತೆ ಅಭಿನಯಿಸಿ" ಎಂದಿದ್ದಾರೆ.
ಜಾನ್ವಿ ಮುಂದೆ ನಿತೇಶ್ ತಿವಾರಿ ಅವರ ಬವಾಲ್ ಚಿತ್ರದಲ್ಲಿ ವರುಣ್ ಧವನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ನಟ ರಾಜ್‌ಕುಮಾರ್ ರಾವ್ ಅವರೊಂದಿಗೆ ಮಿಸ್ಟರ್ ಅಂಡ್ ಮಿಸೆಸ್ ಮಹಿ ಎಂಬ ಕ್ರೀಡೆಗೆ ಸಂಬಂಧಿಸಿದ ಸಿನಿಮಾದಲ್ಲಿ ನಟಿಸಲಿದ್ದಾರೆ. ವರುಣ್ ಧವನ್ ಜೊತೆ ತೆರೆ ಹಂಚಿಕೊಂಡಿರುವ ಬವಾಲ್ ಏಪ್ರಿಲ್ 7ಕ್ಕೆ ಥಿಯೇಟರ್‌ಗಳಲ್ಲಿ ಬರಲಿದೆ. ಮಿಸ್ಟರ್ ಅಂಡ್ ಮಿಸೆಸ್ ಮಹಿಯ ಬಿಡುಗಡೆಯ ದಿನಾಂಕ ಇನ್ನೂ ಗೊತ್ತಾಗಿಲ್ಲ.
ಇದನ್ನೂ ಓದಿ:ಶಾರುಖ್ ಖಾನ್ ಮೇಲೆ ಎಫ್ಐಆರ್ ದಾಖಲಿಸುವುದಾಗಿ ಹೇಳಿದ ಅಭಿಮಾನಿ.. ಕಾರಣ ಏನು?