'ಪ್ರಾಜೆಕ್ಟ್ ಕೆ' ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಚಿತ್ರತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದೆ. ಜುಲೈ 19 (ನಾಳೆ) ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್- ಕಾನ್ ಈವೆಂಟ್ನಲ್ಲಿ (San Diego Comic-Con event) ಸಿನಿಮಾದ ಫಸ್ಟ್ ಗ್ಲಿಂಪ್ಸ್ ಅನಾವರಣಗೊಳ್ಳಲಿದೆ. ತಂಡವು ಇದು ಪ್ರಾಜೆಕ್ಟ್ ಕೆ: ಭಾರತದ ಮೈಥೋ-ಸೈನ್ಸ್-ಫಿಕ್ಷನ್ ಎಪಿಕ್‌ನ ಮೊದಲ ನೋಟ' ಎಂಬ ಶೀರ್ಷಿಕೆಯ ಕಾರ್ಯಕ್ರಮ ಆಯೋಜಿಸಲಿದೆ. ಚಿತ್ರದ ಪೂರ್ಣ ಶೀರ್ಷಿಕೆ, ಟೀಸರ್ ಮತ್ತು ಬಿಡುಗಡೆ ದಿನಾಂಕವನ್ನು ಈ ಗ್ರ್ಯಾಂಡ್ ಈವೆಂಟ್ನಲ್ಲಿ ಅಧಿಕೃತವಾಗಿ ಘೋಷಿಸಲಾಗುತ್ತದೆ.
ಅದಕ್ಕೂ ಮೊದಲು ಯುನೈಟೆಡ್ ಸ್ಟೇಟ್ಸ್‌ನ ಮಿಸ್ಸೌರಿಯ ಸೇಂಟ್ ಲೂಯಿಸ್‌ನಿಂದ ಸೂಪರ್‌ಸ್ಟಾರ್ ಪ್ರಭಾಸ್ ಅವರ ಅಭಿಮಾನಿಗಳು ಪ್ರಾಜೆಕ್ಟ್ ಕೆಗಾಗಿ ಕಾರ್ ರ್ಯಾಲಿಯನ್ನು ಆಯೋಜಿಸಲು ಒಗ್ಗೂಡಿದ್ದಾರೆ. ಈ ವಿಚಾರವು ಪ್ರಪಂಚದಾದ್ಯಂತ ಪ್ರಭಾಸ್ ಅವರ ಆಗಾಧ ಜನಪ್ರಿಯತೆಯನ್ನು ತೋರಿಸಿಕೊಟ್ಟಿದೆ. ಜೊತೆಗೆ ಅಭಿಮಾನಿಗಳು ಪ್ಯಾನ್ ಇಂಡಿಯಾ ಸ್ಟಾರ್ ಸಿನಿಮಾಗೆ ಈ ರೀತಿಯ ಉತ್ಸಾಹ ತೋರುತ್ತಿರುವುದು ಕಂಡುಬಂದಿದೆ.
ಮಂಗಳವಾರ, ಸಿನಿಮಾ ಪ್ರೊಡಕ್ಷನ್ ಹೌಸ್ ವೈಜಯಂತಿ ಮೂವೀಸ್ ಪ್ರಭಾಸ್ ಅವರ ಅಭಿಮಾನಿಗಳು ಆಯೋಜಿಸಿದ್ದ ಕಾರ್ ರ್ಯಾಲಿಯ ವಿಡಿಯೋವನ್ನು ಹಂಚಿಕೊಳ್ಳಲು ಯೂಟ್ಯೂಬ್ ವೇದಿಕೆಯನ್ನು ಬಳಸಿಕೊಂಡರು. ಪ್ರಭಾಸ್ ಅವರ ಅಭಿಮಾನಿಗಳ ಪ್ರಯತ್ನವನ್ನು ಶ್ಲಾಘಿಸಿ, "#ProjectK ಕಾರ್ ರ್ಯಾಲಿಯನ್ನು ಆಯೋಜಿಸಿದ್ದಕ್ಕಾಗಿ ರೆಬೆಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳಿಗೆ ಒಂದು ದೊಡ್ಡ ಅಭಿನಂದನೆ. ಮೊದಲ ಗ್ಲಿಂಪ್ಸ್ ಜುಲೈ 20(ಯುಎಸ್ಎ) ಮತ್ತು ಜುಲೈ 21 (ಭಾರತ)" ತಯಾರಕರು ಕ್ಯಾಪ್ಶನ್ ಬರೆದಿದ್ದಾರೆ.