ಮುಂಬೈ:ಅಂತು ಇಂತೂ ಹಲವು ವಿವಾದಗಳ ನಂತರ ಕಿಂಗ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರ ಇನ್ನೆರಡು ದಿನಗಳಲ್ಲಿ ತೆರೆ ಮೇಲೆ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಬರೋಬ್ಬರಿ 4 ವರ್ಷಗಳ ಕಾಯುವಿಕೆಯ ನಂತರ ಶಾರುಖ್ ಖಾನ್ ಅಭಿನಯದ ಚಿತ್ರ ತೆರೆಮೇಲೆ ಬರಲಿದೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ತೆರೆ ಮೇಲೆ ತಮ್ಮ ನೆಚ್ಚಿನ ನಟನ ಆ್ಯಕ್ಷನ್ ದೃಶ್ಯಗಳನ್ನು ನೋಡಲಿದ್ದಾರೆ.
ಶುಭಾಶಯ ಕೋರಿದ ಖಾನ್: ಚಿತ್ರಮಂದಿರಗಳಿಗೆ ತೆರಳಲು ಇನ್ನು ಎರಡು ದಿನ ಬಾಕಿ ಇರುವಾಗಲೇ ಶಾರುಖ್ ಖಾನ್ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಭಾನುವಾರ ಸಂಜೆ ಅವರ ಅಧಿಕೃತ ನಿವಾಸ ಮನ್ನತ್ ಗ್ಯಾಲರಿಯಿಂದ ಸಂತಸದ ಶುಭಾಶಯ ಕೋರಿ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಇನ್ನು ಶಾರೂಖ್ ಖಾನ್ ಅಭಿಮಾನಿಗಳಂತೂ ಅವರ ನಿವಾಸದ ಮುಂದೆ ಜಮಾಯಿಸಿ, ನೆಚ್ಚಿನ ನಟನೆಗೆ ಭರ್ಜರಿ ಬೆಂಬಲ ನೀಡಿದರು. ಶಾರುಖ್ ದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷ ಎಂದರೆ ಆ ವಿಡಿಯೋದಲ್ಲಿ ನಾವು ಶಾರುಖ್ ಖಾನ್ ಅವರ ಸಾವಿರಾರು ಅಭಿಮಾನಿಗಳು ಮನೆಯ ಮುಂದೆ ಜಮಾಯಿಸಿದ್ದರಿಂದ, ಭಾರಿ ಜನ ಸಾಗರದ ಮಧ್ಯ ಕೆಂಪು ಕಾರೊಂದು ಸಿಲುಕಿಕೊಂಡಿತ್ತು. ಇದೀಗ ಆ ಕಾರಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ದೃಷ್ಟಿಸಿದೆ. ಶಾರುಖ್ ಖಾನ್ ಶುಭಾಶಯ ಕೋರಿರುವ ವಿಡಿಯೋ ಹರಿ ಬಿಟ್ಟಿರುವ ನಡುವೆ, ಅದರಲ್ಲಿ ಈ ಕೆಂಪು ಕಾರಿನ ಕುರಿತಾಗಿ ಕಮೆಂಟ್ ಕೂಡ ಬರೆದು ಹಾಕಿಕೊಂಡಿದ್ದಾರೆ. ಅದೇನೆಂದರೆ, " ಒಂದು ಸುಂದರವಾದ ಭಾನುವಾರದ ಸಂಜೆಗೆ ಧನ್ಯವಾದಗಳು....ಕ್ಷಮಿಸಿ ನನ್ನ ಅಭಿಮಾನಿಗಳ ನಡುವೆ ಸಿಲುಕಿಕೊಂಡ ಕಾರಿನ ಸವಾರರು ಸೀಟ್ನ ಬೆಲ್ಟ್ ಹಾಕಿಕೊಂಡಿರುತ್ತಾರೆಂದು ನಾನು ಭಾವಿಸಿರುತ್ತೇನೆ, ಪಠಾಣ್ಗಾಗಿ ನಿಮ್ಮ ಟಿಕೆಟ್ಗಳನ್ನು ಬುಕ್ ಮಾಡಿ ಮತ್ತು ನಾನು ನಿಮ್ಮನ್ನು ಇನ್ನೊಮ್ಮೆ ಕಾಣಲಿದ್ದೇನೆ ಎಂದು" ಎಂದು ಟ್ವೀಟಿಸಿದ್ದಾರೆ.