ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬಕ್ಕೂ ಮೊದಲು, ಅವರ ಮುಂಬರುವ ಹಾರರ್ ಕಾಮಿಡಿ ಚಿತ್ರ 'ಫೋನ್ ಭೂತ್'ನ ಹೊಸ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಕತ್ರಿನಾ ಮಾಲ್ಡೀವ್ಸ್‌ಗೆ ಹೊರಟಿದ್ದಾರೆ. ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಒಳಗೊಂಡ ಮೋಷನ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸೂರ್ಯವಂಶಿ ನಟ ತಮ್ಮ ಮುಂಬರುವ ಚಿತ್ರದ ಪೋಸ್ಟರ್ನನ್ನು ಹಂಚಿಕೊಂಡಿದ್ದಾರೆ. "ಭೂತೋನ್ ಕಿ ದುನಿಯಾ ಸೆ ನಾಟ್ ಔಟ್. ಫೋನ್ ಭೂತ್ ಅಕ್ಟೋಬರ್ 7 ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. #EkBhayanakComedy" ಸ್ಪೂಕಿ ಮೋಷನ್ ಪೋಸ್ಟರ್‌ನಲ್ಲಿ, ಇಶಾನ್ ಅವರು ಅಸ್ಥಿಪಂಜರದೊಂದಿಗೆ ವಿಚಿತ್ರವಾದ ಭಂಗಿಯಲ್ಲಿ ಕೂತಿದ್ದಾರೆ. ಆದರೆ, ಸಿದ್ದಾಂತ್ ಸಂಪೂರ್ಣ ನಗು ಮುಖದೊಂದಿಗೆ, ಅಸ್ಥಿಪಂಜರದೊಂದಿಗೆ ಕುಳಿತಿರುವುದನ್ನು ಕಾಣಬಹುದಾಗಿದೆ.