ಕರ್ನಾಟಕ

karnataka

ETV Bharat / entertainment

76ನೇ ಕಾನ್​ ಚಲನಚಿತ್ರೋತ್ಸವ: ಅನುಷ್ಕಾ ವಿರಾಟ್​ ಜೋಡಿ ಮುಂಬೈ ಟು ಫ್ರಾನ್ಸ್ ಪ್ರಯಾಣ - ETV Bharath Kannada news

ಅನುಷ್ಕಾ ವಿರಾಟ್​ ಜೋಡಿ 76ನೇ ಕಾನ್​ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಇಂದು ಮುಂಬೈನಿಂದ ಫ್ರಾನ್ಸ್​ಗೆ ಪ್ರಯಾಣ ಬೆಳೆಸಿದ್ದಾರೆ.

Ahead of Cannes debut, Anushka Sharma nails chic airport look as she gets spotted with Virat Kohli
76ನೇ ಕಾನ್​ ಚಲನಚಿತ್ರೋತ್ಸವ: ಅನುಷ್ಕಾ ವಿರಾಟ್​ ಜೋಡಿ ಮುಂಬೈ ಟು ಫ್ರಾನ್ಸ್ ಪ್ರಯಾಣ

By

Published : May 24, 2023, 4:24 PM IST

ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು 76 ನೇ ಕಾನ್​ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಬುಧವಾರ ಮುಂಬೈನಿಂದ ಪ್ರಯಾಣ ಬೆಳೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಮಾಜಿಕ ಜಾಲತಾಣದ ಸುದ್ದಿ ಬರಹಗಾರರು ಅವರ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ವೈರಲ್​ ಮಾಡಿದ್ದಾರೆ. ಪಾಪರಾಜಿಗಳು ಫೋಟೋಗಾಗಿ ಬೇಡಿಕೆ ಇಟ್ಟಾಗ ಇಬ್ಬರು ಒಟ್ಟಿಗೆ ನಿಂತು ಛಾಯಾಚಿತ್ರಕ್ಕೆ ಪೋಸ್​ ಕೊಟ್ಟಿದ್ದಾರೆ.

ಟರ್ಮಿನಲ್ ಕಟ್ಟಡದ ಒಳಗೆ ಹೋಗುವ ಮೊದಲು ಇಬ್ಬರೂ ವಿಮಾನ ನಿಲ್ದಾಣದಲ್ಲಿ ಇದ್ದ ಪಾಪರಾಜಿಗಳಿಗೆ ನಗುತ್ತಾ ಪೋಸ್ ನೀಡಿದ್ದು, ಅದರಲ್ಲಿ ಅನುಷ್ಕಾ ಬ್ಲೇಜರ್ ಮತ್ತು ಬಿಳಿ ಟಿ-ಶರ್ಟ್, ಡೆನಿಮ್ಸ್ ಮತ್ತು ಸ್ನೀಕರ್ಸ್ ಧರಿಸಿದ್ದರು. ಅನುಷ್ಕಾ ಸನ್​ಗ್ಲಾಸ್​ ಸಹ ಧರಿಸಿದ್ದರು. ವಿರಾಟ್ ಕಪ್ಪು ಸ್ವೆಟ್‌ಶರ್ಟ್, ಮ್ಯಾಚಿಂಗ್ ಟ್ರೌಸರ್ ಮತ್ತು ಸ್ನೀಕರ್‌ಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಬಿಳಿ ಕ್ಯಾಪ್​ನ್ನು ಹಾಕಿಕೊಂಡಿದ್ದರು. ಫ್ರಾನ್ಸ್​​ನಲ್ಲಿ ನಡೆಯುತ್ತಿರುವ 76 ನೇ ಕಾನ್​ ಚಲನಚಿತ್ರೋತ್ಸಕ್ಕೆ ಪ್ರಯಾಣ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅನುಷ್ಕಾ ಶರ್ಮಾ ಇನ್​ಸ್ಟಾಗ್ರಾಂ ಸ್ಟೋರಿ

ಪ್ರತಿಷ್ಠಿತ ಕಾನ್​ ಚಿತ್ರೋತ್ಸವ ಇದೇ ತಿಂಗಳ 16 ರಂದು ಪ್ರಾರಂಭವಾಗಿದ್ದು, 27ರ ವರೆಗೆ ನಡೆಯಲಿದೆ. ಈಗಾಗಲೇ ಈ ಚಿತ್ರೋತ್ಸವದಲ್ಲಿ ಬಾಲಿವುಡ್​ನ ನಟಿಯರು ಭಾಗವಹಿಸಿದ್ದಾರೆ. ನಟಿ ಐಪಿಎಲ್​ ಸಂದರ್ಭದಲ್ಲಿ ವಿರಾಟ್​ ಜೊತೆಗೆ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಇಬ್ಬರು ಇಂದು ಕಾನ್​ ಚಿತ್ರೋತ್ಸವಕ್ಕೆ ತೆರಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಮಾನ ನಿಲ್ದಾಣದ ಒಳಗಿನಿಂದ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ನಟಿ ಯಾವುದೇ ಮೇಕಪ್ ಮಾಡದ ನೋಟವನ್ನು ಹೊಂದಿದ್ದು, ಅವರು ಕುರ್ಚಿಯ ಮೇಲೆ ಕುಳಿತು ಸೂರ್ಯ ರಶ್ಮಿ ತನ್ನತ್ತ ಬೀರುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋಗೆ "ಬೆಳಗ್ಗೆ ಸೂರ್ಯನ ಬೆಳಕನ್ನು ಪಡೆದುಕೊಳ್ಳಿ" ಎಂದು ಬರೆದುಕೊಂಡಿದ್ದು, ಸೂರ್ಯ ಕಾಂತಿಯ ಎಮೋಜಿಯನ್ನು ಕೊನೆಯಲ್ಲಿ ಬಳಸಿದ್ದಾರೆ.

ಕಮೆಂಟ್​ನಲ್ಲಿ ಲಂಡನ್​ಗೆ ಇಬ್ಬರು ತೆರೆಳುತ್ತಿದ್ದಾರೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಅಂದರೆ ವಿರಾಟ್​ ಕೊಹ್ಲಿ ಜೂನ್​ 7 ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ಗಾಗಿ ಪ್ರಯಾಣ ಬೆಳೆಸುತ್ತಿದ್ದು, ಇಬ್ಬರು ಒಟ್ಟಿಗೆ ಹೊಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಕೆಲವರು ಕಾನ್​ ಚಿತ್ರೋತ್ಸವಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ಇಬ್ಬರ ಪ್ರಯಾಣ ಎಲ್ಲಿಗೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಸ್ಟಾರ್​ ದಂಪತಿ ಈ ಬಗ್ಗೆ ಯಾವುದೇ ವಿಚಾರಗಳನ್ನು ಹಂಚಿಕೊಂಡಿಲ್ಲ.

ಅನುಷ್ಕಾ ಶರ್ಮಾ ಅವರು ಅವರ ಚಿತ್ರ ವೃತ್ತಿ ಜೀವನದಲ್ಲಿ ಕ್ರೀಡಾ ಬಯೋಪಿಕ್ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೋಸಿತ್ ರಾಯ್ ನಿರ್ದೇಶನದ ಈ ಚಿತ್ರವು ಮಾಜಿ ಭಾರತೀಯ ಮಹಿಳಾ ಕ್ರಿಕೆಟರ್​ ಜೂಲನ್ ಗೋಸ್ವಾಮಿ ಅವರ ಜೀವನವನ್ನು ಆಧರಿಸಿದ ಕ್ರೀಡಾ ಜೀವನದ ಕಥೆಯನ್ನು ಆಧರಿಸಿದೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಆಗಲಿದೆ.

ಇದನ್ನೂ ಓದಿ:'ನನ್ನ ಕೈಯಿಂದ ಸಿಗರೇಟ್‌ ಕಿತ್ತು ಬಿಸಾಡಿದ್ದರು': ಶರತ್ ಬಾಬು ಬಗ್ಗೆ ರಜನಿಕಾಂತ್ ಭಾವುಕ ನುಡಿ

ABOUT THE AUTHOR

...view details