ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಸೇರಿದಂತೆ ಆಯಾ ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ನಾಲ್ಕು ದಿನಕ್ಕೆ ಬರೋಬ್ಬರಿ ₹546 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಕನ್ನಡದ ಮೊಟ್ಟ ಮೊದಲ ಹಾಗೂ ಹಿಂದಿಯಲ್ಲಿ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸದ್ಯ ಕೆಜಿಎಫ್ ಚಾಪ್ಟರ್ 2 ಸಕ್ಸಸ್ ಖುಷಿಯಲ್ಲಿರೋ, ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು?. ಯಶ್ ಸಿನಿಮಾ ಮಾಡಿದರೆ ಕನ್ನಡದಲ್ಲೇ ಮಾಡ್ತಾರಾ ಅಥವಾ ಹಿಂದಿ, ತೆಲುಗಿನಲ್ಲಿ ಮಾಡ್ತಾರಾ? ಯಾವ ನಿರ್ದೇಶಕನ ಜೊತೆ ಯಶ್ ಮುಂದಿನ ಚಿತ್ರ?. ಅದು ಪ್ಯಾನ್ ಇಂಡಿಯಾ ಸಿನಿಮಾನಾ ಎಂಬ ಟಾಕ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಆಗುತ್ತಿದೆ.
ಸದ್ಯ ಗಾಂಧಿನಗರದಲ್ಲಿ ಸಿನಿಮಾ ಪಂಡಿತರು ಹೇಳುವ ಪ್ರಕಾರ, ಯಶ್ ಒಬ್ಬ ಕನ್ನಡದ ನಿರ್ದೇಶಕನ ಜೊತೆ ಸಿನಿಮಾ ಮಾಡುವ ಮಾತುಕಥೆ ಆಗಿದೆಯಂತೆ. ಹಾಗಾದ್ರೆ, ಯಾರು ನಿರ್ದೇಶಕ ಅಂತೀರಾ, ಅವರೇ ನರ್ತನ್. ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಜೊತೆ ರಾಕಿ ಬಾಯ್ ಸಿನಿಮಾ ಮಾಡೋದು ಪಕ್ಕಾ ಎನ್ನಲಾಗುತ್ತಿದೆ.
ಒಂದು ಇಂಟ್ರಸ್ಟ್ರಿಂಗ್ ವಿಚಾರ ಅಂದ್ರೆ, ಈ ಸಿನಿಮಾವನ್ನ ಸ್ವತಃ ಯಶ್ ಪ್ರೊಡಕ್ಷನ್ ಹೌಸ್ ಓಪನ್ ಮಾಡುವ ಮೂಲಕ ನಿರ್ಮಾಣ ಸಂಸ್ಥೆಯನ್ನ ಹುಟ್ಟು ಹಾಕಲು ರೆಡಿಯಾಗಿದ್ದಾರಂತೆ. ಈ ಸಿನಿಮಾವನ್ನು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರಂತೆ. ಈ ಹಿಂದೆ ತಮಿಳಿನ ಫೇಮಸ್ ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು.