ಕರ್ನಾಟಕ

karnataka

ETV Bharat / entertainment

ಮತ್ತೊಂದು ನೈಜ ಘಟನಾಧಾರಿತ ಸಿನಿಮಾ ಮಾಡಲು ಮುಂದಾದ 'ದಿ ಕೇರಳ ಸ್ಟೋರಿ' ನಿರ್ದೇಶಕ ಸುದೀಪ್ತೋ ಸೇನ್

'ದಿ ಕೇರಳ ಸ್ಟೋರಿ' ನಿರ್ದೇಶಕ ಸುದೀಪ್ತೋ ಸೇನ್​ ತಮ್ಮ ಮುಂದಿನ ಸಿನಿಮಾ 'ಬಸ್ತರ್​' ಅನ್ನು ಘೋಷಿಸಿದ್ದಾರೆ.

Bastar
ಬಸ್ತರ್​

By

Published : Jun 26, 2023, 7:48 PM IST

ಸಾಕಷ್ಟು ವಿವಾದಗಳ ನಡುವೆ ಬಿಡುಗಡೆಗೊಂಡು ಸೂಪರ್​ ಹಿಟ್ ಆದ​ ಸಿನಿಮಾ 'ದಿ ಕೇರಳ ಸ್ಟೋರಿ'. ಇದೇ ಚಿತ್ರದ ನಿರ್ದೇಶಕರು ಸದ್ಯ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಸುದೀಪ್ತೋ ಸೇನ್​ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದು, 'ಬಸ್ತರ್​' ಅನ್ನು ಘೋಷಿಸಿದ್ದಾರೆ. ನೈಜ ಘಟನಾಧಾರಿತ ಸಿನಿಮಾ ಮಾಡಲು ಮತ್ತೊಮ್ಮೆ ಮುಂದಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, "ನಮ್ಮ ಮುಂದಿನ ಸಿನಿಮಾ 'ಬಸ್ತರ್'​. ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವ ಮತ್ತೊಂದು ಹಿಡಿತದ ಸತ್ಯ ಘಟನೆಗೆ ಸಾಕ್ಷಿಯಾಗಲು ಸಿದ್ಧರಾಗಿರಿ. ಏಪ್ರಿಲ್​ 5, 2024 ಅನ್ನು ನಿಮ್ಮ ಕ್ಯಾಲೆಂಡರ್​ನಲ್ಲಿ ಗುರುತಿಸಿ" ಎಂದಿದ್ದಾರೆ. 'ಬಸ್ತರ್​' ಚಿತ್ರದ ಪೋಸ್ಟರ್​ ಅನ್ನು ಶಾನ್​ ಸನ್​ಶೈನ್​ ಪಿಕ್ಚರ್ಸ್​ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಮತ್ತೆ ಸುದೀಪ್ತೋ ಸೇನ್​ ಹಾಗೂ ವಿಪುಲ್​ ಅಮೃತ್​ಲಾಲ್​ ಶಾ ಒಂದಾಗಿದ್ದಾರೆ.

2023ರ ಸೂಪರ್​ ಹಿಟ್​ ಚಿತ್ರ 'ದಿ ಕೇರಳ ಸ್ಟೋರಿ'​:'ದಿ ಕೇರಳ ಸ್ಟೋರಿ' ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ಚಿತ್ರಗಳಲ್ಲಿ ಒಂದು. ಇದನ್ನು ಕೆಲವರು 'ಪ್ರಚಾರದ ಚಿತ್ರ' ಎಂದು ಕರೆದರೆ, ಹಲವರು ಚಿತ್ರದ ಕಥೆಗಾಗಿ ಹೊಗಳಿದರು. ಟೀಕಾ ಸಮರ, ಟ್ರೋಲ್ ದಾಳಿ​​ ಹೀಗೆ ವಿವಾದಕ್ಕೊಳಗಾಗಿರುವ 'ದಿ ಕೇರಳ ಸ್ಟೋರಿ'ಯ ಬಾಕ್ಸ್​ ಆಫೀಸ್​ ಅಂಕಿ- ಅಂಶ ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಚಿತ್ರವು ಸುಮಾರು 250 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿದ್ದು, 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್​​ ಮಾಡಿದ 2ನೇ ಹಿಂದಿ ಸಿನಿಮಾ ಇದಾಗಿದೆ.

ಇದನ್ನೂ ಓದಿ:Sudeep nephew Sanchith: ಸ್ಯಾಂಡಲ್​ವುಡ್​ಗೆ 'ಜೂನಿಯರ್​ ಕಿಚ್ಚ' ಎಂಟ್ರಿ; ಸಂಚಿತ್​ ಚೊಚ್ಚಲ ಸಿನಿಮಾಗೆ ಸ್ಟಾರ್​ ನಟರ ಬೆಂಬಲ

ಸುದಿಪ್ತೋ ಸೇನ್ ನಿರ್ದೇಶನದ ಚಿತ್ರದಲ್ಲಿ ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ ಮತ್ತು ಸಿದ್ಧಿ ಇದ್ನಾನಿ ತಾರಾಬಳಗದಲ್ಲಿದ್ದಾರೆ. ವಿಪುಲ್ ಅಮೃತಲಾಲ್ ಶಾ ಚಿತ್ರ ನಿರ್ಮಿಸಿದ್ದಾರೆ. ಕಳೆದ ತಿಂಗಳು ಮೇ 5 ರಂದು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಂಡಿತ್ತು. ಬಿಡುಗಡೆಯಾಗಿ ಎರಡು ತಿಂಗಳು ಸಮೀಪಿಸುತ್ತಿದ್ದರೂ ಸಹ, ಈ ಚಿತ್ರದ ಕ್ರೇಜ್​ ಹಾಗೆಯೇ ಇದೆ.

ಚಿತ್ರಕಥೆ ಏನು?: ಯುವತಿಯರನ್ನು ಇಸ್ಲಾಂಗೆ ಮತಾಂತರಗೊಳ್ಳಲು ಬ್ರೈನ್‌ವಾಶ್ ಮಾಡಿ ಸಿರಿಯಾಕ್ಕೆ ಕಳುಹಿಸಲ್ಪಟ್ಟ ಮೂವರು ಮಹಿಳೆಯರ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ಐಸಿಸ್ ಭಯೋತ್ಪಾದಕ ಸಂಘಟನೆಗೆ ಮಹಿಳೆಯರನ್ನು ಬಲವಂತವಾಗಿ ಸೇರಿಸಿದ ವಿಷಯವನ್ನು ಚಿತ್ರದ ಕಥೆ ಆಧರಿಸಿದೆ. ಮತಾಂತರ ವಿಷಯವನ್ನಾಧರಿಸಿದ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜಕಾರಣಿಗಳು, ಕೆಲವು ಗಣ್ಯರೂ ಸೇರಿದಂತೆ ಪ್ರೇಕ್ಷಕರು 'ದಿ ಕೇರಳ ಸ್ಟೋರಿ' ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:Spy movie: ಬೋಸ್ ಸಾವಿನ ರಹಸ್ಯದ 'ಸ್ಪೈ' ಸಿನಿಮಾ ಪ್ರಚಾರ: ಬೆಂಗಳೂರಿನಲ್ಲಿ ನಿಖಿಲ್​ ಸಿದ್ದಾರ್ಥ್, ಐಶ್ವರ್ಯ ಮೆನನ್

ABOUT THE AUTHOR

...view details